»   » ನಟಿ ಸಮೀರಾ ರೆಡ್ಡಿ ಮದುವೆ ಫೋಟೋಗಳು

ನಟಿ ಸಮೀರಾ ರೆಡ್ಡಿ ಮದುವೆ ಫೋಟೋಗಳು

By: ಉದಯರವಿ
Subscribe to Filmibeat Kannada

ಸುದೀಪ್ ಜೊತೆಗಿನ 'ವರದನಾಯಕ' ಚಿತ್ರದಲ್ಲಿ ಸೊಂಟ ಬಳುಕಿಸಿದ್ದ ಬೆಡಗಿ ಸಮೀರಾ ರೆಡ್ಡಿ ಮದುವೆ ಸದ್ದುಗದ್ದಲವಿಲ್ಲದಂತೆ ನಡೆದಿದೆ. ಉದ್ಯಮಿ ಅಕ್ಷಯ್ ವರ್ಧೆ ಅವರ ಕೈಹಿಡಿದಿದ್ದಾರೆ ಸಮೀರಾ ರೆಡ್ಡಿ. ಜನವರಿ 21ರ ಮಂಗಳವಾರ ಮುಂಬೈನ ಬಾಂದ್ರಾದಲ್ಲಿ ನೆರವೇರಿತು.

ಸಮೀರಾ ರೆಡ್ಡಿ ಮದುವೆ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡಿದ್ದವು. ಸರಳವಾಗಿ ನಡೆದ ಮದುವೆ ಸಮಾರಂಭಕ್ಕೆ ಕೇವಲ ಬೆರಳೆಣಿಕೆಯಷ್ಟು ಅತಿಥಿಗಲು ಮಾತ್ರ ಆಗಮಿಸಿದ್ದರು. ಸಮೀರಾ ಮದುವೆ ಉಡುಗೆತೊಡುಗೆಗಳನ್ನು ಬಾಲಿವುಡ್ ನ ಖ್ಯಾತ ವಿನ್ಯಾಸಕಿ ಲೀತಾ ಲುಲ್ಲಾ ಡಿಸೈನ್ ಮಾಡಿದ್ದಾರೆ.

ಖ್ಯಾತ ಉದ್ಯಮಿ ವಿಜಯ್ ಮಲ್ಯ ಅವರು ಸಮೀರಾ ರೆಡ್ಡಿ ಮದುವೆಗೆ ಆಗಮಿಸಿದ್ದ ಗಣ್ಯಾತಿಗಣ್ಯರಲ್ಲಿ ಒಬ್ಬರು. ಅವರ ಕಿಂಗ್ ಫಿಶರ್ ಕ್ಯಾಲೆಂಡರ್ ನ ಹಲವು ವರ್ಣಮಯ ಪುಟಗಳಲ್ಲಿ ಸಮೀರಾ ರೆಡ್ಡಿ ಕೂಡ ತಮ್ಮದೇ ಆದಂತಹ ಮೈಮಾಟವನ್ನು ಪ್ರದರ್ಶಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸ್ಲೈಡ್ ನಲ್ಲಿ ಮದುವೆ ಫೋಟೋಗಳು...

ಅರಿಶಿಣ, ಕುಂಕುಮದಲ್ಲಿ ಕಂಗೊಳಿಸಿದ ಸಮೀರಾ

ಸಮೀರಾ ರೆಡ್ಡಿಯನ್ನು ಬಹುಶಃ ಯಾರೂ ಈ ರೀತಿ ನೋಡಿರಲಿಕ್ಕಿಲ್ಲ. ಮೈಕೈಗೆ ಅರಿಶಿಣ, ಹಣೆಗೆ ಕುಂಕುಮ ಇಟ್ಟುಕೊಂಡು ಕಂಗೊಳಿಸುತ್ತಿದ್ದರು. ಪಕ್ಕಾ ಸಂಪ್ರದಾಯದಂತೆ ಸಮೀರಾ ಮದುವೆ ನೆರವೇರಿತು.

