»   » ಬಾಣಂತನ ಮುಗಿಸಿ ಬಣ್ಣ ಹಚ್ಚಿದರು ಐಶ್ವರ್ಯಾ ರೈ

ಬಾಣಂತನ ಮುಗಿಸಿ ಬಣ್ಣ ಹಚ್ಚಿದರು ಐಶ್ವರ್ಯಾ ರೈ

Posted By:
Subscribe to Filmibeat Kannada
ಬಾಲಿವುಡ್ ತಾರೆ ಐಶ್ವರ್ಯಾ ರೈ ಅವರ ಬಾಣಂತನದ ಸಿಹಿ ದಿನಗಳು ಮುಗಿದಿವೆ. ತನ್ನ ಮಗಳು ಆರಾಧ್ಯಳ ಆರೈಕೆಯಲ್ಲಿ ಕಳೆದುಹೋಗಿದ್ದ ಐಶ್ವರ್ಯಾ ಅವರ ದರ್ಶನ ಭಾಗ್ಯವಿಲ್ಲದೆ ಬಾಲಿವುಡ್ ಚಿತ್ರ ರಸಿಕರು ವಿಲವಿಲ ಎಂದು ಒದ್ದಾಡುತ್ತಿದ್ದರು. ಇದೀಗ ಮಗುವಾದ ಬಳಿಕ ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾಗೆ ತಮ್ಮ ಮುಖಾರವಿಂದ ತೋರುತ್ತಿದ್ದಾರೆ.

ಆದರೆ ಯಾವುದೋ ದೊಡ್ಡ ಬ್ಯಾನರ್ ನ ಚಿತ್ರಕ್ಕಂತೂ ಅಲ್ಲವೇ ಅಲ್ಲ. ಐಶ್ವರ್ಯಾ ಬಣ್ಣ ಹಚ್ಚಿರುವುದು ಆಭರಣ ತಯಾರಿಕಾ ಕಂಪನಿಯೊಂದರ ಪ್ರಚಾರಕ್ಕಾಗಿ. ಇತ್ತೀಚೆಗೆ ಈ ಜಾಹೀರಾತಿನ ಚಿತ್ರೀಕರಣ ನಡೆಯಿತು. ಐಶ್ವರ್ಯಾ ರೈ ಮೈಕೈ ತುಂಬಿಕೊಂಡು ಕೊಂಚ ದಪ್ಪಗಾಗಿದ್ದಾರೆ ಎಂಬುದನ್ನು ಬಿಟ್ಟರೆ ಮುಖದಲ್ಲಿನ ಆ ಆಕರ್ಷಣೆ ಮಾತ್ರ ಹಾಗೇ ಇದೆ.

ಮಗುವಾದ ಸ್ವಲ್ಪ ತಿಂಗಳಿಗೇ ಬಣ್ಣ ಹಚ್ಚಲು ಐಶ್ವರ್ಯಾ ರೈ ಅವರಿಗೆ ಆಫರ್ ಗಳು ಬಂದವು. ಆದರೆ ತನಗೆ ತನ್ನ ಮಗಳು ಆರಾಧ್ಯ ಬಚ್ಚನ್ ಆರೈಕೆಯೇ ತಮಗೆ ಮುಖ್ಯ ಎಂದು ಬಂದ ಅವಕಾಶಗಳನ್ನು ನಿರಾಕರಿಸಿದ್ದರು. ಇದೀಗ ಮೂಡಿಬಂದಿರುವ ಜಾಹೀರಾತಿನಲ್ಲಿ ಐಶ್ವರ್ಯಾ ಮೊದಲಿಗಿಂತಲೂ ಈಗ ಇನ್ನೂ ಚೆನ್ನಾಗಿ ಕಾಣುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.

ಬಳುಕುವ ಬಳ್ಳಿಯಂತಿದ್ದ ತಾರೆ ಕುಂಬಳಕಾಯಿಯಂತಾದರು ಎಂಬ ಸುದ್ದಿಗಳು ತೇಲಿಬಂದಿದ್ದವು. ಆದರೆ ಐಶ್ವರ್ಯಾ ರೈ ಮತ್ತೆ ಬಳುಕುವ ಬಳ್ಳಿಯಂತಾಗುವ ಬಗ್ಗೆ ಇನ್ನೂ ಮನಸ್ಸು ಮಾಡಿಲ್ಲ. ಸದ್ಯಕ್ಕೆ ದಢೂತಿ ದೇಹದಲ್ಲೇ ತಮ್ಮ ಚೆಲುವಿನ ಸಿರಿಯನ್ನು ಅನಾವರಣ ಮಾಡಿದ್ದಾರಂತೆ.

"ಈ ಜಾಹೀರಾತಿನಲ್ಲಿ ಕೆಲವೊಂದು ಅಂಡರ್ ವಾಟರ್ ದೃಶ್ಯಗಳೂ ಇದ್ದು ಐಶ್ವರ್ಯಾ ಮೀನಿನಂತೆ ಈಜಾಡಿದ್ದಾರೆ. ಜಾಹೀರಾತು ಮಾತ್ರ ಅದ್ಭುತವಾಗಿ ಮೂಡಿಬಂದಿದೆ" ಎನ್ನುತ್ತಾರೆ ನಿರ್ದೇಶಕ ಶ್ರೀಕುಮಾರ್. ಅವರ ಚೊಚ್ಚಲ ನಿರ್ದೇಶನದ ಜಾಹೀರಾತು ಇದಾಗಿದೆ. ಶೀಘ್ರದಲ್ಲಿ ಆಕೆ ಬೆಳ್ಳಿತೆರೆಗೆ ಬರುವ ಬಗ್ಗೆಯೂ ಸಿದ್ಧತೆಗಳು ನಡೆಯುತ್ತಿವೆ.

ಐಶ್ವರ್ಯ ಎಂಟು ತಿಂಗಳ ಮಗಳು ಆರಾಧ್ಯ ಈಗ ಬೆಳೆದಿದ್ದಾಳೆ. ಐಶ್ವರ್ಯ ರೈ ಕೂಡ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಈಗ ಒಂದೊಂದೇ ಚಿತ್ರಕತೆಗಳನ್ನು ಕೈಗೆತ್ತಿಕೊಂಡು ಯಾವುದಕ್ಕೆ ಸಹಿ ಹಾಕಬೇಕು ಎಂಬ ಚಿಂತನೆಯಲ್ಲಿದ್ದಾರೆ. ತಮಗೊಪ್ಪುವ ಸೂಕ್ತ ಕತೆ ಸಿಕ್ಕಿದರೆ ಕೂಡಲೆ ಸಹಿ ಹಾಕಲಿದ್ದಾರಂತೆ.

ಶೀಘ್ರದಲ್ಲೇ ನಿರ್ಮಾಪಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ಯಾವ ಚಿತ್ರ ಆಯ್ಕೆ ಮಾಡಿಕೊಳ್ಳಬೆಕು ಎಂಬ ಬಗ್ಗೆ ಚರ್ಚಿಸುವ ಸಮಾಚಾರವೂ ಇದೆ. ಅಮ್ಮನಾದ ಬಳಿಕ ಐಶೂ ದೇಹದಲ್ಲಿ ಭಾರಿ ಬದಲಾವಣೆಗಳು ಆಗಿದ್ದವು. ಈಗ ಆಕೆ ಕಸರತ್ತಿಗೆ ಶರಣಾಗಿದ್ದು ದೇಹವನ್ನು ಮತ್ತೆ ಬಳುಕುವ ಬಳ್ಳಿಯಂತೆ ಬಳುಕಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.(ಏಜೆನ್ಸೀಸ್)

English summary
It seems that Aishwarya Rai Bachchan is all set to make a comeback in Bollywood. The actress has not signed any film yet, but she has started facing the camera once again. Recently, Aishwarya shot a commercial for a jewellery brand.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada