»   » ದೀಪಿಕಾಗೆ ರಣವೀರ್ ಕಿಸ್ ಕೊಟ್ಟಿದ್ದಕ್ಕೆ ಎಫ್ ಐಆರ್

ದೀಪಿಕಾಗೆ ರಣವೀರ್ ಕಿಸ್ ಕೊಟ್ಟಿದ್ದಕ್ಕೆ ಎಫ್ ಐಆರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಾರ್ವಜನಿಕ ವೇದಿಕೆಯಲ್ಲಿ ಅಶ್ಲೀಲ, ಅವಾಚ್ಯ, ನಿಂದನಾ ಭಾಷೆ ಬಳಕೆ ಮಾಡಿದ ಆರೋಪ ಹೊತ್ತಿರುವ ಎಬಿಐ ನಾಕೌಟ್ ತಂಡ ಕೊನೆಗೂ ವಿವಾದಿತ ವಿಡಿಯೋವನ್ನು ಯೂಟ್ಯೂಬ್ ನಿಂದ ತೆಗೆದು ಹಾಕಿ ದಿನಗಳು ಕಳೆದಿವೆ. ಅದರೂ ಹಿಂದೂ ಪರ ಸಂಘಟನೆಗಳು ಸೆಲೆಬ್ರಿಟಿಗಳ ಹಿಂದೆ ಬಿದ್ದಿವೆ. ಈಗ ಮತ್ತೊಂದು ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಸರ್ಕಾರ, ಸಂಸ್ಕೃತಿ ಇಲಾಖೆ, ಹಿಂದೂ ಪರ ಸಂಘಟನೆಗಳು, ಎಂಎನ್ಎಸ್ ನಿಂದ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನಲೆಯಲ್ಲಿ AIB Roast ವಿಡಿಯೋವನ್ನು ಒತ್ತಡಕ್ಕೆ ಮಣಿದು ತೆಗೆದು ಹಾಕಲಾಗಿತ್ತು. ಅದರೆ, ಮುಂಬೈನ ಸಾಕಿನಾಕ ಠಾಣೆಯಲ್ಲಿ ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ. ಈಗ ಪುಣೆ ಪೊಲೀಸರು ಎಫ್ ಐಆರ್ ಹಾಕಿದ್ದಾರೆ. [ಅಶ್ಲೀಲ, ಅವಾಚ್ಯ, ನಿಂದನಾ 'ಎಐಬಿ'ವಿಡಿಯೋ ಇನ್ನಿಲ್ಲ]

ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡು ಎಫ್ ಲ್ಯಾಂಗ್ವೇಜ್ ಬಳಸಿಕೊಂಡು ಉಗಿಯುವ ಎಐಬಿ ನಾಕೌಟ್ ಶೋ ಭಾರತದಲ್ಲೇ ಪ್ರಪ್ರಥಮ ಹಾಗೂ ಅಭೂತಪೂರ್ವ ಎನಿಸಿತ್ತು. ಎಂಟು ಜನ ಪ್ಯಾನೆಲ್ ಸದಸ್ಯರು ಸೇರಿಕೊಂಡು ಚಿತ್ರ ನಿರ್ಮಾಣಗಾರ ಕರಣ್ ಜೋಹರ್, ಗುಂಡೇ ಚಿತ್ರದ ಜೋಡಿ ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ಅವರನ್ನು ಹಿಗ್ಗಾ ಮುಗ್ಗಾ ಬೈದಾಡುವ ಕಾರ್ಯಕ್ರಮ ಇದಾಗಿತ್ತು.

AIB Roast Row, Pune police file FIR against Ranveer, Karan, Deepika

ಕಿಸ್ ಕೊಟ್ಟಿದ್ದು ತಪ್ಪು: ವಾಜಿರ್ ಶೇಕ್ ಎಂಬುವರು ದೂರು ನೀಡಿ, ರಣವೀರ್ ಸಿಂಗ್ ಅವರು ಸಾರ್ವಜನಿಕವಾಗಿ ದೀಪಿಕಾ ಪಡುಕೋಣೆ ಅವರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.ಆಕೆ ಕೂಡಾ ಅದನ್ನು ಪಡೆದುಕೊಂಡು ತೋರಿಸಿದ ಹಾವ ಭಾವ ಅಶ್ಲೀಲವಾಗಿತ್ತು. ಇದರಿಂದ ಯುವ ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಎಂದು ಹೇಳಿದ್ದಾರೆ. ಐಪಿಸಿ ಸೆಕ್ಷನ್ 292,294 ಹಾಗೂ ಐಟಿ ಕಾಯ್ದೆ ಸೆಕ್ಷನ್ 67ಎ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. [ಕರಣ್, ಅರ್ಜುನ್ ಮೇಲೆ ಕೇಸ್]

ಪೋರ್ನ್ ನೋಡುವುದು ತಪ್ಪಲ್ಲ ಅದರೆ, ಸಾರ್ವಜನಿಕವಾಗಿ ಪೋರ್ನ್ ಪ್ರದರ್ಶಿಸಿದರೆ ಪೊಲೀಸರ ಅತಿಥಿಗಳಾಗಬೇಕಾಗುತ್ತದೆ. ಅದೇ ರೀತಿ ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 294 ಪ್ರಕಾರ ಪಬ್ಲಿಕ್ ಆಗಿ ಕಿಸ್ ಮಾಡುವುದರಿಂದ ಹಿಡಿದು ಲೈಂಗಿಕ ಕಿರುಕುಳ, ಅಶ್ಲೀಲ ಪದ ಪ್ರಯೋಗ, ನಿಂದನೆ ಎಲ್ಲವೂ ಅಕ್ಷಮ್ಯವಾಗುತ್ತದೆ. ಹೀಗಾಗಿ ಕಾಮಿಡಿ ಶೋ 18+ ಆದರೂ ಅನುಮತಿ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕಿತ್ತು.

English summary
In the latest development of the AIB Roast controversy, a police inspector has filed a First Information Report or FIR in Pune, naming Arjun Kapoor, Ranveer Singh, Karan Johar, Deepika Padukone, Sonakshi Sinha and the comedy collective AIB accusing them of obscene behaviour in a public place.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada