»   » ಆರಾಧ್ಯಾ ಆರೈಕೆಯೇ ಮುಖ್ಯ, ಸದ್ಯಕ್ಕೆ ನಟಿಸುವುದಿಲ್ಲ

ಆರಾಧ್ಯಾ ಆರೈಕೆಯೇ ಮುಖ್ಯ, ಸದ್ಯಕ್ಕೆ ನಟಿಸುವುದಿಲ್ಲ

Posted By:
Subscribe to Filmibeat Kannada

ಐಶ್ವರ್ಯಾ ರೈ ಮಗುವಿನ ತಾಯಿಯಾಗಿ ಸಾಕಷ್ಟು ಕಾಲವಾಯಿತು. ಬಚ್ಚನ್ ಕುಟುಂಬಕ್ಕೆ 'ಆರಾಧ್ಯಾ' ಎಂಬ ಮುದ್ದಾದ ಮಗು ಕಾಲಿರಿಸಿ ಜಗತ್ತೇ ಬೆರಗಾಗುವಂತೆ ಮಾಡಿದ್ದು ಈಗಲೂ ಸುದ್ದಿಯೇ. ಈ ಮಾಜಿ ವಿಶ್ವಸುಂದರಿ ತಾಯಿಯಾದ ನಂತರ ತಮ್ಮ ಮೊದಲ ಸ್ಲಿಮ್ ಬಾಡಿ ಶೇಪ್ ಕಳೆದುಕೊಂಡು ಏಕ್ ದಂ ಊದಿಕೊಂಡಿದ್ದು ಈಗ ಜಗತ್ತಿಗೆಲ್ಲಾ ಬ್ರೇಕಿಂಗ್ ನ್ಯೂಸ್!

ಐಶ್ವರ್ಯಾ ರೈ ಗರ್ಭಿಣಿ ಆದಾಗಿನಿಂದ ಹಿಡಿದು ತಾಯಿಯಾಗುವವರೆಗೂ ಪ್ರತಿಯೊಂದು ಸಂಗತಿಯೂ ಜಗತ್ತಿಗೆ ಹಾಗೂ ಮಾಧ್ಯಮದ ಪಾಲಿಗೆ ಹಾಟ್ ನ್ಯೂಸ್. ಐಶೂಗೆ ಮಗುವಾದ ನಂತರ ಮಗುವಿನ ಹೆಸರಿನ ಬಗ್ಗೆಯಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾದವು. ಈಗ ಐಶ್ವರ್ಯಾ ಮತ್ತೆ ನಟಿಸುವ ಬಗ್ಗೆ ಎಲ್ಲೆಡೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಕುರಿತು ಸ್ವತಃ ಐಶು ಟ್ವೀಟ್ ಮಾಡಿದ್ದಾರೆ.

"ತಾಯ್ತನ ನನ್ನ ಆದ್ಯತೆ. ಅದನ್ನು ಅನುಭವಿಸುತ್ತಿದ್ದೇನೆ ಮತ್ತು ಇಷ್ಟಪಡುತ್ತಿದ್ದೇನೆ. ಸಿನಿಮಾ ಜಗತ್ತಿಗೆ ಮತ್ತೆ ಹಿಂದಿರುಗುವ ಬಗ್ಗೆ ಸದ್ಯಕ್ಕೆ ಯೋಚನೆಯಿಲ್ಲ. ಮಗುವಿನ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತೇನೆ. ಆಮೇಲೆ ಮಗುವಿನ ಜೊತೆ ಕಾಲ ಕಳೆದಿಲ್ಲವೆಂಬ ಅಪರಾಧಿ ಪ್ರಜ್ಞೆ ನನಗೆ ಕಾಡಬಾರದು.

ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ದಿನ ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ. ನಾನೀಗ ಸುಖ-ಸಂತೋಷದಿಂದ ಇದ್ದೇನೆ. ಮದ್ದು ಮಗುವಿನ ಮುಖ ನೋಡದೇ ಒಂದು ಕ್ಷಣವೂ ಇರಲಾರೆ. ನನಗೀಗ ಎಲ್ಲದಕ್ಕಿಂತ ಹೆಚ್ಚು ಖುಷಿ ಕೊಡುವುದು ಆರಾಧ್ಯಾ ಆರೈಕೆಯೇ ಹೊರತೂ ಸಿನಿಮಾ ಆಗಲೀ ಅಥವಾ ಇನ್ಯಾವುದಾಗಲೀ ಅಲ್ಲ"

ಹೀಗೆಂದು ತಮ್ಮ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ ಮಾಜಿ ವಿಶ್ವ ಸುಂದರಿ, ಹಾಲಿ ಅಮ್ಮ ಐಶ್ವರ್ಯಾ ರೈ. ಐಶೂ ಶಾರುಖ್ ಖಾನ್ ಜೊತೆ ಸದ್ಯದಲ್ಲೇ ನಟಿಸಲಿದ್ದಾರೆ ಎಂಬ ಸುದ್ದಿ ಒಂದೆಡೆಯಾದರೆ, ಇಲ್ಲ.., ಪತಿ ಅಭಿಷೇಕ್ ಜೊತೆಯಲ್ಲೇ ನಟಿಸಲಿದ್ದಾರೆ ಎಂಬ ಇನ್ನೊಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿತ್ತು. ಈಗ ಎಲ್ಲದಕ್ಕೂ ಸ್ವತಃ ಐಶ್ವರ್ಯಾ ರೈ ತೆರೆಎಳೆದಿದ್ದಾರೆ. (ಏಜೆನ್ಸೀಸ್)

English summary
Aishwarya Rai Tweeted that She wont acts in any movies now. Because she wants to take care of her daughter Aradhya as primary and she is the whole world for her now. She rejected of acting in any movies totally. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada