Don't Miss!
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- News
ಫೆ. 6ಕ್ಕೆ ಮೋದಿಯಿಂದ ತುಮಕೂರಿನ ಎಚ್ಎಎಲ್ ಘಟಕ ಉದ್ಘಾಟನೆ
- Finance
PF New Rule: ತೆರಿಗೆ ತಪ್ಪಿಸಬೇಕಾದರೆ ಪಿಎಫ್ ಹೊಸ ನಿಯಮ ತಿಳಿಯಿರಿ!
- Sports
IND vs AUS: "ಆಸೀಸ್ ಆಟಗಾರರ ತಲೆಯಲ್ಲಿ ಕೇವಲ ಭಾರತದ ಈ ಸ್ಪಿನ್ನರ್ನದ್ದೇ ಯೋಚನೆ"
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Lifestyle
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ಊರ್ವಶಿ ರೌಟೆಲ್ಲ ಉಟ್ಟಿರುವ ಸೀರೆಯ ಬೆಲೆ ಕೇಳಿ ಹೌಹಾರದಿರಿ!
ನಟಿಯರು, ಅದರಲ್ಲೂ ಬಾಲಿವುಡ್ ನಟಿಯರು ಸಿನಿಮಾ ಅವಾರ್ಡ್ ಫಂಕ್ಷನ್‌ಗಳಿಗೆ, ಸಿನಿಮಾ ಉತ್ಸವಗಳಿಗೆ ಚಿತ್ರ-ವಿಚಿತ್ರ ಮಾದರಿಯ ಉಡುಪು ಧರಿಸಿ ಬರುವುದು ಸಾಮಾನ್ಯ. ಅದಕ್ಕೆಲ್ಲಾ ಭಾರಿ ಬೆಲೆಯನ್ನೇ ನಟಿಯರು ತೆತ್ತಿರುತ್ತಾರೆ.
ತಮ್ಮ ಗ್ಲಾಮರಸ್ ಲುಕ್, ಉಡುಪಿನಿಂದ ಖ್ಯಾತಿಯಾಗಿರುವ ನಟಿ ಊರ್ವಶಿ ರೌಟೆಲ್ಲ ಅಪರೂಕ್ಕೆ ಸೀರೆ ಉಟ್ಟಿದ್ದಾರೆ. ಬಣ್ಣ-ಬಣ್ಣದ ಸೀರೆ ಉಟ್ಟು ಫೋಸ್ ಕೊಡುತ್ತಿರುವ ಊರ್ವಶಿಯ ಫೊಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಆದರೆ ಹೀಗೆ ವೈರಲ್ ಆಗಲು ಕಾರಣ ಊರ್ವಶಿ ಅಲ್ಲ ಬದಲಿಗೆ ಅವರುಟ್ಟಿರುವ ಸೀರೆ.
ಹೌದು, ಊರ್ವಶಿ ರೌಟೆಲ್ಲ ಉಟ್ಟಿರುವ ಸೀರೆ ಸಾಮಾನ್ಯವಾದ ಸೀರೆಯಲ್ಲ. ಭಾರಿ ದುಬಾರಿ ಬೆಲೆಯ ಸೀರೆ ಉಟ್ಟಿದ್ದಾರೆ ಊರ್ವಶಿ. ಈ ಸೀರೆಗೆ ಹಲವು ವಿಶೇಷತೆಗಳು ಇವೆ.(Photo courtesy: Urvashi Rautela instagram)

ಅರ್ಧ ಕೋಟಿ ಬೆಲೆಯ ಸೀರೆ!
ಕನ್ನಡದ 'ಮಿಸ್ಟರ್ ಐರಾವತ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಊರ್ವಶಿ ರೌಟೆಲ್ಲ, ಇತ್ತೀಚೆಗೆ ಹಿರಿಯ ನಟ, ರಾಜಕಾರಣಿ ಮನೋಕ್ ಕುಮಾರ್ ಅವರ ಮೊಮ್ಮಗಳು ಮುಸ್ಕಾನ್ ಗೋಸ್ವಾಮಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಊರ್ವಶಿ ಉಟ್ಟಿದ್ದ ಸೀರೆಯ ಬೆಲೆ ಬರೋಬ್ಬರಿ ಅರ್ಧ ಕೋಟಿ!

58.75 ಲಕ್ಷ ಬೆಲೆಯ ಸೀರೆ
ಹೌದು, ಊರ್ವಶಿ ರೌಟೆಲ್ಲ ಅಂದು ಉಟ್ಟಿದ್ದ ಬಣ್ಣ-ಬಣ್ಣದ ಸೀರೆಯ ಬೆಲೆ ಬರೋಬ್ಬರಿ 58.75 ಲಕ್ಷ ರುಪಾಯಿ. ಊರ್ವಶಿ ಉಟ್ಟಿದ್ದು ಗುಜರಾತಿ ಪಟೋಲಾ ಸೀರೆ. ಈ ಸೀರೆಗೆ ಬಹಳ ವಿಶೇಷತೆಗಳಿವೆ. ಈ ಸೀರೆ 300 ವರ್ಷವಾದರೂ ಹಾಳಾಗುವುದಿಲ್ಲ, ಬಣ್ಣ ಕಳೆದುಕೊಳ್ಳುವುದಿಲ್ಲ.

ಸೀರೆಯ ತಯಾರಿಸುವ ಹಿಂದೆ ಹಲವು ತಿಂಗಳ ಶ್ರಮವಿದೆ
ಊರ್ವಶಿ ಉಟ್ಟಿದ್ದ ಸೀರೆಯನ್ನು ತಯಾರಿಸಲು ಆರು ತಿಂಗಳು ಹಿಡಿದಿದೆ. ಅದಕ್ಕೆ ಬಣ್ಣ ತುಂಬಲು 75 ದಿನ. ಅದನ್ನು ನೇಯಲು 25 ದಿನ ತೆಗೆದುಕೊಳ್ಳಲಾಗಿದೆ. 600 ಗ್ರಾಂಗಿಂತಲೂ ಹೆಚ್ಚು ಶುದ್ಧ ರೇಷಿಮೆ. ಸಾಮಾನ್ಯವಾಗಿ 27 ಪಟೋಲಾ ಸೀರೆಗೆ ಖರ್ಚು ಮಾಡುವಷ್ಟು ವಸ್ತುಗಳು, ಶ್ರಮವನ್ನು ಈ ಒಂದು ಸೀರೆ ತಯಾರಿಸಲು ಖರ್ಚು ಮಾಡಲಾಗಿದೆ ಎಂದು ಊರ್ವಶಿ ರೌಟೆಲಾರ ಸ್ಟೈಲಿಷ್ ತುಷಾರ್ ಕಪೂರ್ ಹೇಳಿದ್ದಾರೆ.
Recommended Video

ಕಂಗೊಳಿಸುತ್ತಿರುವ ಊರ್ವಶಿ ರೌಟೆಲ್ಲ
ಈ ದುಬಾರಿ ಪಟೋಲಾ ಸೀರೆಯ ಜೊತೆಗೆ ಅದಕ್ಕೆ ಹೊಂದುವ ರೇಷಿಮೆಯ, ತೋಳಿಲ್ಲದ ರವಿಕೆ. ವಜ್ರದ ಸರ, ನೀಲಿ ಬಣ್ಣ ಮುನ್ನೆಲೆಯಲ್ಲಿ ಕಾಣುವಂಥಹಾ ಮೇಕಪ್ ಹಾಗೂ ಮುಂಗುರುಳು ತೂಗಾಡುವಂಥೆ ಹೇರ್‌ಸ್ಟೈಲ್ ಮಾಡಿಕೊಂಡು ಸಖತ್ ಮಿಂಚುತಿದ್ದರು.