»   » ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ಫೋಟೋ: ಖುಷಿಖುಷಿಯಾಗಿದ್ದ ನಟಿ ಇನ್ನಿಲ್ಲ!

ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ಫೋಟೋ: ಖುಷಿಖುಷಿಯಾಗಿದ್ದ ನಟಿ ಇನ್ನಿಲ್ಲ!

Posted By:
Subscribe to Filmibeat Kannada

ಒಂದ್ಕಾಲ ಇತ್ತು... ಆಗ ಶ್ರೀದೇವಿ ಅಂದ್ರೆ ಹರೆಯದ ಹುಡುಗರ ಎದೆ ಬಡಿತ ಜೋರಾಗುತ್ತಿತ್ತು. ಕನಸಲ್ಲಿ ಬಂದು ಯುವಕರ ನಿದ್ದೆ ಗೆಡಿಸುತ್ತಿದ್ದ ನಟಿ ಶ್ರೀದೇವಿ ಅದೆಷ್ಟು ಜನರ ಪಾಲಿಗೆ ಡ್ರೀಮ್ ಗರ್ಲ್ ಆಗಿದ್ರೋ, ಲೆಕ್ಕವೇ ಇಲ್ಲ.

ಈಗಲೂ ಅಷ್ಟೇ... ನಿಮ್ಮ ಅಚ್ಚುಮೆಚ್ಚಿನ ನಟಿ ಯಾರು ಅಂತ ಕೇಳಿದ್ರೆ, ಎಷ್ಟೋ ಜನರ ಬಾಯಲ್ಲಿ ಶ್ರೀದೇವಿ ಹೆಸರು ಬರುತ್ತದೆ. ಅಷ್ಟರಮಟ್ಟಿಗೆ, ಜನರ ಮನಸ್ಸಿನಲ್ಲಿ ನೆಲೆಯೂರಿದ್ದವರು ನಟಿ ಶ್ರೀದೇವಿ.

ಮದುವೆ ಆಗಿ, ಮಕ್ಕಳು-ಮನೆ ಅಂತ ಬಿಜಿಯಾಗಿದ್ಮೇಲೆ ಚಿತ್ರರಂಗದಿಂದ ಶ್ರೀದೇವಿ ಕೊಂಚ ದೂರ ಉಳಿದಿದ್ದರು. ಆದರೂ, ಶ್ರೀದೇವಿಯ ಫ್ಯಾನ್ ಫಾಲೋವಿಂಗ್ ಕಮ್ಮಿ ಆಗಿರಲಿಲ್ಲ. ಅದಕ್ಕೆ ಸಾಕ್ಷಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ಮೇಲೆ ಶ್ರೀದೇವಿ ಸಿನಿಮಾಗಳಿಗೆ ಸಿಕ್ಕ ಭರ್ಜರಿ ಓಪನ್ನಿಂಗ್.

'ಇಂಗ್ಲೀಷ್ ವಿಂಗ್ಲೀಷ್', 'ಪುಲಿ', 'ಮಾಮ್' ಸಿನಿಮಾಗಳ ಮೂಲಕ ಬಣ್ಣದ ಬದುಕಿನಲ್ಲಿ ಶ್ರೀದೇವಿ ಮತ್ತೆ ಸಕ್ರಿಯರಾಗಿದ್ದರು. ಮಗಳು ಜಾನ್ಹವಿ ಬೆಳ್ಳಿಪರದೆ ಮೇಲೆ ಮಿಂಚುವುದನ್ನು ನೋಡಬೇಕು ಎಂಬ ಬಯಕೆ ಹೊಂದಿದ್ದ ನಟಿ ಶ್ರೀದೇವಿ, ಅದು ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

ಮದುವೆಯೊಂದರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ನಟಿ ಶ್ರೀದೇವಿ, ಅಲ್ಲೇ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾದರು. ನಟಿ ಶ್ರೀದೇವಿಗೆ ಎದೆನೋವು ಕಾಣಿಸಿಕೊಳ್ಳುವ ಮುನ್ನ ಕ್ಯಾಮರಾ ಕಂಗಳಲ್ಲಿ ಸೆರೆಯಾದ ಕಟ್ಟಕಡೆಯ ವಿಡಿಯೋ ಮತ್ತು ಫೋಟೋಗಳು ಇಲ್ಲಿವೆ ನೋಡಿ...

ಮಗಳ ಜೊತೆ ನಿಂತು ಪೋಸ್ ಕೊಟ್ಟಿದ್ದ ಶ್ರೀದೇವಿ

ಮೋಹಿತ್ ಮಾರ್ವಾ ಮದುವೆಗೆ ತೆರಳುವ ಮುನ್ನ ಸಿಂಗಾರ ಮಾಡಿಕೊಂಡಿದ್ದ ನಟಿ ಶ್ರೀದೇವಿ ತಮ್ಮ ಸುಪುತ್ರಿ ಖುಷಿ ಜೊತೆಗೆ ನಿಂತು ಫೋಟೋಗೆ ಪೋಸ್ ನೀಡಿದ್ದರು.

ಹೃದಯಾಘಾತದಿಂದ ಬಾಲಿವುಡ್ ನಟಿ ಶ್ರೀದೇವಿ ನಿಧನ

ನವ ಜೋಡಿ ಜೊತೆಗೆ ಮಿಂಚಿದ್ದ ಶ್ರೀದೇವಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೋಹಿತ್ ಮಾರ್ವಾ ದಂಪತಿ ಜೊತೆಗೆ ಶ್ರೀದೇವಿ, ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ.

'ಡ್ರೀಮ್ ಗರ್ಲ್' ಶ್ರೀದೇವಿ ವಿಧಿವಶ: ಕಿಚ್ಚ ಸುದೀಪ್ ಹೃದಯ ಛಿದ್ರ

ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದ ಶ್ರೀದೇವಿ

ವಿವಾಹ ಮಹೋತ್ಸವದಲ್ಲಿ ನಟಿ ಶ್ರೀದೇವಿ ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದರು. ಅದಕ್ಕೆ ಈ ಫೋಟೋಗಳೇ ಸಾಕ್ಷಿ.

ಕಟ್ಟ ಕಡೆಯ ವಿಡಿಯೋ

ನಟಿ ಶ್ರೀದೇವಿ ಅವರ ಅಂತಿಮ ಕ್ಷಣಗಳ ವಿಡಿಯೋ ಇಲ್ಲಿದೆ. ಮೋಹಿತ್ ಮಾರ್ವಾ ವಿವಾಹ ಮಹೋತ್ಸವಕ್ಕೆ ಶ್ರೀದೇವಿ ಆಗಮಿಸಿದಾಗ, ಸೆರೆ ಆಗಿರುವ ವಿಡಿಯೋ ಇದು. ಮದುವೆಯಲ್ಲಿ ಆರೋಗ್ಯವಾಗಿ, ಸಂತೋಷವಾಗಿ ಕಂಡು ಬಂದ ಶ್ರೀದೇವಿ ರಾತ್ರಿ ಹೃದಯಾಘಾತದಿಂದ ಹಠಾತ್ ನಿಧನರಾದರು.

ಕೊನೆಯ ಡ್ಯಾನ್ಸ್ ವಿಡಿಯೋ

ವಿವಾಹ ಮಹೋತ್ಸವದ ಸಂದರ್ಭದಲ್ಲಿ ಪತಿ ಬೋನಿ ಕಪೂರ್ ಹಾಗೂ ಕುಟುಂಬದ ಜೊತೆ 'ಕಾಲಾ ಚಶ್ಮಾ' ಹಾಡಿಗೆ ಶ್ರೀದೇವಿ ಕಟ್ಟಕಡೆಯದಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ..

English summary
Bollywood Actress Sridevi (54) suffered a cardiac arrest in Dubai, where she attended Mohit Marwah's wedding. Here are the last pictures and a video of Sridevi. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada