For Quick Alerts
  ALLOW NOTIFICATIONS  
  For Daily Alerts

  ರಣಬೀರ್‌ ಕಪೂರ್‌ ಮಾಡಿದ ಈ ಕೆಲಸದಿಂದ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ

  |

  ಕನ್ನಡದ 'ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ನ್ಯಾಶನಲ್‌ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಟಾಲಿವುಡ್‌ ಮಾತ್ರವಲ್ಲದೇ ರಶ್ಮಿಕಾ ಬಾಲಿವುಡ್‌ನಲ್ಲೂ ಕಮಾಲ್‌ ಮಾಡುತ್ತಿದ್ದು, ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ.

  ಸದ್ಯ ಸಾಲು ಸಾಲು ಬಿಗ್‌ ಬಜೆಟ್‌ ಚಿತ್ರಗಳಲ್ಲೇ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಜೂನಿಯರ್ ಎನ್‌ಟಿಆರ್‌ ಜೊತೆಗೂ ಸದ್ಯದಲ್ಲೇ ಸ್ಕ್ರೀನ್ ಶೇರ್‌ ಮಾಡಲಿದ್ದಾರೆ. ಇನ್ನು ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ನಟಿಸಿರುವ 'ಮಿಷನ್ ಮಜ್ನು' ಚಿತ್ರ ತೆರೆ ಕಾಣಲು ಸಜ್ಜಾಗಿದೆ.

  ಮಾಲ್ಡೀವ್ಸ್‌ಗೆ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ರೊಮ್ಯಾಂಟಿಕ್ ಟೂರ್? ಏರ್‌ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೇಗೆ?ಮಾಲ್ಡೀವ್ಸ್‌ಗೆ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ರೊಮ್ಯಾಂಟಿಕ್ ಟೂರ್? ಏರ್‌ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೇಗೆ?

  ಈಗಾಗಲೇ ಬಿಟೌನ್‌ಗೆ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ ಈಗಾಗಲೇ ಬಿಗ್ ಬಿ ಅಮಿತಾಭ್‌ ಬಚ್ಚನ್‌ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅಮಿತಾಭ್‌ ಬಚ್ಚನ ಜೊತೆ ನಟಿಸಿರುವ 'ಗುಡ್‌ ಬೈ' ಚಿತ್ರ ಈಗಾಗಲೇ ತೆರೆಕಂಡಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಲಿವುಡ್‌ನಲ್ಲಿ ರಶ್ಮಿಕಾ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಸದ್ಯ ರಣಬೀರ್ ಕಪೂರ್‌ ಚಿತ್ರದಲ್ಲಿ ನಟಿಸುತ್ತಾರೆ.

  ಬ್ರಹ್ಮಾಸ್ತ್ರ ಚಿತ್ರದ ಯಶಸ್ಸಿನ ಬಳಿಕ ರಣಬೀರ್ ಕಪೂರ್ 'ಅನಿಮಲ್‌' ಎಂಬ ಶೀರ್ಷಿಕೆಯ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ. ಈಗಾಗಲೇ 'ಅನಿಮಲ್‌' ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಚಿತ್ರ ಬಹುದೊಡ್ಡ ಮಟ್ಟದಲ್ಲಿ ಸೆಟ್ಟೇರಿದೆ.

  'ಅನಿಮಲ್‌' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದ್ದು, ಚಿತ್ರೀಕರಣದಲ್ಲಿ ನಡೆದ ಘಟನೆಯೊಂದು ರಶ್ಮಿಕಾ ಮಂದಣ್ಣ ಅವರು ಕಣ್ಣೀರು ಹಾಕುವಂತೆ ಮಾಡಿದೆ ಎಂದು ಸ್ವತಃ ನಟಿಯೇ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದದಲ್ಲಿ ರಶ್ಮಿಕಾ ಈ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾಗೆ 'ಅನಿಮಲ್‌' ಚಿತ್ರದ ಸೆಟ್‌ನಲ್ಲಿ ನೀಡುವ ಉಪಹಾರದ ಬಗ್ಗೆ ದೂರಿದ್ದು, ಆಕೆ ಈ ವಿಚಾರವನ್ನು ರಣಬೀರ್‌ ಕಪೂರ ಅವರ ಬಳಿ ಹೇಳಿಕೊಂಡಿದ್ದರಂತೆ.

   ವಿಜಯ್ ದೇವರಕೊಂಡಗೆ ಕಿಸ್‌ ಮಾಡಿ ಬಹಳ ಕಷ್ಟ ಅನುಭವಿಸಿದೆ: ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡಗೆ ಕಿಸ್‌ ಮಾಡಿ ಬಹಳ ಕಷ್ಟ ಅನುಭವಿಸಿದೆ: ರಶ್ಮಿಕಾ ಮಂದಣ್ಣ

  'ಅನಿಮಲ್' ಸಿನಿಮಾದ ಚಿತ್ರೀಕರಣದಲ್ಲಿದ್ದಾಗ, ನನ್ನ ಬ್ರೇಕ್‌ಫಾಸ್ಟ್ 'ಕಿತನಾ ಬೋರಿಂಗ್‌ ಹೇ', ತುಂಬಾ ಬೋರಿಂಗ್ ಎಂದು ರಣಬೀರ್‌ ಕಪೂರ್‌ ಅವರ ಬಳಿ ದೂರು ನೀಡಿದ್ದೆ. ಮಾರನೇ ದಿನ ಅವರು ನನಗೆ ಆಶ್ಚರ್ಯ ಉಂಟುಮಾಡಿದ್ದರು. ಮಾರನೇ ದಿನ ರಣಬೀರ್ ಕಪೂರ್ ನನಗೆ ರುಚಿಕರವಾದ ಉಪಹಾರವನ್ನು ತಂದಿದ್ದರು. ಬಾಣಸಿಗರಿಗೆ ಹೇಳಿ ನನಗಾಗಿ ಅಡುಗೆಗಳನ್ನು ಮಾಡಿಸಿದ್ದರು. ರಣಬೀರ್ ಕಪೂರ್ ಅವರು ನನ್ನ ಮೇಲೆ ಇರಿಸಿರುವ ಕಾಳಜಿ ನೋಡಿ ನಾನು ಕಣ್ಣೀರಿಟ್ಟಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ .

  ರಶ್ಮಿಕಾ ಮಂದಣ್ಣ ಅವರ ದೂರನ್ನು ಗಂಭೀರವಾಗಿ ಸ್ವೀಕರಿಸಿರುವ ರಣಬೀರ್‌ ಕಪೂರ್‌ ಅವರಿಗಾಗಿ ಸಮಯ ಮೀಸಲಿಟ್ಟು ರುಚಿಕರವಾದ ಬ್ರೇಕ್‌ಫಾಸ್ಟ್ ತಂದಿದಕ್ಕೆ ರಶ್ಮಿಕಾ ಮಂದಣ್ಣ ಭಾವುಕರಾಗಿದ್ದಾರೆ. ಸಹ ನಟರ ಕಾಳಜಿ ನೋಡಿ ರಶ್ಮಿಕಾ ಮಂದಣ್ಣ ಸಂತೋಷ ವ್ಯಕ್ತಪಡಿಸಿದ್ದಾರೆ.

  ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ 'ಅನಿಮಲ್‌' ಚಿತ್ರದಲ್ಲಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ 'ಅನಿಮಲ್‌' ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರದಲ್ಲಿ ಅನಿಲ್‌ ಕಪೂರ್‌ ಮತ್ತು ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ. ಪ್ರೇಕ್ಷರಲ್ಲಿ ಕುತೂಹಲ ಮೂಡಿಸಿರುವ 'ಅನಿಮಲ್‌' ಚಿತ್ರ 2023ರ ಆಗಸ್ಟ್ 11 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  English summary
  Actress Rashmika Mandanna cried because of Ranbir Kapoor for this reason at Animal movie set.
  Saturday, October 8, 2022, 17:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X