For Quick Alerts
ALLOW NOTIFICATIONS  
For Daily Alerts

  ಐಶ್ವರ್ಯಾ ರೈಗೆ ಸಿಗಬೇಕಿದ್ದ ಪಾತ್ರ ರೂಪಸಿ ತಾಪ್ಸಿಗೆ?

  By Prasad
  |

  ಹೆಚ್ಚುಕಡಿಮೆ ಐವತ್ತರ ಆಸುಪಾಸಿನಲ್ಲಿರುವ ಮಾಜಿ ವಿಶ್ವ ಸುಂದರಿ, ಬಾಲಿವುಡ್ ನ ಫಸ್ಟ್ ಫ್ಯಾಮಿಲಿ ಎಂದೇ ಖ್ಯಾತಿ ಗಳಿಸಿರುವ ಅಮಿತಾಭ್ ಬಚ್ಚನ್ ಅವರ ಮುದ್ದಿನ ಸೊಸೆ ಐಶ್ವರ್ಯ ರೈ ಬಚ್ಚನ್ ಅವರು ಟೈಮೇಕೋ ಸರಿಯಿದ್ದಂತಿಲ್ಲ.

  ಅವರು ಇತ್ತೀಚಿಗೆ ಅಭಿನಯಿಸಿದ 'ಜಜ್ಬಾ' ಮತ್ತು 'ಫ್ಯಾನ್ನಿ ಖಾನ್' ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿ, ಐಶ್ವರ್ಯ ರೈ ಬಚ್ಚನ್ ಜಮಾನಾ ಮುಗಿದಿದೆ ಎಂದು ಸಾರಿವೆ. ಆದರೂ ಪ್ರಯತ್ನವನ್ನು ಬಿಡದ ಗಟ್ಟಿಗಿತ್ತಿ ಮಂಗಳೂರಿನ ಮಗಳು ಐಶು.

  ಐಶ್ವರ್ಯ ರೈ ಬಚ್ಚನ್ ಗೆ ಇದು ಕೆಟ್ಟಕಾಲ ಇರಬಹುದು.!

  ಇಷ್ಟು ಸಾಲದೆಂಬಂತೆ, ಮುಂಬರುವ ಚಿತ್ರವೊಂದರಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಬೇಕಿದ್ದ ಪಾತ್ರವನ್ನು ಅವರು ಕಳೆದುಕೊಂಡಿದ್ದಾರೆ. ಅದು, ಸದ್ಯದ ಹಾರ್ಟ್ ಥ್ರೋಬ್ ತಾಪಸಿ ಪನ್ನು ಅವರ ಪಾಲಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

  ಈ ಹೊಸ ಚಿತ್ರವನ್ನು ಶೈಲೇಶ್ ಆರ್ ಸಿಂಗ್ ಅವರು ನಿರ್ಮಿಸುತ್ತಿದ್ದು, ಐಶ್ವರ್ಯ ಅವರಿಗೆ ಜೋಡಿಯಾಗಿ ಪಾತ್ರ ವಹಿಸಬೇಕಿದ್ದವರು ಮತ್ತಾರೂ ಅಲ್ಲ, ಅವರ ಗಂಡ ಅಭಿಷೇಕ್ ಬಚ್ಚನ್. ಈ ಚಿತ್ರಕ್ಕೆ ಐಶ್ವರ್ಯ ಅವರು ಸಹಿ ಮಾಡಿರದಿದ್ದರೂ, ನಾನಾ ಕಾರಣಗಳಿಂದ ತಡವಾಗಿದ್ದರಿಂದ ಈ ಚಿತ್ರ ನಿರ್ಮಾಣವಾಗುತ್ತಿಲ್ಲ ಎಂದು ಅಭಿಷೇಕ್ ಅವರೇ ಘೋಷಿಸಿದ್ದರು.

  ಅಯ್ಯಯ್ಯೋ... ಐಶ್ವರ್ಯ ರೈ ಬಚ್ಚನ್ ಸಂಭಾವನೆಗೂ ಕತ್ರಿ ಬಿತ್ತು.!

