Don't Miss!
- News
ತ್ರಿಪುರಾ ವಿಧಾನಸಭೆ ಚುನಾವಣೆ: 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನನಗೇನಾದರೂ ಆದರೆ ಅವರನ್ನು ಸುಮ್ಮನೆ ಬಿಡಬೇಡಿ": ಹೊಸ ಬಾಂಬ್ ಸಿಡಿಸಿದ ತನುಶ್ರೀ ದತ್ತಾ!
'ಆಶಿಕ್ ಬನಾಯಾ ಅಪ್ನೆ' ಸಾಂಗ್‌ನಲ್ಲಿ ಇಮ್ರಾನ್ ಹಶ್ಮಿ ತುಟಿಗೆ ತುಟಿ ಒತ್ತಿ ರಾತ್ರೋರಾತ್ರಿ ಫೇಮಸ್ ಆದ ನಟಿ ತನುಶ್ರೀ ದತ್ತಾ. ಮೀಟೂ ಅಭಿಯಾನ ಜೋರಾಗಿದ್ದ ಸಮಯದಲ್ಲಿ ನಟ ನಾನಾ ಪಾಟೇಕರ್ ವಿರುದ್ದ ಗಂಭೀರ ಆರೋಪ ಮಾಡಿದ್ದ ಚೆಲುವೆ ಈಗ ಮತ್ತೊಮ್ಮೆ ಗುಡುಗಿದ್ದಾರೆ.
ಮೀಟೂ ಬಿರುಗಾಳಿ ಎಬ್ಬಿಸಿದ್ದ ತನುಶ್ರೀ ಆ ನಂತರ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸಲಿಲ್ಲ. ತನುಶ್ರೀ ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಮೌನ ಮುರಿದ ಮೇಲೆ ಸಾಕಷ್ಟು ನಟಿಯರು ತಮಗಾದ ಕೆಟ್ಟ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ನಂತರದ ದಿನಗಳಲ್ಲಿ ತನುಶ್ರೀಗೆ ಚಿತ್ರರಂಗದಲ್ಲಿ ಅಷ್ಟಾಗಿ ಅವಕಾಶಗಳು ಸಿಗಲಿಲ್ಲ. ಅದಕ್ಕೂ ಬಾಲಿವುಡ್ ಮಾಫಿಯಾ ಕಾರಣ ಅಂತ ಆಕೆ ಆರೋಪಿಸುತ್ತಾ ಬಂದಿದ್ದಾರೆ. ಇದೀಗ ಮತ್ತೊಮ್ಮೆ ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ನಟಿ 'ನನ್ನ ಪ್ರಾಣಕ್ಕೇನಾದರೂ ಹಾನಿಯಾದರೆ ಅದಕ್ಕೆ ನಾನಾ ಪಾಟೇಕರ್, ಮತ್ತವರ ಬಾಲಿವುಡ್ ಮಾಫಿಯಾ ಫ್ರೆಂಡ್ಸ್ ಕಾರಣ' ಎಂದಿದ್ದಾರೆ.
ಇದೇನಾ
ರಾಮರಾಜ್ಯ?
ಉತ್ತರ
ಕೊಡಿ
ಮೋದಿಜೀ
:
ಪ್ರಧಾನಿಗೆ
ತನುಶ್ರೀ
ದತ್ತ
ಪ್ರಶ್ನೆ
'ಬಾಲಿವುಡ್ ಮಾಫಿಯಾ ಯಾರು ಅಂದರೆ? ಸುಶಾಂತ್ ಸಿಂಗ್ ನಿಧನರಾದಾಗ ಯಾರ ಹೆಸರುಗಳು ಕೇಳಿಬಂದಿತ್ತೋ ಅವರೆಲ್ಲರೂ ಬಾಲಿವುಡ್ ಮಾಫಿಯಾದಲ್ಲಿ ಇರುವವರೇ. ದಯವಿಟ್ಟು ಅವರ ಸಿನಿಮಾಗಳನ್ನು ನೋಡಬೇಡಿ, ಅವರನ್ನು ಸಂಪೂರ್ಣವಾಗಿ ಬಾಯ್ಕಾಟ್ ಮಾಡಿ. ನನ್ನ ಬಗ್ಗೆ ಸುಳ್ಳು ಪ್ರಚಾರ ಮಾಡಿದವರನ್ನು ಸುಮ್ಮನೆ ಬಿಡಬೇಡಿ. ಈ ನ್ಯಾಯಸ್ಥಾನ ನನ್ನ ವಿಚಾರದಲ್ಲಿ ವಿಫಲವಾಗಿದ್ದರೂ ಜನರ ಬಗ್ಗೆ ನನಗೆ ನಂಬಿಕೆ ಇದೆ. ಜೈ ಹಿಂದ್, ಬಾಯ್, ಮತ್ತೆ ಸಿಗೋಣ' ಎಂದು ಬರೆದುಕೊಂಡಿದ್ದಾರೆ.
ರಣ್‌ವೀರ್ ಸಿಂಗ್ ಮಾತಾಡಿ ಎಂದ ತನುಶ್ರೀ
ಬಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕಿರುವ ರಣ್‌ವೀರ್ ಸಿಂಗ್ ಫೋಟೊಶೂಟ್ ಬಗ್ಗೆಯೂ ತನುಶ್ರೀ ದತ್ತಾ ಪೋಸ್ಟ್ ಮಾಡಿದ್ದಾರೆ. '2022ರಲ್ಲಿ ಬೆತ್ತಲೆ ಫೋಟೊ ಶೂಟ್ ಮಾಡಿಸುವುದರಲ್ಲಿ ವಿಶೇಷ ಏನಿದೆ? 'ಆಶಿಕ್ ಬನಾಯಾ ಅಪ್ನೆ' ಹಾಡು ಬಂದಾಗಿನಿಂದ ನಾನು ಇದೇ ಪ್ರಶ್ನೆ ಕೇಳಿಕೊಳ್ಳುತ್ತಿದ್ದೇನೆ. ಹಾಡಿನಲ್ಲಿದ್ದ ಹಾಟ್ ದೃಶ್ಯಗಳು, ಕಿಸ್ಸಿಂಗ್ ಬಗ್ಗೆ ಆ ನಟನನ್ನು ಯಾರು ಏನು ಕೇಳಲಿಲ್ಲ. ನಾನೊಬ್ಬಳೇ ಅದರಲ್ಲಿ ಭಾಗವಹಿಸಿರಲಿಲ್ಲ. ಹಾಡನ್ನು ಕೊರಿಯೋಗ್ರಾಫ್ ಮಾಡಿದ್ದು ಯಾರು ? ಯಾರ ಐಡಿಯಾ ಅದು? ಅನ್ನುವುದರ ಬಗ್ಗೆ ಯಾರು ಕೇಳಲಿಲ್ಲ. ಆ ನಂತರ ಹಾಡಿನಲ್ಲಿ ನಾನು ಕಾಣಿಸಿಕೊಂಡಿದ್ದು ನನ್ನ ತಪ್ಪು ಅಂತ ಗೊತ್ತಾಯ್ತು. ಬಾಲಿವುಡ್ ಮಾಫಿಯಾ ಹೇಗೆಲ್ಲಾ ಕೆಲಸ ಮಾಡುತ್ತದೆ ಅನ್ನುವುದಕ್ಕೆ ಇದು ಒಂದು ಉದಾಹರಣೆ. ರಣ್‌ವೀರ್ ಸಿಂಗ್ ನೀವು ಮಾತನಾಡಬೇಕು' ಎಂದು ಪೋಸ್ಟ್ ಮಾಡಿದ್ದಾರೆ.
ಮೀಟೂ
ಪ್ರಕರಣದಲ್ಲಿ
ನಾನಾ
ಪಾಟೇಕರ್
ಗೆ
ಬಿಗ್
ರಿಲೀಫ್

ನಾನಾ ಪಾಟೇಕರ್ ವಿರುದ್ಧ ಗುಡುಗಿದ್ದ ತನುಶ್ರೀ
4 ವರ್ಷಗಳ ಹಿಂದೆ ನಟಿ ತನುಶ್ರೀ ದತ್ತಾ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಮೀಟು ಆರೋಪ ಮಾಡಿದ್ದರು. 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ನಾನಾ ಪಾಟೇಕರ್, ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀರ್ ಸಿದ್ಧಿಕಿ ಹಾಗೂ ನಿರ್ದೇಶಕ ರಾಕೇಶ್ ಸಾಗರ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟನೆ
ಇತ್ತೀಚಿನ ದಿನಗಳಲ್ಲಿ ತನುಶ್ರೀ ದತ್ತಾ ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ. ಬಹುತೇಕ ಬಾಲಿವುಡ್ ಸಿನಿಮಾಗಳಲ್ಲೇ ನಟಿಸಿರೋ ಈ ಜಾರ್ಖಂಡ್ ಮೂಲದ ಚೆಲುವೆ ಒಂದು ತೆಲುಗು ಮತ್ತು ಒಂದು ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಮೀಟೂ ಪ್ರಕರಣದ ನಂತರ ತನುಶ್ರೀ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟರು.

ತಲೆ ಬೋಳಿಸಿಕೊಂಡಿದ್ದ ತನುಶ್ರೀ ದತ್ತಾ
ಕೆಲ ವರ್ಷಗಳ ಹಿಂದೆ ತನುಶ್ರೀ ದತ್ತಾ ತಲೆ ಬೋಳಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದನ್ನು ನೋಡಿದವರು ಆಕೆ ಸನ್ಯಾಸಿನಿ ಆಗಿದ್ದಾಳೆ ಅಂದುಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟಿ 'ಚಿತ್ರರಂಗದ ಆತ್ಮವಂಚನೆ ನೋಡಿ ಸಾಕಾಯಿತು. ಬಾಲಿವುಡ್‌ನಲ್ಲಿ ಭಗ್ನ ಹೃದಯಿಗಳು, ಹೃದಯ ಚೋರರು ಸಾಕಷ್ಟು ಮಂದಿ ಇದ್ದಾರೆ. ಜೀವನ ಇಷ್ಟೇ ಅಲ್ಲ, ಇದರಾಚೆಗೂ ಸೌಂದರ್ಯವಿದೆ. ತಲೆ ಬೋಳಿಸಿಕೊಂಡು ಓಡಾಡುವುದರಿಂದ ನನ್ನನ್ನು ಯಾರು ಗುರುತು ಹಿಡಿಯುವುದಿಲ್ಲ. ಆರಾಮಾಗಿ ಎಲ್ಲೆಂದರಲ್ಲಿ ಓಡಾಡುತ್ತಿರುತ್ತೀನಿ, ನೆಮ್ಮದಿ ಸಿಕ್ಕಿದೆ' ಎಂದಿದ್ದರು.