For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿಗೆ ಬಿಗ್ ಆಫರ್: ದ್ರೌಪದಿ ಆಗ್ತಾರಾ ಸುಶಾಂತ್ ಪ್ರೇಯಸಿ?

  |

  ಭಾರತದ ಮೋಸ್ಟ್ ಡಿಸೈರಬಲ್ ವುಮೆನ್ ಆಗಿ ಹೊರಹೊಮ್ಮಿರುವ ನಟಿ, ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಬೆನ್ನಲ್ಲೇ ಸಿನಿಮಾ ಆಫರ್ ಗಳು ಕೂಡ ಜಾಸ್ತಿ ಆಗಿದೆ.

  ಇದೀಗ ಪೌರಾಣಿಕ ಸಿನಿಮಾದಲ್ಲಿ ನಟಿಸಲು ಅವಕಾಶ ಒದಗಿ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಪೌರಾಣಿಕ ಚಿತ್ರಗಳಲ್ಲಿ ನಟಿಸಲು ಅನೇಕ ಕಲಾವಿದರು ತುದಿಗಾಲಿನಲ್ಲಿ ನಿಂತಿರುತ್ತಾರೆ, ಅನೇಕ ನಟಿಯರ ದೊಡ್ಡ ಕನಸಾಗಿರುತ್ತೆ. ಈಗ ಅಂಥ ದೊಡ್ಡ ಅವಕಾಶ ರಿಯಾಗೆ ಒದಗಿಬಂದಿದೆ. ಮಹಾಭಾರತ ಚಿತ್ರದಲ್ಲಿ ನಟಿಸಲು ರಿಯಾಗೆ ಆಫರ್ ಮಾಡಲಾಗಿದೆ. ಮುಂದೆ ಓದಿ..

  ದ್ರೌಪದಿ ಪಾತ್ರಕ್ಕೆ ರಿಯಾಗೆ ಆಫರ್

  ದ್ರೌಪದಿ ಪಾತ್ರಕ್ಕೆ ರಿಯಾಗೆ ಆಫರ್

  ಈಗಾಗಲೇ ಮಹಾಭಾರತ ಮತ್ತು ರಾಮಾಯಣದ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ ಮತ್ತು ಬರುತ್ತಿವೆ. ಮಹಾಭಾರತ ಆಧರಿಸಿ ಮಾಡುತ್ತಿರುವ ಸಿನಿಮಾದಲ್ಲಿ ನಟಿಸಲು ರಿಯಾ ಚಕ್ರವರ್ತಿಗೆ ಆಫರ್ ಮಾಡಲಾಗಿದೆಯಂತೆ. ದ್ರೌಪದಿ ಪಾತ್ರಕ್ಕಾಗಿ ಚಿತ್ರತಂಡ ರಿಯಾ ಜೊತೆ ಮಾತುಕತೆ ನಡೆಸುತ್ತಿದೆಯಂತೆ.

  ದೊಡ್ಡ ಮಟ್ಟದಲ್ಲಿ ಬರ್ತಿದೆ ಮಹಾಭಾರತ

  ದೊಡ್ಡ ಮಟ್ಟದಲ್ಲಿ ಬರ್ತಿದೆ ಮಹಾಭಾರತ

  ಈಗಾಗಲೇ ಸ್ಕ್ರಿಪ್ಟ್ ಅನ್ನು ಸಹ ರಿಯಾಗೆ ಕಳುಹಿಸಲಾಗಿದ್ದು, ಸ್ಕ್ರಿಪ್ಟ್ ಓದುವಲ್ಲಿ ರಿಯಾ ಬ್ಯುಸಿಯಾಗಿದ್ದಾರಂತೆ. ಮೂಲಗಳ ಪ್ರಕಾರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆಯಂತೆ. ಮಹಾಭಾರತ ಮತ್ತು ದ್ರೌಪದಿ ಪಾತ್ರವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆಯಂತೆ. ಈ ಚಿತ್ರದಲ್ಲಿ ರಿಯಾ ನಟಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ ರಿಯಾ

  ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ ರಿಯಾ

  ರಿಯಾ ಚಕ್ರವರ್ತಿ ಸದ್ಯ ಹಳೆಯ ಘಟನೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸುಶಾಂತ್ ಸಿಂಗ್ ಸಾವಿನ ವಿಚಾರವಾಗಿ ನಡೆದ ತನಿಖೆಯಲ್ಲಿ ಜೈಲು ವಾಸ ಅನುಭವಿಸಿ ಬಂದಿರುವ ರಿಯಾ ಸದ್ಯ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಕೊರೊನಾ ಸಂಕಷ್ಟದಲ್ಲಿರೋರ ಸಹಾಯಕ್ಕೆ ರಿಯಾ ಧಾವಿಸಿದ್ದರು.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿರೂಪಕ Danish Sait | Filmibeat Kannada
  ಚೆಹ್ರೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ

  ಚೆಹ್ರೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ

  ಇನ್ನು ರಿಯಾ ಸದ್ಯ ಅಮಿತಾಬ್ ಮತ್ತು ಇಮ್ರಾನ್ ಹಶ್ಮಿ ಜೊತೆ ನಟಿಸಿದ್ದ ಚೆಹ್ರೆ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಆಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದೆ.

  English summary
  Actress Rhea Chakraborty offered to play Draupadi role in Mahabharata.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X