For Quick Alerts
  ALLOW NOTIFICATIONS  
  For Daily Alerts

  ತನ್ನ ಡ್ರಗ್ಸ್ ಸೇವನೆ ಪರೀಕ್ಷಾ ವರದಿಯನ್ನು ಬಹಿರಂಗಗೊಳಿಸಿದ ನಟಿ

  |

  ಈಗ ಎಲ್ಲೆಡೆ ಡ್ರಗ್ಸ್‌ನದ್ದೇ ಚರ್ಚೆ. ಡ್ರಗ್ಸ್‌ ಪ್ರಕರಣ ಯಾರ ಕೊರಳಿಗೆ ಸಿಕ್ಕಿಹಾಕಿಕೊಳ್ಳುತ್ತದೆಯೋ, ಯಾರು ಜೈಲು ಪಾಲಾಗುತ್ತಾರೋ ಎಂದು ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ ಎಷ್ಟೋ ಮಂದಿ ಸಿನಿಮಾ ಸೆಲೆಬ್ರಿಟಿಗಳು.

  ನಟಿ ರಾಗಿಣಿ, ಸಂಜನಾ ಈಗಾಗಲೇ ಜೈಲು ಸೇರಿದ್ದಾರೆ. ದಿಗಂತ್, ಐಂದ್ರಿತಾ ರೇ, ಯೋಗಿ, ಅಕುಲ್ ಬಾಲಾಜಿ, ನಿರೂಪಕಿ ಅನುಶ್ರೀ ಇನ್ನೂ ಹಲವು ಸೆಲೆಬ್ರಿಟಿಗಳು ಈಗಾಗಲೇ ವಿಚಾರಣೆ ಎದುರಿಸಿದ್ದಾರೆ.

  'ವಿಚಾರಣೆಗೆ ಕರೆದಿದ್ದಾರೆ ಅಷ್ಟೇ, ನಾನು ಅಪರಾಧಿಯಲ್ಲ': ಅನುಶ್ರೀ ಮಾಧ್ಯಮ ಪ್ರಕಟಣೆ'ವಿಚಾರಣೆಗೆ ಕರೆದಿದ್ದಾರೆ ಅಷ್ಟೇ, ನಾನು ಅಪರಾಧಿಯಲ್ಲ': ಅನುಶ್ರೀ ಮಾಧ್ಯಮ ಪ್ರಕಟಣೆ

  ಇನ್ನು ಬಾಲಿವುಡ್‌ನಲ್ಲಿ ನಟಿ ರಿಯಾ ಚಕ್ರವರ್ತಿ ಜೈಲು ಪಾಲಾಗಿದ್ದಾರೆ. ನಟಿ ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಅವರುಗಳನ್ನು ವಿಚಾರಣೆಗೆ ಕರೆಯಲಾಗಿದೆ. ಪರಿಸ್ಥಿತಿ ಹೇಗಾಗಿದೆಯೆಂದರೆ, ಯಾವ ನಟ ಅಥವಾ ನಟಿ ಮಾದಕ ವಸ್ತು ವ್ಯಸನಿಗಳಲ್ಲ ಎಂಬುದು ಊಹಿಸುವುದೇ ಕಷ್ಟವಾಗಿಬಿಟ್ಟಿದೆ ಅಭಿಮಾನಿಗಳಿಗೆ.

  ಸ್ವಯಂಪ್ರೇರಿತವಾಗಿ ಟೆಸ್ಟ್ ಮಾಡಿಸಿಕೊಂಡ ನಟಿ

  ಸ್ವಯಂಪ್ರೇರಿತವಾಗಿ ಟೆಸ್ಟ್ ಮಾಡಿಸಿಕೊಂಡ ನಟಿ

  ಡ್ರಗ್ಸ್ ಪ್ರಕರಣ ಪ್ರಾರಂಭವಾದಾಗಿನಿಂದಲೂ ಎಲ್ಲಾ ನಟ-ನಟಿಯರನ್ನೂ ಜನರು ಅನುಮಾನದ ಕಣ್ಣುಗಳಿಂದಲೇ ನೋಡುತ್ತಿದ್ದಾರೆ. ಹಾಗಾಗಿ ಬಾಲಿವುಡ್‌ನ ನಟಿಯೊಬ್ಬರು ಸ್ವ-ಇಚ್ಛೆಯಿಂದ ಡ್ರಗ್ಸ್ ಸೇವನಾ ಪರೀಕ್ಷೆಗೆ ಒಳಗಾಗಿ ಅದರ ವರದಿಯನ್ನು ಬಹಿರಂಗಗೊಳಿಸಿದ್ದಾರೆ.

  ಟೆಸ್ಟ್ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

  ಟೆಸ್ಟ್ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

  ಬಾಲಿವುಡ್ ನಟಿ ಟಿಯಾ ಬಾಜಪೇಯಿ, ಸ್ವ-ಇಚ್ಛೆಯಿಂದ ಡ್ರಗ್ಸ್ ಟೆಸ್ಟ್‌ ಗೆ ಒಳಗಾಗಿ ಅದರ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಾರೋ ಕೆಲವರ ಮೇಲೆ ಆರೋಪ ಬಂದಿದೆ ಎಂದು ಎಲ್ಲ ನಟಿಯರನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಡಿ ಎಂದು ಮನವಿ ಮಾಡಿದ್ದಾರೆ.

  ಡ್ರಗ್ಸ್ ಪ್ರಕರಣ: ಬಾಲಿವುಡ್ ಸ್ಟಾರ್ ನಟರು ಮೌನವಹಿಸಿದ್ದೇಕೆ?ಡ್ರಗ್ಸ್ ಪ್ರಕರಣ: ಬಾಲಿವುಡ್ ಸ್ಟಾರ್ ನಟರು ಮೌನವಹಿಸಿದ್ದೇಕೆ?

  ಎಲ್ಲ ಸೆಲೆಬ್ರಿಟಿಗಳು ಟೆಸ್ಟ್ ಮಾಡಿಸಿಕೊಳ್ಳಿ: ನಟಿ ಸಲಹೆ

  ಎಲ್ಲ ಸೆಲೆಬ್ರಿಟಿಗಳು ಟೆಸ್ಟ್ ಮಾಡಿಸಿಕೊಳ್ಳಿ: ನಟಿ ಸಲಹೆ

  ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಡಿ, ಹಲವು ನಟ-ನಟಿಯರು ಡ್ರಗ್ಸ್‌ನಿಂದ ದೂರವಿದ್ದಾರೆ. ಸೆಲೆಬ್ರಿಟಿಗಳು ಸಹ ನೀವು ವ್ಯಸನಿಗಳಲ್ಲವೆಂದು, ಜನರಿಂದ ನಿಂದನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬೇಕೆಂದರೆ ಸ್ವ-ಇಚ್ಛೆಯಿಂದ ಡ್ರಗ್ಸ್‌ ಟೆಸ್ಟ್‌ಗೆ ಒಳಗಾಗಿ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

  SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Filmibeat
  ಎನ್‌ಸಿಬಿ ಎದುರು ವಿಚಾರಣೆಗೆ ಹಾಜರು

  ಎನ್‌ಸಿಬಿ ಎದುರು ವಿಚಾರಣೆಗೆ ಹಾಜರು

  ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಇಂದು ಎನ್‌ಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದರು. ನಟಿ ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ನಾಳೆ ಅಥವಾ ನಾಡಿದ್ದು ಎನ್‌ಸಿಬಿ ಮುಂದೆ ಹಾಜರಾಗುವ ಸಾಧ್ಯತೆ ಇದೆ.

  English summary
  Actress Tia Bajpeyi undergone drug test and shows her test report o social media. She request other celebrities to follow her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X