»   » ಮೂರು ಬಿಟ್ಟು ಮಾತಾಡಿದ್ದಕ್ಕೆ ಕರಣ್, ಅರ್ಜುನ್ ಮೇಲೆ ಕೇಸ್

ಮೂರು ಬಿಟ್ಟು ಮಾತಾಡಿದ್ದಕ್ಕೆ ಕರಣ್, ಅರ್ಜುನ್ ಮೇಲೆ ಕೇಸ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನಾಚಿಕೆ, ಮಾನ, ಮರ್ಯಾದೆ ಹೀಗೆ ಮೂರು ಬಿಟ್ಟವನು ದೇಶಕ್ಕೆ ದೊಡ್ಡವನು ಎಂಬ ಮಾತಿದೆ. ಅದರೆ, ಭಾರತದಲ್ಲಿ ಪಬ್ಲಿಕ್ ಆಗಿ ನಿಮಗೆ ಬೇಕಾದ ಭಾಷೆ ಬಳಸಿದರೆ ಮುಗಿಯಿತು ಕಥೆ. ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡು ಎಫ್ ಲ್ಯಾಂಗ್ವೇಜ್ ಬಳಸಿಕೊಂಡು ಉಗಿಯುವ ಎಐಬಿ ನಾಕೌಟ್ ಶೋಗೆ ಈಗ ಕಟಂಕ ಎದುರಾಗಿದೆ.


  ಎಐಬಿ ನಾಕೌಟ್ ನಲ್ಲಿ Lets the filth begin ಎಂದು ಕಾರ್ಯಕ್ರಮ ಶುರು ಮಾಡಿದ ಚಿತ್ರಕರ್ಮಿ ಕರಣ್ ಜೋಹರ್ ಶೋನಲ್ಲಿ ಅತಿಥಿಗಳಾಗಿ ಬಂದು ಸುಮಾರು 4000 ಜನ ಮುಂದೆ F#$K, A@#$%&e ಭಾಷೆಯಲ್ಲಿ ಉಗಿಸಿಕೊಂಡ ನಟ ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಮೇಲೆ ಹಿಂದೂ ಪರ ಸಂಘಟನೆ ಮುಖಂಡ ಕಿಡಿಕಾರಿದ್ದಾರೆ. [18+ ನಾಕೌಟ್: ಈ ವಿಡಿಯೋ ಮೂರು ಬಿಟ್ಟವರಿಗೆ ಮಾತ್ರ]

  ಸಾರ್ವಜನಿಕವಾಗಿ ಅದರಲ್ಲೂ ಮಹಿಳೆಯರಿದ್ದ ಕಾರ್ಯಕ್ರಮದಲ್ಲಿ M$%^&R F#$K ನಂಥ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪದ ಮೇಲೆ ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಅಲ್ಲದೆ ರಾಜೀವ್ ಮಸಂದ್, ರಘು ರಾಮ್, ಅದಿತಿ ಮಿತ್ತಲ್, ಕರಣ್ ಜೋಹರ್ ಹಾಗೂ ಎಐಬಿ ನಾಕೌಟ್ ತಂಡದ ಮೇಲೆ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ದೂರು ಸ್ವೀಕರಿಸಿರುವ ಹಿರಿಯ ಇನ್ಸ್ ಪೆಕ್ಟರ್ ಪ್ರಸನ್ನ ಮೋರೆ, ವಿಡಿಯೋ ವೀಕ್ಷಿಸಿ ಅಗತ್ಯ ಬಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

  ಎಐಬಿ ಮೇಲೆ ಯಾರು ದೂರು ದಾಖಲಿಸಿದ್ದು?

  ಮುಂಬೈನ ಬ್ರಾಹ್ಮಣ್ ಏಕ್ತಾ ಸೇವ ಸಂಸ್ಥಾ ಅಧ್ಯಕ್ಷ ಅಖಿಲೇಶ್ ತಿವಾರಿ ಅವರು ಮುಂಬೈನ ಸಾಕಿನಾಕ ಠಾಣೆಯಲ್ಲಿ ಸೋಮವಾರ ಲಿಖಿತ ದೂರು ನೀಡಿದ್ದಾರೆ.

  ಯುಟ್ಯೂಬ್ ಹಾಗೂ ಇತರೆ ವೆಬ್ ತಾಣಗಳಲ್ಲಿರುವ ಎಐಬಿ ನಾಕೌಟ್ ವಿಡಿಯೋದಲ್ಲಿ ಅಶ್ಲೀಲ, ಅವಾಚ್ಯ ಶಬ್ದಗಳು ತುಂಬಿವೆ. ಇದರಿಂದ ಭಾರತೀಯ ಸಂಸ್ಕೃತಿ ಹಾಗೂ ಮಹಿಳೆಯರ ಮಾನ ಹರಾಜಾಗುತ್ತಿದೆ. ಯುವಕರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

  ಏನಿದು ಎಬಿಐ ನಾಕೌಟ್, ಯಾರು ಬಂದಿದ್ದರು?

  ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಅನುರಾಗ್ ಕಶ್ಯಪ್ ಸೇರಿದಂತೆ 4000ಕ್ಕೂ ಅಧಿಕ ಜನರಿಂದ ಕಿಕ್ಕಿರಿದ ಸಭಾಂಗಣದಲ್ಲಿ ನೇರವಾಗಿ ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ರನ್ನು ಅತಿಥಿಗಳಾಗಿ ಕರೆಸಿಕೊಂಡು ಅವರ ಮೇಲೆ ಎಫ್ ಭಾಷೆ ಪ್ರಯೋಗಿಸಲಾಯಿತು. 'ಸಂತೆಯಲ್ಲಿ ನಿಂತು ಬೆತ್ತಲಾದ ಪರಿಸ್ಥಿತಿ' ತಂದು ಕೊಂಡ ಇಬ್ಬರು ಸ್ಟಾರ್ ಗಳ ಧೈರ್ಯವನ್ನು ಮೆಚ್ಚಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸಿಕ್ಕಿತು.

  ಕಾರ್ಯಕ್ರಮದಲ್ಲಿ ಏನು ಮಾತನಾಡಿದ್ರು

  Let the filth begin ಎಂದ ಕರಣ್ ಜೋಹರ್ ನಿರೂಪಕನಾಗಿ ಶೋನಲ್ಲಿ ಕಾಣಿಸಿಕೊಂಡರೂ ಉಳಿದ ಕಾಮಿಡಿಯನ್ ಗಳು ಕರಣ್ ಜೋಹರ್ ನನ್ನು ಬಿಡದೆ ಗೇಲಿ ಮಾಡಿದರು. ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಅವರ ಸಿನಿಮಾ ವೃತ್ತಿ ಬದುಕು, ನಿಜ ಜೀವನದ ಗಾಸಿಪ್, ಕೈಕೊಟ್ಟ ಹುಡುಗಿಯರು ಸೇರಿ ಎಲ್ಲವನ್ನು ಬಿಚ್ಚಿಡಲಾಯಿತು. ಇದು ಪಕ್ಕಾ ಕಾಮಿಡಿ ಶೋ ಅದರೂ 18+ ವಯೋಮಿತಿಯವರಿಗೆ ಮಾತ್ರ. ಇದರಲ್ಲಿ ಉಗಿಸಿಕೊಂಡವರು ಶುಲ್ಕ ಕೊಟ್ಟು ಶೋಗೆ ಬಂದಿದ್ದವರು

  ಏನು ಆಕ್ಷೇಪ, ಯಾವಾಗ ನಡೆದಿದ್ದು ಶೂಟಿಂಗ್

  ಅಸಲಿಗೆ ಎಐಬಿ ನಾಕೌಟ್ ಶೋ ಶೂಟಿಂಗ್ ಡಿ.20ರಂದು ನಡೆದರೂ ರಿಲೀಸ್ ಆಗಿದ್ದು ಜ.28ಕ್ಕೆ..ಶೋನಲ್ಲಿ ಬಂದ ಸ್ಯಾಂಪಲ್ ಡೈಲಾಗ್ ಇಲ್ಲಿದೆ:
  Parineeti Chopra is not here because we told her she would get fucked by 10 dudes in front of 4000 people. Karan Johar is here because we told he would get fucked by 10 dudes in front of 4000 people.

  ಸಂಸ್ಕೃತಿ ಇಲಾಖೆಯಿಂದಲೂ ತನಿಖೆ?

  ಮೂರು ಭಾಗದಲ್ಲಿ ಪ್ರಸಾರವಾಗಿರುವ ಈ ವಿಡಿಯೋ ಬಗ್ಗೆ ಮಹಾರಾಷ್ಟ್ರ ಸಂಸ್ಕೃತಿ ವ್ಯವಹಾರ ಸಚಿವ ವಿನೋದ್ ತಾವ್ಡೆ ಕೂಡಾ ತಲೆ ಕೆಡಿಸಿಕೊಂಡಿದ್ದು, ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿದೆ ಎಂದಿದ್ದಾರೆ. ಅದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಎಐಬಿ ತಂಡಕ್ಕೆ ಬೆಂಬಲ ವ್ಯಕ್ತವಾಗಿದೆ. ವಿಡಿಯೋ ಲಿಂಕ್ ಇಲ್ಲಿದೆ

  English summary
  AIB Knockout video was all about Rajeev Masand, Raghu Ram, Aditi Mittal and Karan Johar ‘roasted' each other and actors Arjun Kapoor and Ranveer Singh.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more