ಎರಡೂವರೆ ವರ್ಷಗಳಿಂದ ಡೇಟಿಂಗ್

ಅಕ್ಷಯ್ ವರ್ಧೆ ಜೊತೆಗೆ ಸಮೀರಾ ಕಾಣಿಸಿಕೊಂಡಿದ್ದು ಹೀಗೆ. ಇವರಿಬ್ಬರದ್ದೂ ಎರಡೂವರೆ ವರ್ಷಗಳಷ್ಟು ಸುದೀರ್ಘ ಡೇಟಿಂಗ್ ನಡೆಯುತ್ತಿತ್ತು. ಈಗ ಬಾಳದೋಣಿಯಲ್ಲಿ ಸಾಗಲು ಹೊರಟಿದ್ದಾರೆ.

ಸಮೀರಾ, ಅಕ್ಷಯ್ ಜೋಡಿ ಸೂಪರ್ ಅಲ್ಲವೆ

ಜೋಡಿ ಸೂಪರ್ ಅಲ್ಲವೆ. ಇವರಿಬ್ಬರ ಮದುವೆ ಉಡುಗೆಗಳನ್ನು ಸಿದ್ಧಪಡಿಸಿದವರು ಖ್ಯಾತ ವಿನ್ಯಾಸಕಿ ನೀತಾ ಲುಲ್ಲಾ. ಜೋಡಿ ಚೆನ್ನಾಗಿದೆ ಎಂದು ಮದುವೆ ಮನೆಯಲ್ಲಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.

ಮದುವೆ ಮನೆಯಲ್ಲಿ ಯಾರೀ ಗೊಂಬೆ?

ಮದುವೆ ಮನೆಯಲ್ಲಿ ಯಾರು ಈ ಗೊಂಬೆ. ಸಮೀರಾ ರೆಡ್ಡಿ ಹಾಗೂ ಇತರೆ ಸಪ್ತಪದಿ ತುಳಿದ ಬಹಳಷ್ಟು ಬಾಲಿವುಡ್ ಜೋಡಿಗಳಿಗೆ ಮದುವೆ ಉಡುಪುಗಳನ್ನು ವಿನ್ಯಾಸಗೊಳಿಸಿದ ನೀತಾ ಲುಲ್ಲಾ.

ಕುಟುಂಬ ಸಮೇತ ಬಂದ ವಿಜಯ್ ಮಲ್ಯ

ಫ್ಯಾಮಿಲಿ ಸಮೇತ ಬಂದ ವಿಜಯ್ ಮಲ್ಯ. ತಮ್ಮ ವರ್ಣಮಯ ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲಿ ಸಮೀರಾ ರೆಡ್ಡಿ ಅವರಿಗೂ ಸ್ಥಾನ ನೀಡಿದ್ದರು ಮಲ್ಯ. ಮದುವೆಗೆ ಫ್ಯಾಮಿಲಿ ಸಮೇತ ಬಂದು ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಮಲ್ಯರ ಇನ್ನೊಂದು ಕಲರ್ ಫುಲ್ ಫೋಟೋ

ಮಲ್ಯರ ಇನ್ನೊಂದು ಕಲರ್ ಫುಲ್ ಫೋಟೋ. ಸಾಮಾನ್ಯವಾಗಿ ಸಭೆ ಸಮಾರಂಭಗಳಿಂದ ದೂರ ಇರುವ ಮಲ್ಯ ಸಾಹೇಬರು ಬಿಡುವು ಮಾಡಿಕೊಂಡು ಸಮೀರಾ ರೆಡ್ಡಿ ಮದುವೆಗೆ ಬಂದಿದ್ದರು. ಎಲ್ಲರ ಕಣ್ಣು ಅವರತ್ತಲೇ ಇತ್ತು.

ಬೈಕ್ ಮೇಲೆ ಬಂದ ಚೆಲುವ ರಾಜಕುಮಾರ

ಮೊದಲೇ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೈಕ್ ಗಳನ್ನು ತಯಾರಿಸಿಕೊಡುವ ಉದ್ಯಮಿ. ಹಾಗಾಗಿ ಕುದುರೆ ಏರಿ ಬರುವ ಬದಲು ಬೈಕ್ ಏರಿಬಂದಿದ್ದಾರೆ ಚೆಲುವ ರಾಜಕುಮಾರ.

ಸಮೀರಾ ರೆಡ್ಡಿಗೂ ಬೈಕ್ ಎಂದರೆ ಇಷ್ಟ

ಸಮೀರಾ ಅವರಿಗೂ ಬೈಕ್ ಗಳೆಂದರೆ ಕ್ರೇಜ್. ಇಬ್ಬರ ಅಭಿರುಚಿಗಳೂ ಒಂದೇ ಆಗಿದ್ದು ಇನ್ನಷ್ಟು ಹತ್ತಿರವಾಗಲು ಕಾರಣವಾಯಿತು. ಇನ್ನೊಂದು ಮೂಲದ ಪ್ರಕಾರ ಇಬ್ಬರಿಗೆ ಪ್ರೇಮಾಂಕುರವಾಗಿದ್ದು ಬೈಕ್ ನಲ್ಲೇ ಅಂತೆ.

ಆರತಿ ಎತ್ತಿರೇ ನಮ್ಮ ಮಧುಮಗನಿಗೆ

ಸಮೀರಾ ರೆಡ್ಡಿ ತಂಗಿ ಸುಷ್ಮಾ ರೆಡ್ಡಿ ಮಧುಮಗನಿಗೆ ಆರತಿ ಎತ್ತಿ ಹಣೆಗೆ ತಿಲಕವಿಟ್ಟು ಬರಮಾಡಿಕೊಂಡರು. ಭಾವನ ಮುಖದಲ್ಲಿನ ಮಂದಹಾಸಕ್ಕೆ ಸುಷ್ಮಾ ಬೆರಗಾಗಿದ್ದು ಹೀಗೆ.

ಸಮೀರಾ ರೆಡ್ಡಿ ತಾಯಿ ನಕ್ಷತ್ರಾ ಅವರಿಂದ ಆರತಿ

ಅಳಿಮಯ್ಯನಿಗೆ ಅತ್ತೆ ಆರತಿ ಬೆಳಗಿದ ಸಮಯ. ಸಮೀರಾ ರೆಡ್ಡಿ ಅವರ ತಾಯಿ ನಕ್ಷತ್ರಾ ಹಾಗೂ ಅಳಿಮಯ್ಯ ಅಕ್ಷಯ್ ಅವರ ಗಂಭೀರ ಫೋಟೋ.

ಗುಟ್ಟೊಂದ ಹೇಳುವ ಹತ್ತಿರ ಹತ್ತಿರ ಬಾ

ಗುಟ್ಟೊಂದ ಹೇಳುವೆ ಹತ್ತಿರ ಹತ್ತಿರ ಬಾ ಎಂಬಂತಿದೆ ಅತ್ತೆ ಅಳಿಯನ ವರಸೆ. ಇದೇನು ಸಂಪ್ರದಾಯವೋ ಏನೋ. ಒಟ್ಟಾರೆಯಾಗಿ ಸಂಸಾರದ ಗುಟ್ಟೊಂದನ್ನು ಅತ್ತೆ ಹೇಳುತ್ತಿರುವಂತಿದೆ.

ಸುಷ್ಮಾರಿಂದ ಭಾವನ ಹಣೆಗೆ ತಿಲಕ

ಇಬ್ಬರೂ ಯಾಕಿಷ್ಟು ಗಂಭೀರವಾದರೋ. ಭಾವನನ್ನು ಆಟ ಆಡಿಸಿದ್ದು ಆಯಿತಾ ಏನೋ.

ಎಲ್ಲರಿಗೂ ಸಿಹಿ ಹಂಚುವ ಸಮಯ

ಮದುವೆಯಲ್ಲಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸುತ್ತಿರುವ ಸಮೀರಾ ತಾಯಿ ನಕ್ಷತ್ರಾ ಹಾಗೂ ತಂಗಿ ಸುಷ್ಮಾ.

ಸಮೀರಾ ರೆಡ್ಡಿ ತಂದೆತಾಯಿ

ತಂದೆ ಸಿ.ಪಿ.ರೆಡ್ಡಿ ದೊಡ್ಡ ಬಿಜಿನೆಸ್ ಮ್ಯಾನ್. ಹಾಗೂ ತಾಯಿ ನಕ್ಷತ್ರಾ ಅವರು ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಸಮೀರಾ ತಾಯಿ ಎನ್ ಜಿಓ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಪ್ರೀತಿಯಿಂದ ತಾಯಿಯನ್ನು ನಿಕಿ ಎಂದು ಸಮೀರಾ ಕರೆಯುತ್ತಾರಂತೆ.

ಸಮೀರಾ ಕರ್ನಾಟಕ ಮೂಲದ ತಾರೆ

ಬಾಲಿವುಡ್ ನಲ್ಲಿಯೂ ಮಿಂಚುತ್ತಿರುವ ನಟಿ ಸಮೀರಾ ರೆಡ್ಡಿ ದಕ್ಷಿಣ ಭಾರತ ಮೂಲದವರು ಎಂಬುದು ಎಲ್ಲರಿಗೂ ಗೊತ್ತು. ಅವರ ತಾಯಿ ನಕ್ಷತ್ರಾ ಕರ್ನಾಟಕದ ಮಡಿಕೇರಿಯವರು, ಕೊಂಕಣಿ ಮಾತನಾಡುವ ಕನ್ನಡತಿ. ಆಕೆ ತಂದೆ ಆಂಧ್ರದವರಾದ್ದರಿಂದ ಸಮೀರಾ ತೆಲುಗಿನ ಹುಡುಗಿ. ಆದರೆ ಬಾಲಿವುಡ್ ನಲ್ಲಿ ಕೆರಿಯರ್ ಪ್ರಾರಂಭಿಸಿ ಸೌತ್ ಇಂಡಿಯಾದಲ್ಲಿ ಪ್ರಸಿದ್ಧರಾದವರು ಸಮೀರಾ ರೆಡ್ಡಿ.

ಅಮ್ಮನಿಗೆ ಕನ್ನಡ ಬರುತ್ತೆ ಆದರೆ ನನಗೆ ಮಾತ್ರ ಬರೋಲ್ಲ

ನನ್ನ ತಾಯಿ ನಕ್ಷತ್ರ ಕನ್ನಡದವರು, ಮಡಿಕೇರಿಯವರು ಕೊಂಕಣಿ ಕನ್ನಡತಿ. ನಮ್ಮಮ್ಮನಿಗೆ ಕನ್ನಡ ಚೆನ್ನಾಗಿ ಗೊತ್ತು. ಆದರೆ ನನಗೆ ಮಾತ್ರ ಬರೋದಿಲ್ಲ. ಈಗ ಕಲಿಯುವ ಮನಸ್ಸಾಗಿದೆ. ಅಮ್ಮನಿಂದಲೇ ಕಲಿಯುತ್ತೇನೆ. ಹಾಗೆ ಸಾಧ್ಯವಾದಷ್ಟು ಬೇಗ ಕಲಿತು ಕನ್ನಡ ಮಾತನಾಡುತ್ತೇನೆ ಎಂದು ನನ್ನ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ" ಎಂದು ಇಂಗ್ಲೀಷಿನಲ್ಲೇ ಹೇಳಿ ಅಚ್ಚರಿ ಹುಟ್ಟಿಸಿದ್ದರು ಸಮೀರಾ ರೆಡ್ಡಿ.

ವರದನಾಯಕ ಚಿತ್ರಕ್ಕಾಗಿ ಅತಿಹೆಚ್ಚು ಸಂಭಾವನೆ ಪಡೆದಿದ್ದ ತಾರೆ

ಕನ್ನಡದ ಯಾವ ನಟಿಯೂ ಪಡೆಯದಷ್ಟು ಸಂಭಾವನೆಯನ್ನು ವರದನಾಯಕ ಚಿತ್ರಕ್ಕಾಗಿ ಸಮೀರಾ ರೆಡ್ಡಿ ಪಡೆದಿದ್ದರು. ಆದರೆ ಎಷ್ಟು ಪಡೆದಿದ್ದರು ಎಂಬುದನ್ನು ನಿರ್ಮಾಪಕರಾಗಲಿ, ಸ್ವತಃ ಸಮೀರಾ ಆಗಲಿ ಬಹಿರಂಗಪಡಿಸಿರಲಿಲ್ಲ.

English summary
Sameera Reddy married her beau Akshay Varde as per the Hindu customs on Tuesday (January 21). The marriage was attended by some of the popular public figures. Here, we are bringing you her marriage photos.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada