»   » ಉದ್ಘಾಟನೆಗೆ ಹೋಗಿ ಆಸ್ಪತ್ರೆ ಸೇರಿದ ಸ್ನೇಹಾ ಉಲ್ಲಾಳ್

ಉದ್ಘಾಟನೆಗೆ ಹೋಗಿ ಆಸ್ಪತ್ರೆ ಸೇರಿದ ಸ್ನೇಹಾ ಉಲ್ಲಾಳ್

Posted By:
Subscribe to Filmibeat Kannada
ನಟಿ ಸ್ನೇಹಾ ಉಲ್ಲಾಳ್ ಗಾಯಗೊಂಡಿದ್ದಾರೆ. ಮೊನ್ನೆ (12 ನವೆಂಬರ್ 2012) ಗುಂಟೂರಿನಲ್ಲಿ ಶೋ ರೂಂ ಒಂದನ್ನು ಉದ್ಘಾಟಿಸಲು ಹೋಗಿದ್ದ ನಟಿ ಸ್ನೇಹಾ ಉಲ್ಲಾಳ್, ಅಭಿಮಾನಿಗಳು ತಳ್ಳಾಟದಲ್ಲಿ ತೊಡಗಿದಾಗ ಬಿದ್ದು ಗಾಯಗೊಂಡಿದ್ದಾರೆ. ಶೋ ರೂಂ ಉದ್ಘಾಟನೆಗೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಹೋಗಬೇಕಾಗಿದ್ದ ಅವರು ಸ್ವಲ್ಪ ತಡವಾಗಿ ತಲುಪಿದ್ದಾರೆ. ಅಷ್ಟರಲ್ಲಿಯೇ ಅವರನ್ನು ನೋಡಲು ಭಾರಿ ಜನಸ್ತೋಮ ನೆರೆದುಬಿಟ್ಟಿದೆ.

ಸ್ನೇಹಾ ಬಂದಕೂಡಲೇ ಅವರನ್ನು ನೋಡಲು ಜನರು ಸೇರಿದ್ದ ಜನರ ಮಧ್ಯೆ ನೂಕುನುಗ್ಗಲು ಜಾಸ್ತಿಯಾಯಿತು. ಅಭಿಮಾನಿಗಳ ಮಧ್ಯೆ ಆಗಲೇ ಪ್ರಾರಂಭವಾಗಿದ್ದ ತಳ್ಳಾಟದಿಂದ ಸ್ನೇಹಾ ಕಾರಿನಿಂದ ಇಳಿಯುವುದೇ ಕಷ್ಟವಾಯಿತು. ಹೇಗೋ ಕಷ್ಟಪಟ್ಟು ಕಾರಿನಿಂದ ಇಳಿದ ಸ್ನೇಹಾ ಶೋ ರೂಂಗೆ ಹೋಗುವ ವೇಳೆ ನೂಕುನುಗ್ಗಲು ಇನ್ನೂ ಹೆಚ್ಚಾಯ್ತು. ಈ ಸಮಯದಲ್ಲಿ ನಟಿ ಸ್ನೇಹಾ ಮುಗ್ಗರಿಸಿ ಬಿದ್ದರು.

ನಂತರ ಜನರನ್ನು ನಿಯಂತ್ರಿಸಿದ ಪೊಲೀಸರು ಸ್ನೇಹಾರನ್ನು ಒಳಕ್ಕೆ ಕರೆದುಕೊಂಡು ಹೋದರು. ಅವರಿಗೆ ಗಾಯಗಳಾಗಿದ್ದರಿಂದ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಸ್ನೇಹಾ ಹೆಚ್ಚಿನ ಚಿಕಿತ್ಸೆ ಪಡೆದರು. ಅಭಿಮಾನಿಗಳ ಅಭಿಮಾನವೇ ನಟಿ ಸ್ನೇಹಾರನ್ನು ಆಸ್ಪತ್ರೆಗೆ ಹೋಗುವಂತೆ ಮಾಡಿದ ದುರಂತ ಜರುಗಿತು.

ನಟಿ ಸ್ನೇಹಾ ಬಾಲಿವುಡ್ ನಲ್ಲಿ ಸಾಕಷ್ಟು ಚಿರಪರಿಚಿತ ಹೆಸರು. ಅವರ ಲುಕ್ ಸ್ವಲ್ಪ ಮಟ್ಟಿಗೆ ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಹೋಲುವಂತಿದೆ. ಹೀಗಾಗಿ ಅವರಿಗೆ ಹೆಸರು ಮತ್ತು ಅಭಿಮಾನಿ ಬಳಗ ಹೆಚ್ಚು. ಎಲ್ಲ ಪಾತ್ರಗಳಿಗೂ ಸೈ ಎನ್ನುವ ಅಪ್ಪಟ ಕಲಾವಿದೆ. ದಕ್ಷಿಣ ಭಾರತದಲ್ಲಿಯೂ ಸ್ನೇಹಾ ಹೆಸರು ಎಲ್ಲರಿಗೂ ಗೊತ್ತು. ಒಟ್ಟಿನಲ್ಲಿ. ಶೋ ರೂಂ ಉದ್ಘಾಟನೆಗೆ ಹೋಗಿ ಆಸ್ಪತ್ರೆ ಸೇರಿಕೊಂಡರು ಸ್ನೇಹಾ ಉಲ್ಲಾಳ್. (ಏಜೆನ್ಸೀಸ್)

English summary
Actress Sneha Ullal fell down and Injured at the time of Show Room Inauguration in Guntur. This incident happened day before yesterday on 12th November 2012. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada