For Quick Alerts
  ALLOW NOTIFICATIONS  
  For Daily Alerts

  ರಂಗೀಲಾ ಬೆಡಗಿ ಊರ್ಮಿಳಾ ಸದ್ದಿಲ್ಲದೆ ಮದ್ವೆ

  By ಜೇಮ್ಸ್ ಮಾರ್ಟಿನ್
  |

  ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ ಅವರ ಮದುವೆ ಚಿತ್ರಕ್ಕಾಗಿ ಕಾಯುತ್ತಿದ್ದ ಸಿನಿರಸಿಕರಿಗೆ ರಂಗೀಲಾ ಬೆಡಗಿ ಊರ್ಮಿಳಾ ಮಾತೋಂಡ್ಕರ್ ಮದುವೆ ಸುದ್ದಿ ಸಿಕ್ಕಿದೆ. ಮಾರ್ಚ್ 03, 2016ರಂದು ಕಾಶ್ಮೀರಿ ಉದ್ಯಮಿಯೊಬ್ಬರನ್ನು ವರಿಸಿದ್ದಾರೆ.

  ಕಾಶ್ಮೀರ ಮೂಲದ ಉದ್ಯಮಿ, ರೂಪದರ್ಶಿ ಮೊಹ್ಸಿನ್ ಅಖ್ತರ್ ಮೀರ್ ಅವರನ್ನು ಊರ್ಮಿಳಾ ಅವರು ಮದುವೆಯಾಗಿದ್ದಾರೆ. ದಂಪತಿಗಳನ್ನು ಹರಸಲು ಆಪ್ತ ಬಂಧುಮಿತ್ರರು ಮಾತ್ರ ಹಾಜರಿದ್ದರು ಎಂದು ತಿಳಿದು ಬಂದಿದೆ.[ಉದ್ಯಮಿ ಜೊತೆ ಸಪ್ತಪದಿ ತುಳಿದ ನಟಿ ಅಸಿನ್]

  ಊರ್ಮಿಳಾ ವಿವಾಹ ಸಮಾರಂಭಕ್ಕೆ ಬಾಲಿವುಡ್ ನಟ, ನಟಿಯರಿಗೆ ಸೆಲೆಬ್ರಿಟಿಗಳಿಗೆ ಆಹ್ವಾನವಿರಲಿಲ್ಲವಂತೆ. ಕುಟುಂಬ ಸದಸ್ಯರು ಮತ್ತು ಗೆಳಯರು ಮಾತ್ರ ಬಂದಿದ್ದರು. ಖ್ಯಾತ ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ವಿನ್ಯಾಸ ಲೆಹೆಂಗಾ ತೊಟ್ಟ ಊರ್ಮಿಳಾ ಮಿಂಚುತ್ತಿದ್ದರು. [ಸದ್ಯದಲ್ಲೇ ಹಸೆಮಣೆ ಏರ್ತಾರಂತೆ ಪ್ರಿಯಾಂಕ ಚೋಪ್ರಾ]

  ರಾಮ್ ಗೋಪಾಲ್ ವರ್ಮಾ ಅವರ ಗರಡಿಯಿಂದ ಬೆಳಕಿಗೆ ಬಂದ ಪ್ರತಿಭೆ ಊರ್ಮಿಳಾ ಅವರು ಸತ್ಯ, ರಂಗೀಲ, ಜುದಾಯಿ, ದೌಡ್ ಹಾಗೂ ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದಾರೆ.

  ತಮ್ಮ ಮಾಜಿ ಗೆಳತಿ ಊರ್ಮಿಳಾ ಮದುವೆ ಸುದ್ದಿ ತಿಳಿದ ಬಳಿಕ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ಅವರು ಅತ್ಯಂತ ಸುಂದರ ಹಾಗೂ ಪ್ರತಿಭೆಯುಳ್ಳ ನಟಿ, ಅವಳ ಜೀವನ' ರಂಗೀಲ ಮಯವಾಗಿರಲಿ ಎಂದು ಹಾರೈಸಿದ್ದಾರೆ. ಇನ್ನಷ್ಟು ಚಿತ್ರಗಳನ್ನು ಮುಂದಿನ ಸ್ಲೈಡ್ ಗಳಲ್ಲಿ ನೋಡಿ...

  ಮರಾಠಿ ಬೆಡಗಿಗೆ ಕಾಶ್ಮೀರಿ ಹುಡುಗ

  ಮರಾಠಿ ಬೆಡಗಿಗೆ ಕಾಶ್ಮೀರಿ ಹುಡುಗ

  42 ವರ್ಷ ವಯಸ್ಸಿನ ಊರ್ಮಿಳಾಗಿಂತ ಸರಿ ಸುಮಾರು 10 ವರ್ಷ ಚಿಕ್ಕವರಾದ ಮೊಹ್ಸಿನ್ ಅವರು ಕಾಶ್ಮೀರದಲ್ಲಿ ಕಸೂತಿ ವಿನ್ಯಾಸ ಉದ್ಯಮ ನಡೆಸುತ್ತಿದ್ದಾರೆ.

  ಮೋಹ್ಸಿನ್ ಭೇಟಿಯಾಗಿದ್ದು ಹೇಗೆ?

  ಮೋಹ್ಸಿನ್ ಭೇಟಿಯಾಗಿದ್ದು ಹೇಗೆ?

  2014ರಲ್ಲಿ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದ ನಟಿ ಊರ್ಮಿಳಾ ಅವರು ಮೋಹ್ಸಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಎರಡು ವರ್ಷಗಳ ಗೆಳೆತನ, ಪ್ರೇಮ, ಸುತ್ತಾಟದ ನಂತರ ಇಬ್ಬರು ಮದುವೆಯಾಗಿದ್ದಾರೆ.

  ಮನೀಶ್ ಮಲ್ಹೋತ್ರಾ ವಿನ್ಯಾಸದ ದಿರಿಸು

  ಮನೀಶ್ ಮಲ್ಹೋತ್ರಾ ವಿನ್ಯಾಸದ ದಿರಿಸು

  ಖ್ಯಾತ ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ವಿನ್ಯಾಸ ಲೆಹೆಂಗಾ ತೊಟ್ಟ ಊರ್ಮಿಳಾ ಮಿಂಚುತ್ತಿದ್ದರು.

  90ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ ಊರ್ಮಿಳಾ

  90ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ ಊರ್ಮಿಳಾ

  90ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ ಊರ್ಮಿಳಾ ನಂತರ ಸಿನಿಮಾ ಬದುಕಿನಿಂದ ಮರೆಯಾಗಿದ್ದರು. ಆರ್ ಜಿವಿ ಸೇರಿದಂತೆ ಕೆಲ ನಟರ ಜೊತೆ ಕೂಡಾ ಲಿಂಕ್ ಅಪ್ ಸ್ಟೋರಿಗಳು ಕೇಳಿ ಬಂದಿತ್ತು.

  2014ರಲ್ಲಿ ಮರಾಠಿ ಚಿತ್ರವೊಂದರಲ್ಲಿ ನಟಿಸಿದ್ದು

  2014ರಲ್ಲಿ ಮರಾಠಿ ಚಿತ್ರವೊಂದರಲ್ಲಿ ನಟಿಸಿದ್ದು

  ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಊರ್ಮಿಳಾ ಅವರು ನಟಿಸಿರುವ 'ಫೂಲೋಂಕಾ ತಾರೋಂಕಾ ಸಬ್ ಕಾ ಕೆಹನಾ ಹೈ' ಹಾಡು ಯಾರು ಮರೆಯುವಂತಿಲ್ಲ. ಹಿಂದಿ ಅಲ್ಲದೆ ತಮಿಳು, ತೆಲುಗು ಭಾಷೆಯಲ್ಲಿ ಕೂಡಾ ಊರ್ಮಿಳಾ ಮಿಂಚಿದರು. 2014ರಲ್ಲಿ ಮರಾಠಿ ಚಿತ್ರವೊಂದರಲ್ಲಿ ನಟಿಸಿದ್ದು ಬಿಟ್ಟರೆ 42 ವರ್ಷ ವಯಸ್ಸಿನ ನಟಿ, ಮತ್ತೆ ಚಿತ್ರರಂಗಕ್ಕೆ ಕಾಲಿರಿಸುತ್ತಾರೆ ಎಂಬ ನಂಬಿಕೆ ಆಕೆ ಅಭಿಮಾನಿಗಳಲ್ಲಿ ಮಾತ್ರ ಇತ್ತು.

  ರಿಯಾಲಿಟಿ ಶೋ ಜಡ್ಜ್ ಆಗಿದ್ದ ಊರ್ಮಿಳಾ

  ರಿಯಾಲಿಟಿ ಶೋ ಜಡ್ಜ್ ಆಗಿದ್ದ ಊರ್ಮಿಳಾ

  ರಿಯಾಲಿಟಿ ಶೋ ಜಡ್ಜ್ ಆಗಿ 2008ರಲ್ಲೆ ಕಿರುತೆರೆ ಊರ್ಮಿಳಾ ಎಂಟ್ರಿ ಕೊಟ್ಟರು. ವಾರ್ ಪರಿವಾರ್. 2011ರಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಚಕ್ ಧೂಮ್ ಧೂಮ್, 2012ರಲ್ಲಿ ಜೀ ಮರಾಠಿಗಾಗಿ ಡ್ಯಾನ್ಸ್ ಶೋ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದರು.

  ಬೋಲ್ಡ್ ಅಂಡ್ ಬ್ಯೂಟೀಫಲ್ ಊರ್ಮಿಳಾ

  ಬೋಲ್ಡ್ ಅಂಡ್ ಬ್ಯೂಟೀಫಲ್ ಊರ್ಮಿಳಾ

  ರಾಮ್ ಗೋಪಾಲ್ ವರ್ಮಾ ಅವರ ಗರಡಿಯಿಂದ ಬೆಳಕಿಗೆ ಬಂದ ಪ್ರತಿಭೆ ಊರ್ಮಿಳಾ ಅವರು ಸತ್ಯ, ರಂಗೀಲ, ಜುದಾಯಿ, ದೌಡ್ ಹಾಗೂ ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದಾರೆ.

  ರಾಮ್ ಗೋಪಾಲ್ ವರ್ಮಾ ಟ್ವೀಟ್

  ರಾಮ್ ಗೋಪಾಲ್ ವರ್ಮಾ ಟ್ವೀಟ್

  ತಮ್ಮ ಮಾಜಿ ಗೆಳತಿ ಊರ್ಮಿಳಾ ಮದುವೆ ಸುದ್ದಿ ತಿಳಿದ ಬಳಿಕ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ಅವರು ಅತ್ಯಂತ ಸುಂದರ ಹಾಗೂ ಪ್ರತಿಭೆಯುಳ್ಳ ನಟಿ, ಅವಳ ಜೀವನ' ರಂಗೀಲ ಮಯವಾಗಿರಲಿ ಎಂದು ಹಾರೈಸಿದ್ದಾರೆ. ಚಿತ್ರದಲ್ಲಿ ವಿನ್ಯಾಸಕ ಮನೀಶ್ ಜೊತೆ ಊರ್ಮಿಳಾ.

  English summary
  While all the eyes are waiting for new bride of B-town, Preity Zinta's wedding pictures, actress Urmila Matondkar secretly got married today (March 3, 2016) to a Kashmir based businessman-model, Mohsin Akhtar Mir in close-knit ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X