»   » ತನುಮನ ತಣಿಸುವ ತಾರೆ ತಮನ್ನಾ ಚಿತ್ರಗಳು

ತನುಮನ ತಣಿಸುವ ತಾರೆ ತಮನ್ನಾ ಚಿತ್ರಗಳು

By: ಉದಯರವಿ
Subscribe to Filmibeat Kannada

ತಮ್ಮ ಮೋಹಕ ನಗೆಯ ಮೂಲಕ ದಕ್ಷಿಣ ಭಾರತದಲ್ಲಿ ಅದರಲ್ಲೂ ಕಲಾಪಿಪಾಸಿಗರಲ್ಲಿ ಸಂಚಲನ ಮೂಡಿಸಿದ ತಾರೆ ತಮನ್ನಾ ಭಾಟಿಯಾ. ಈಗೆ ಈಕೆ ಹಿಮ್ಮತ್ ವಾಲಾ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೂ ಅಡಿಯಿಟ್ಟಿದ್ದಾರೆ.

ಅಜಯ್ ದೇವಗನ್ ನಾಯಕ ನಟನಾಗಿರುವ ಹಿಮ್ಮತ್ ವಾಲಾ ರೀಮೇಕ್ ಚಿತ್ರ. 1983ರಲ್ಲಿ ತೆರಕಂಡಿದ್ದ ಬ್ಲಾಕ್ ಬಸ್ಟರ್ ಚಿತ್ರ ಹಿಮ್ಮತ್ ವಾಲಾ ರೀಮೇಕ್ ಇದು. ಮೂಲ ಚಿತ್ರದಲ್ಲಿ ಜಿತೇಂದ್ರ ಹಾಗೂ ಶ್ರೀದೇವಿ ಅಭಿನಯಿಸಿದ್ದರು. ಈಗ ಅಜಯ್ ಹಾಗೂ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಾಲುಗಲ್ಲದ ಬೆಡಗಿ ಮೂಲತಃ ಮುಂಬೈನವಳು. ಹಾಗಾಗಿ ಬಾಲಿವುಡ್ ಅಂಗಳಕ್ಕೆ ಅಡಿಯಿಡುವುದು ಅಷ್ಟೇನು ಕಷ್ಟವಾಗಿಲ್ಲ. ಈಕೆಯ ಪಾಲಿಗೆ ಹಿಂದಿ ಸುಲಿದ ರಸಬಾಳೆ. ಹಿಮ್ಮತ್ ವಾಲಾ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿದ್ದು ಚಿತ್ರವೇನಾದರೂ ಹಿಟ್ ಆದರೆ ತಮನ್ನಾ ಬಾಲಿವುಡ್ ನಲ್ಲೇ ಸೆಟ್ಲ್.

ಇಲ್ಲದಿದ್ದರೆ ಇದ್ದೇ ಇದೆ ಆಂಧ್ರ, ತಮಿಳುನಾಡು ಕಡೆಗೆ ಕರ್ನಾಟಕ. ಈ ಹಿಂದೆ ಕ್ರಿಕೆಟಿಗೆ ವಿರಾಟ್ ಕೋಹ್ಲಿ ಜೊತೆ ತಮನ್ನಾ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರೂ ಸೆಲ್ ಫೋನ್ ಒಂದರ ಜಾಹೀರಾತಿಗೆ ಆಯ್ಕೆಯಾದರು. ಸೆಲ್ಕಾನ್ ಮೊಬೈನ್ ಬ್ರ್ಯಾಂಡ್ ರಾಯಭಾರಿಗಳಾದರು.

ಕೋಹ್ಲಿ ಜೊತೆ ಇನ್ನೂ ಬ್ಯಾಟಿಂಗ್ ಇದೆಯಾ?

ಇವರಿಬ್ಬರೂ ಮೊಟ್ಟಮೊದಲ ಬಾರಿಗೆ ಒಂದೇ ಜಾಹೀರಾತಿನಲ್ಲಿ ಅಭಿನಯಿಸುವ ಸುವರ್ಣಾವಕಾಶ ಕೂಡಿಬಂದಿತ್ತು. ಮೊದ ಮೊದಲು ಮಾತಿಗಷ್ಟೇ ಸೀಮಿತವಾಗಿದ್ದ ಇವರಿಬ್ಬರ ನಡುವೆ ಈಗ ಪ್ರೀತಿ ಪ್ರೇಮ ಅನುರಾಗ ಅಲೆಅಲೆಯಾಗಿ ತೇಲಿಬಂದಿತ್ತು.

ದೂರಶಿಕ್ಷಣದಲ್ಲಿ ಬಿಎ ಪದವಿ ಪಡೆದ ತಮನ್ನಾ

ನಂದಿನಿ ಹಾಲಿನಷ್ಟೆ ಬೆಳ್ಳಗಿರುವ ಈಕೆಗೆ 'ಮಿಲ್ಕಿ ಬ್ಯೂಟಿ' ಎಂಬ ಟೈಟಲನ್ನೂ ನೀಡಿದ್ದಾರೆ. ಚಿತ್ರತಂಗಕ್ಕೆ ಅಡಿಯಿಟ್ಟಾಗ ದೂರಶಿಕ್ಷಣದಲ್ಲಿ ಬಿಎ ಪದವಿ ಓದುತ್ತಿದ್ದರು ತಮನ್ನಾ. ಕಡೆಗೆ ಅದನ್ನು ಮುಗಿಸಿದರೋ ಇಲ್ಲಾ ಇನ್ನೂ ದಂಡಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೋ ಗೊತ್ತಿಲ್ಲ.

ಹ್ಯಾಪಿ ಡೇಸ್ ಮೂಲಕ ಬೆಳಕಿಗೆ ಬಂದ ತಾರೆ

ತೆಲುಗಿನ 'ಶ್ರೀ' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಈಕೆ ಬೆಳಕಿಗೆ ಬಂದಿದ್ದು ಹ್ಯಾಪಿ ಡೇಸ್ ಎಂಬ ಮತ್ತೊಂದು ಚಿತ್ರದ ಮೂಲಕ.

ತಮನ್ನಾಗೂ ಉಂಟು ಒಂದು ಸೆಕ್ಸಿ ಸ್ಪಾಟ್

ಒಬ್ಬೊಬ್ಬ ತಾರೆಗೆ ಒಂದೊಂದು ಆಕರ್ಷಕ ಭಾಗ ಇರುವಂತೆ ತಮನ್ನಾಗೂ ಒಂದು ಸೆಕ್ಸಿ ಸ್ಪಾಟ್ ಇದೆ. ಆಕೆಯ ಮುಗುಳ್ನಗೆಯೇ ಆಕೆಯ ಸೆಕ್ಸಿ ಸ್ಪಾಟ್ ಎಂಬುದು ವಿಶೇಷ. ಐದು ಅಡಿ ಎರಡು ಇಂಚು ಎತ್ತರದ ಈ ಬೆಡಗಿಗೆ ಕ್ರಿಕೆಟ್ ಎಂದರೆ ಸಖತ್ ಇಷ್ಟ.

ನೀಲಿ, ಕೆಂಪು ತಮನ್ನಾ ನೆಚ್ಚಿನ ಬಣ್ಣಗಳು

ಸಂಗೀತ, ಡಾನ್ಸ್ ಹಾಗೂ ಚಿತ್ರಗಳ ವೀಕ್ಷಣೆ. ನೀಲಿ ಮತ್ತು ಕೆಂಪು ನೆಚ್ಚಿನ ಬಣ್ಣಗಳು. ಪಂಜಾಬಿ ಶೈಲಿಯ ತಿಂಡಿಗಳೆಂದರೆ ಬಾಯಿ ಚಪ್ಪರಿಸುತ್ತಾರೆ. ಕೇರಳ ಹಾಗೂ ಗೋವಾ ಇಷ್ಟದ ತಾಣಗಳು.

English summary
Actress Tamanna Bhatia hot photos. who is entering Bollywood with forthcoming movie Himmatwala. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada