For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!

  |

  ಪ್ರಭಾಸ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆದಿಪುರುಷ್' ಟೀಸರ್ ನಿನ್ನೆ (ಅಕ್ಟೋಬರ್ 02) ರಿಲೀಸ್ ಆಗಿದೆ. ಈ ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರು ಕಿಡಿಕಾರಿದ್ದರು. ಟೀಸರ್‌ನಲ್ಲಿರೋ ಗ್ರಾಫಿಕ್ಸ್ ನೋಡಿ ಆಕ್ರೋಶ ಹೊರ ಹಾಕಿದ್ದರು.

  ಭಾರತದ ಯಾವುದೇ ಸಿನಿಮಾದ ಟೀಸರ್ ಈ ಮಟ್ಟಿಗೆ ಟೀಕೆಗೆ ಗುರಿಯಾಗಿರಲಿಲ್ಲ. ಆ ಮಟ್ಟಿಗೆ 'ಆದಿಪುರುಷ್' ಟೀಸರ್ ಅನ್ನು ಟೀಕಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಕಳಪೆ ಮಟ್ಟದ ಗ್ರಾಫಿಕ್ಸ್ ಬಗ್ಗೆ ಕಿಡಿಕಾರುತ್ತಲೇ ಇದ್ದಾರೆ.

  ನೆಟ್ಟಿಗರು 'ಆದಿಪುರುಷ್' ತಂಡಕ್ಕೆ ವಿಎಫ್‌ಎಕ್ಸ್ ಟೀಮ್ ಅನ್ನು ಬದಲಾಯಿಸುವಂತೆ ಒತ್ತಡ ಹೇರುತ್ತಿದ್ದಾರೆ. ಗ್ರಾಫಿಕ್ಸ್ ಗುಣಮಟ್ಟವನ್ನು ಹೆಚ್ಚಿಸಿ ಅಥವಾ ಸಿನಿಮಾ ಬಿಡುಗಡೆಯನ್ನು ಮುಂದೂಡಿ ಅಂತ ಕಿಡಿಕಾರುತ್ತಿದ್ದಾರೆ. ಪ್ರಭಾಸ್ ಅಭಿಮಾನಿಗಳು ಕೂಡ ಸಿನಿಮಾವನ್ನು ಹೊಸದಾಗಿ ಶೂಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಗ್ರಾಫಿಕ್ಸ್ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಂತೆ ವಿಎಫ್‌ಎಕ್ಸ್ ಕಂಪನಿ ಬಹಿರಂಗ ಪತ್ರ ಬರೆದಿದೆ. ಎನ್‌ ವೈ ವಿಎಫ್‌ಎಕ್ಸ್ ವಾಲಾ ಅನ್ನೋ ಕಂಪನಿ ಸಿನಿಮಾ ಬಗ್ಗೆ ಸ್ಪಷ್ಟತೆ ನೀಡಿದೆ.

  "ಮುಂಚೂಣಿಯಲ್ಲಿರುವ ವಿಎಫ್‌ಎಕ್ಸ್ ಸ್ಟುಡಿಯೋ ಎನ್‌ವೈ ವಿಎಫ್‌ಎಕ್ಸ್ ವಾಲ 'ಆದಿಪುರುಷ್' ಸಿನಿಮಾದ ಯಾವುದೇ ವಿಎಫ್‌ಎಕ್ಸ್ ಅಥವಾ ಸ್ಟೆಪಲ್ ಎಫೆಕ್ಟ್‌ಗಳಿಗಾಗಿ ಕೆಲಸ ಮಾಡಿರುವುದಿಲ್ಲ. ಕೆಲವು ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಮಾಡುತ್ತಿರುವುದಿಂದ ಇದನ್ನು ದಾಖಲೆಯಾಗಿ ಪರಿಗಣಿಸಿ, ಅಧಿಕೃತ ಪತ್ರದಲ್ಲಿ ಸ್ಪಷ್ಟತೆಯನ್ನು ನೀಡಲಾಗಿದೆ." ಎಂದು ಎನ್‌ವೈ ವಿಎಫ್‌ಎಕ್ಸ್ ವಾಲಾ ಕಂಪನಿ ತಿಳಿಸಿದೆ.

  After Heavily Trolled Adipurush Teaser: VFX company Clarifies About Graphics

  ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 'ಆದಿಪುರುಷ್' ಸಿನಿಮಾಗೆ ಭಾರಿ ಹಿನ್ನೆಡೆಯಾಗಿದೆ. 'ಆದಿಪುರುಷ್' ಸಿನಿಮಾದ ಟೀಸರ್ ಈ ಮಟ್ಟಿಗೆ ಟೀಕೆಗೆ ಗುರಿಯಾಗಿದ್ದು ನೋಡಿದರೆ, ಸಿನಿಮಾಗೆ ಬಿಡುಗಡೆಗೆ ತುಂಬಾನೇ ಪೆಟ್ಟು ಬಿದ್ದಿರೋದು ಪಕ್ಕಾ. ಹೀಗಾಗಿ ಸಿನಿಮಾ ಬಿಡುಗಡೆ ವೇಳೆಗೆ ಗ್ರಾಫಿಕ್ಸ್ ಮತ್ತಷ್ಟು ಉತ್ತಮಗೊಳ್ಳಲೇ ಬೇಕಿದೆ.

  English summary
  After Heavily Trolled Adipurush Teaser: VFX company Clarifies About Graphics, Know More,
  Tuesday, October 4, 2022, 10:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X