For Quick Alerts
  ALLOW NOTIFICATIONS  
  For Daily Alerts

  ಗರ್ಭಿಣಿ ಆಗಿದ್ದ ವಿಷಯ ಮುಚ್ಚಿಟ್ಟಿದ್ದರಂತೆ ಈ ಸ್ಟಾರ್ ನಟಿ

  |

  ತಾಯ್ತನ ಎಂಬುದು ಸಂಭ್ರಮಿಸುವ ವಿಷಯ ಆದರೆ ಕೆಲವರಿಗೆ ಅದು ಗೌಪ್ಯವಾದದ್ದು. ನಟಿಯರಂತೂ ತಾಯ್ತನವಿರಲಿ, ಮದುವೆ ಆಗಿರುವುದನ್ನೂ ಮುಚ್ಚಿಟ್ಟು ಬದುಕಿರುವ ಉದಾಹರಣೆಗಳು ಇವೆ.

  ಹೀಗೆಯೇ ಬಾಲಿವುಡ್‌ನ ಖ್ಯಾತ ನಟಿಯೊಬ್ಬರು ತಾವು ತಾಯಿ ಆಗುತ್ತಿರುವುದನ್ನು ಚಿತ್ರತಂಡಕ್ಕೆ ಹೇಳದೆ ಮುಚ್ಚಿಟ್ಟಿದ್ದರಂತೆ. ಅಷ್ಟು ಮಾತ್ರವಲ್ಲ ಕುಟುಂಬದವರೊಂದಿಗೆ, ಗೆಳೆಯರಿಗೂ ಹೇಳಿರಲಿಲ್ಲವಂತೆ.

  ತಮ್ಮ ತಾಯ್ತನದ ಬಗ್ಗೆ ಮುಂಬೈ ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಟಿ ನೇಹಾ ದೂಪಿಯಾ ಈ ಸತ್ಯವನ್ನು ಹೇಳಿದ್ದಾರೆ.

  ಗರ್ಭಿಣಿ ಆಗಿರುವುದನ್ನು ಯಾರಿಗೂ ಹೇಳಿರಲಿಲ್ಲ: ನೇಹಾ

  ಗರ್ಭಿಣಿ ಆಗಿರುವುದನ್ನು ಯಾರಿಗೂ ಹೇಳಿರಲಿಲ್ಲ: ನೇಹಾ

  'ನಾನು ಗರ್ಭಿಣಿ ಆಗಿರುವುದನ್ನು ಚಿತ್ರತಂಡದೊಂದಿಗೆ ಹೇಳಿಕೊಂಡಿರಲಿಲ್ಲ, ಆದರೆ ಅವರಿಗೆ ಅನುಮಾನ ಬಂದಿತ್ತು'' ಎಂದು ಹೇಳಿದ್ದಾರೆ.

  ಸೆಟ್‌ನಲ್ಲಿದ್ದವರಿಗೆ ಅನುಮಾನ ಬಂದಿತ್ತು: ನೇಹಾ

  ಸೆಟ್‌ನಲ್ಲಿದ್ದವರಿಗೆ ಅನುಮಾನ ಬಂದಿತ್ತು: ನೇಹಾ

  ''ಫಿಟ್‌ನೆಸ್‌ ಬಗ್ಗೆ ಅತಿಯಾಗಿ ಗಮನವಹಿಸುತ್ತಿದ್ದ ನಾನು ಸೆಟ್‌ನಲ್ಲಿ ಇದ್ದಕ್ಕಿದ್ದಂತೆ ಚೆನ್ನಾಗಿ ತಿನ್ನಲು ಆರಂಭಿಸಿದೆ, ಇದರಿಂದ ಸೆಟ್‌ನಲ್ಲಿದ್ದವರಿಗೆ ನನ್ನ ಮೇಲೆ ಅನುಮಾನ ಬಂದಿತ್ತು'' ಎಂದು ನೇಹಾ ದೂಪಿಯಾ ಹೇಳಿದ್ದಾರೆ.

  2018 ರಲ್ಲಿ ಮದುವೆ ಆಗಿದ್ದ ನೇಹಾ ದೂಪಿಯಾ

  2018 ರಲ್ಲಿ ಮದುವೆ ಆಗಿದ್ದ ನೇಹಾ ದೂಪಿಯಾ

  ನೇಹಾ ದೂಪಿಯಾ ಅವರು 2018 ರ ಮೇ 10 ರಂದು ನಟ ಅಂಗದ್ ಬೇಡಿ ಅವರನ್ನು ಸರಳವಾಗಿ, ಕೆಲವೇ ಮಂದಿಯ ಉಪಸ್ಥಿತಿಯಲ್ಲಿ ಮದುವೆಯಾದರು. ಅದೇ ವರ್ಷ ನವೆಂಬರ್ 18 ಕ್ಕೆ ಅವರು ಹೆಣ್ಣು ಮಗುವಿನ ತಾಯಾದರು.

  ತಾಯ್ತನವನ್ನು ಎಂಜಾಯ್ ಮಾಡಿದ್ದೆ: ನೇಹಾ

  ತಾಯ್ತನವನ್ನು ಎಂಜಾಯ್ ಮಾಡಿದ್ದೆ: ನೇಹಾ

  ನನ್ನ ತಾಯ್ತನವನ್ನು ನಾನು ಬಹಳವಾಗಿ ಎಂಜಾಯ್ ಮಾಡಿದೆ ಎಂದಿರುವ ನೇಹಾ ದೂಪಿಯಾ, 10-15 ವರ್ಷದಿಂದ ಏನೇನು ತಿನ್ನಲು ಸಾಧ್ಯವಾಗಿರಲಿಲ್ಲವೋ ಅದನ್ನೆಲ್ಲಾ ತಿಂದು ಆಸೆ ಪೂರೈಸಿಕೊಂಡಿದ್ದೆ. ತಾಯ್ತನವೊಂದು ಅತ್ಯುತ್ತಮ ಅನುಭೂತಿ ಎಂದು ದೂಪಿಯಾ ಹೇಳಿದ್ದಾರೆ.

  English summary
  Actress Neha Dhupia talked about her pregnancy. She said i did not tell any one that i am pregnant at first.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X