»   » ನಟಿ ರೋಜ್ಲಿನ್ ಖಾನ್ ಮೇಲೆ ಲೈಂಗಿಕ ದೌರ್ಜನ್ಯ

ನಟಿ ರೋಜ್ಲಿನ್ ಖಾನ್ ಮೇಲೆ ಲೈಂಗಿಕ ದೌರ್ಜನ್ಯ

Posted By:
Subscribe to Filmibeat Kannada

ಈಗಷ್ಟೇ ಬಾಲಿವುಡ್ ಚಿತ್ರರಂಗದಲ್ಲಿ ಅಂಬೆಗಾಲಿಕ್ಕಿರುವ ಬೆಡಗಿ ಹಾಗೂ ರೂಪದರ್ಶಿ ರೋಜ್ಲಿನ್ ಖಾನ್ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂಗತಿ ಬೆಳಕಿಗೆ ಬಂದಿದೆ. ಮುಂಬೈನ ತನ್ನ ಅಪಾರ್ಟ್ ಮೆಂಟ್ ಬಳಿ ಈ ಘಟನೆ ನಡೆದಿದೆ.

ತನ್ನ ಗೆಳೆಯನೊಂದಿಗೆ ಅಪಾರ್ಟ್ ಮೆಂಟಿನಿಂದ ಹೊರಬರುತ್ತಿದ್ದ ವೇಳೆ ಅದೇ ಬಿಲ್ಡಿಂಗ್ ನ ವ್ಯಕ್ತಿಯೊಬ್ಬ ರೋಜ್ಲಿನ್ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಸ್ಪರ್ಶಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ರೋಜ್ಲಿನ್ ಕೂಡಲೆ ಪ್ರತಿಭಟಿಸಿದ್ದಾರೆ.


ಸ್ಪರ್ಶಿಸಿದ ವ್ಯಕ್ತಿಯೂ ರೋಜ್ಲಿನ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದಿದೆ. ಕಡೆಗೆ ಅಪಾರ್ಟ್ ಮೆಂಟ್ ನಲ್ಲಿದ್ದವರು ಜಮಾಯಿಸಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಇದೆಲ್ಲವೂ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಬಂಧಿಯಾಗಿವೆ.

ರೋಜ್ಲಿನ್ ಖಾನ್ ರೂಪದರ್ಶಿಯಾಗಿ ಈಗಾಗಲೆ ಹೆಸರು ಮಾಡಿದವರು. ಹಲವಾರು ಸಲ ಬೆತ್ತಲಾಗಿ, ಅರೆಬೆತ್ತಲಾಗಿ ತಮ್ಮನ್ನು ತಾವು ತೇಯ್ದವರು. ಇಂತಹ ಚೆಂದುಳ್ಳಿ ಚೆಲುವೆ ಎದುರಿಗೆ ಸಿಕ್ಕಿದ್ದೇ ತಡ ಆಕೆಯನ್ನು ಸ್ಪರ್ಶಿಸಿದ್ದಾನೆ. ಆಕೆ ಪ್ರತಿಭಟಿಸದೆ ಇದ್ದಿದ್ದರೆ ಇನ್ನೇನು ಆಗುತ್ತಿತ್ತೋ ಏನೋ.

ಈಗಾಗಲೆ 'ಸವಿತಾ ಭಾಭಿ' ಎಂಬ ಸೆಕ್ಸ್ ಕಾಮಿಡಿ ಚಿತ್ರದಲ್ಲಿ ಘೋಷಣೆಯಾಗಿದೆ. ಇದರ ಜೊತೆಗೆ 'ಧಮಾಲ್ ಚೌಕ್ಡಿ' ಎಂಬ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನೂ ಒಂದೇ ಒಂದು ಬಾಲಿವುದ್ ಚಿತ್ರವೂ ಬಿಡುಗಡೆಯಾಗಿಲ್ಲ. ಅಷ್ಟರಲ್ಲಾಗಲೇ ಈ ಎಡವಟ್ಟಾಗಿದೆ. (ಏಜೆನ್ಸೀಸ್)

English summary
Model turned actress Rozlyn Khan molested in Mumbai. As she was stepping out of her apartment with one of her friends, a man of her own residential building touched her inappropriately. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada