For Quick Alerts
  ALLOW NOTIFICATIONS  
  For Daily Alerts

  ಖತರ್‌ನಾಕ್ ಐಡಿಯಾ ಮಾಡಿ ಪತ್ನಿಯ ಕೊಂದಿದ್ದ ನಿರ್ಮಾಪಕನ ಬಂಧನ!

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ ರಿಯಾ ಕುಮಾರಿಯ ಹತ್ಯೆ ಪ್ರಕರಣದಲ್ಲಿ ನಟಿಯ ಪತಿ, ನಿರ್ಮಾಪಕ ಪ್ರಕಾಶ್ ಕುಮಾರ್ ಅನ್ನು ಪಶ್ಚಿಮ ಬಂಗಾಳದ ಹೌರಾ ಗ್ರಾಮಾಂತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

  ಜಾರ್ಖಂಡ್ ರಾಜ್ಯದಲ್ಲಿ ಜನಪ್ರಿಯ ನಟಿಯಾಗಿದ್ದ ರಿಯಾ ಕುಮಾರಿಯನ್ನು ಹಾಡಹಗಲೆ ಪಶ್ಚಿಮ ಬಂಗಾಳದ ಹೌರಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತಿ ಹಾಗೂ ಮಗಳ ಎದುರೇ ಅಗಂತುಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆದರೆ ಈ ಕೊಲೆಯ ಹಿಂದೆ ಸ್ವತಃ ನಟಿಯ ಪತಿಯ ಕೈವಾಡ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಕಾಶ್ ಕುಮಾರ್ ಅನ್ನು ಪೊಲೀಸರು ಬಂಧಿಸಿದ್ದಾರೆ.

  ರಿಯಾ ಕುಮಾರಿಯ ಕುಟುಂಬದವರು ಆಕೆಯ ಪತಿ ಪ್ರಕಾಶ್ ಕುಮಾರ್ ಹಾಗೂ ಅವರ ಸಹೋದರರ ವಿರುದ್ಧ ದೂರು ನೀಡಿದ್ದು, ಪ್ರಕಾಶ್‌ರ ಹೇಳಿಕೆಗಳು ಸಹ ಗೊಂದಲಮಯವಾಗಿದ್ದ ಕಾರಣ ಪೊಲೀಸರು ಪ್ರಕಾಶ್ ಅನ್ನು ಬಂಧಿಸಿದ್ದಾರೆ. ಈ ಹಿಂದೆಯೂ ರಿಯಾ ಮೇಲೆ ಪತಿ ಪ್ರಕಾಶ್ ಹಲ್ಲೆ ಮಾಡಿದ್ದು ಆ ಬಗ್ಗೆ ದೂರುಗಳು ಸಹ ದಾಖಲಾಗಿದ್ದವು.

  ರಿಯಾ ಕುಮಾರಿ ಪತಿ ಪ್ರಕಾಶ್ ಕುಮಾರ್ ಹೇಳಿರುವಂತೆ, ತಮ್ಮ ಎರಡು ವರ್ಷದ ಪುತ್ರಿ ಹಾಗೂ ನಟಿ ರಿಯಾ ಕುಮಾರಿ ಒಟ್ಟಿಗೆ ರಾಂಚಿಯಿಂದ ಕೊಲ್ಕತ್ತಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಗೆ ತಲುಪಿದಾಗ ಪತಿ ಪ್ರಕಾಶ್ ಕುಮಾರ್, ವಿರಾಮ ತೆಗೆದುಕೊಳ್ಳಲೆಂದು ಮಹಿಷ್ರೇಕಾ ಹೆಸರಿನ ಬ್ರಿಡ್ಜ್‌ ಬಳಿ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಆಗ ಬೈಕಿನಲ್ಲಿ ಬಂದ ಮೂವರು ಅಗಂತುಕರು ಪ್ರಕಾಶ್ ಕುಮಾರ್‌ರ ದರೋಡೆಗೆ ಯತ್ನಿಸಿದ್ದಾರೆ. ಆಗ ಅವರನ್ನು ತಡೆಯಲು ಬಂದ ನಟಿ ರಿಯಾ ಕುಮಾರಿಗೆ ಅಗಂತುಕರು ಹತ್ತಿರದಿಂದಲೇ ಗುಂಡು ಹೊಡೆದ ಕಾರಣ ನಟಿ ತೀವ್ರವಾಗಿ ಗಾಯಗೊಂಡಿದ್ದಾರೆ.

  ಗಾಯಗೊಂಡ ಪತ್ನಿಯನ್ನು ಕಾರಿನಲ್ಲಿ ಹಾಕಿಕೊಂಡು ಪ್ರಕಾಶ್ ಕುಮಾರ್ ಸುಮಾರು ಮೂರು ಕಿ.ಮೀ ಡ್ರೈವ್ ಮಾಡಿ ರಾಜಾಪುರ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಅಲ್ಲಿಂದ ಮತ್ತೆ ನಟಿಯನ್ನು ಉಳುಬೇರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ರಿಯಾರನ್ನು ಮೃತ ಎಂದು ಘೋಷಿಸಿದ್ದಾರೆ. ತೀರ ಹತ್ತಿರದಿಂದ ಬಂದೂಕು ಚಲಾಯಿಸಿರುವ ಕಾರಣ ನಟಿಯ ಕಿವಿಯ ಒಳಗೆ ಗಾಯವಾಗಿ ತೀವ್ರವಾಗಿ ರಕ್ತಸ್ರಾವವಾಗಿ ನಟಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

  ಘಟನೆ ನಡೆದಿರುವ 16ನೇ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಘಟನೆ ನಡೆದ ಸ್ಥಳದಲ್ಲಿ ಬುಲೆಟ್‌ಗಾಗಿಯೂ ಹುಡುಕಾಟ ನಡೆದಿದೆ. ಜೊತೆಗೆ ಪ್ರಕಾಶ್ ಕುಮಾರ್‌ರ ಕಾರನ್ನು ಸೀಜ್ ಮಾಡಿಕೊಂಡಿದ್ದು, ಅದರಲ್ಲಿಯೂ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

  ಬಂಧಿತ ಪ್ರಕಾಶ್ ಕುಮಾರ್ ಸ್ವತಃ ನಿರ್ಮಾಪಕನಾಗಿದ್ದು, ರಿಯಾ ಕುಮಾರಿ ಜಾರ್ಖಂಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಇಶಾ ಅಲಿಯಾ ಹೆಸರಿನಿಂದ ಜನಪ್ರಿಯರಾಗಿದ್ದ ರಿಯಾ ಕುಮಾರಿ ಹಲವು ಆಲ್ಬಂಗಳಲ್ಲಿ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

  English summary
  Actress Riya Kumari murder case, her husaband Prakash Kumar arrested. He is a movie producer also.
  Thursday, December 29, 2022, 20:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X