  ಆದರೆ, ಇದೀಗ ನಡೆಯುತ್ತಿರುವ ಬೆಳವಣಿಗೆಗಳ ಪ್ರಕಾರ, ನಿರ್ಮಾಪಕರು ಚಿತ್ರಕಥೆಯ ಮೇಲೆ ಕೆಲಸ ಮಾಡುತ್ತಿದ್ದು, ಡೇರ್ ಡೆವಿಲ್ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಐಶ್ವರ್ಯ ರೈ ಬಚ್ಚನ್ ಅವರ ಬದಲು ತಾಪಸಿ ಪನ್ನು ಅವರನ್ನು ಸಂಪರ್ಕಿಸಿದ್ದಾರೆ. ಇದು ಐಶ್ವರ್ಯ ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದಕ್ಕೆ ತಾಪ್ಸಿ ಕೂಡ ಇನ್ನೂ ಒಪ್ಪಿಗೆ ಕೊಟ್ಟಿಲ್ಲ.

  ನಿರೀಕ್ಷೆಯೀಗ ಹುಸಿಯಾದಂತೆ ಕಾಣಿಸುತ್ತಿದೆ

  ಐಶ್ವರ್ಯ ರೈ ಬಚ್ಚನ್ ಮತ್ತು ಛೋಟಾ ಬಚ್ಚನ್ ಜೊತೆಗೂಡಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅವರಿಬ್ಬರ ಕಟ್ಟಾ ಅಭಿಮಾನಿಗಳು ಭಾರೀ ಸಂಭ್ರಮ ಪಟ್ಟಿದ್ದರು. ಕುಛ್ ನಾ ಕಹೋ, ಬಂಟಿ ಔರ್ ಬಬ್ಲಿ, ಧೂಮ್ 2, ಢಾಯಿ ಅಕ್ಷರ್ ಪ್ರೇಮ ಕೆ, ಗುರು, ರಾವಣ್ ಮುಂತಾದ ಸೂಪರ್ ಹಿಟ್ ಸಿನೆಮಾಗಳಲ್ಲಿ ಗಂಡಹೆಂಡತಿಯರಿಬ್ಬರೂ ಜೊತೆಯಾಗಿ ಅಭಿನಯಿಸಿ ರಸಿಕರನ್ನು ರಂಜಿಸಿದ್ದಾರೆ. ಈ ಹೊಸ ಚಿತ್ರದಲ್ಲೂ ಇಬ್ಬರು ಜೊತೆಗೂಡಲಿದ್ದಾರೆ ಎಂಬ ನಂಬಿಕೆ ಅಭಿಮಾನಿಗಳಲ್ಲಿತ್ತು. ಆದರೆ, ಆ ನಿರೀಕ್ಷೆಯೀಗ ಹುಸಿಯಾದಂತೆ ಕಾಣಿಸುತ್ತಿದೆ.

  ಹೊಸ ಪಾತ್ರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ

  ಇಷ್ಟೆಲ್ಲ ಬೆಳವಣಿಗೆಗಳು ನಡೆದು, ಅಪರೂಪದ ಪಾತ್ರವೊಂದು ತಮ್ಮನ್ನು ಹುಡುಕಿಕೊಂಡು ಬಂದಿದ್ದರೂ, ಬಿಕಿನಿಯಲ್ಲಿ ದಂಗುಬಡಿಸುವ ಸಪೂರ ದೇಹದ ರೂಪಸಿ ತಾಪ್ಸಿ ಪನ್ನು ಅವರು ಈ ಚಿತ್ರದ ಬಗ್ಗೆಯಾಗಲಿ, ಪಾತ್ರದ ಬಗ್ಗೆಯಾಗಲಿ ಲಿಪ್ಸ್ ಟಿಕ್ ಸವರಿರುವ ತುಟಿಗಳನ್ನು ತೆರೆಯುತ್ತಿಲ್ಲ. ಕಥೆಯ ಬದಲಾವಣೆಯಾಗುತ್ತಿರುವುದರಿಂದ ಅವರು ಮಾತನಾಡಲು ಹಿಂಜರಿಯುತ್ತಿರಬಹುದು. ಈ ಸಸ್ಪೆನ್ಸ್ ಯಾವಾಗ ಬಯಲಾಗಲಿದೆ ಎಂಬುದನ್ನು ಕಾದು ನೋಡಬೇಕು.

  ಫಾರಿನ್ ಗೆಳೆಯನ ಜೊತೆ ಡೇಟ್ ಮಾಡ್ತಿದ್ದಾರಂತೆ ನಟಿ ತಾಪ್ಸಿ.!

  ಭಾರೀ ಬೇಡಿಕೆ ಕುದುರಿಸಿಕೊಂಡಿರುವ ತಾಪ್ಸಿ

  ತಾಪ್ಸಿ ಪನ್ನು ಈ ರೀತಿ ನಾಟಕ ಮಾಡುತ್ತಿರುವುದಕ್ಕೆ, ಆಟವಾಡುತ್ತಿರುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಅವರು ನಟಿಸಿದ ಇತ್ತೀಚಿನ ಚಿತ್ರಗಳು ಭಾರೀ ಪ್ರಶಂಸೆ ಗಳಿಸಿವೆ. ಅವರು ನಟಿಸಿದ ಪಿಂಕ್, ಜುಡ್ವಾ2, ದಿ ಘಾಜಿ ಅಟ್ಯಾಕ್ ಮತ್ತು ಇತ್ತೀಚಿನ ನಾಮ ಶಬಾನಾ ಭಾರೀ ಪ್ರಶಂಸೆಗೆ ಪಾತ್ರವಾಗಿವೆ. ಅದರಲ್ಲೂ ಹೊಸ ಸಿನೆಮಾ 'ಮುಲ್ಕ್' ಪಾತ್ರದಲ್ಲಿ ತಾಪಸಿ ಪನ್ನು ಅಭಿನಯವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಬಾಕ್ಸ್ ಆಫೀಸಿನಲ್ಲಿಯೂ ಆ ಚಿತ್ರ ಕೊಳ್ಳೆ ಹೊಡೆಯುತ್ತಿದೆ.

  ಅದ್ಭುತ ಅವಕಾಶ ಕಳೆದುಕೊಂಡಿದ್ದಾರೆ ಐಶು

  ತಾಪ್ಸಿ ಪನ್ನು ಅವರು ಅಭಿಷೇಕ್ ಬಚ್ಚನ್ ಅವರು ಅಭಿನಯಿಸುತ್ತಿರುವ 'ಮನ್‌ಮರ್ಜಿಯಾ' ಚಿತ್ರ ಇನ್ನೇನು ಬಿಡುಗಡೆಯಾಗಲಿದ್ದು, ಈ ವರ್ಷ ಸಾಲುಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಮತ್ತು ಮುಂದಿನ ವರ್ಷವೂ ಬುಕ್ ಆಗಿದ್ದಾರೆ. ಅಲ್ಲದೆ, ಐಶ್ವರ್ಯ ರೈ ಬಚ್ಚನ್ ಚಾರ್ಮ್ ಮೊದಲಿನಂತೆ ಉಳಿದಿಲ್ಲ. ಇದೆಲ್ಲಕ್ಕೂ ಮಿಗಿಲಾಗಿ ನಖರಾಗಳನ್ನು ಮಾಡಿದರೆ, ನೀನಿಲ್ಲದಿದ್ದರೆ ಇನ್ನೊಬ್ಬರು ಅಂತಾರೆ ಈ ಸ್ಪರ್ಧಾತ್ಮಕ ಜಮಾನಾದಲ್ಲಿ. ಒಟ್ಟಿನಲ್ಲಿ ಅದ್ಭುತ ಅವಕಾಶವೊಂದನ್ನು ಕಳೆದುಕೊಂಡಿದ್ದಾರೆ ಐಶು. ಅದೇ, ಅಭಿಷೇಕ್ ಅವರು ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಳ್ಳುತ್ತಿದ್ದಾರೆ.

  English summary
  It looks like Aishwarya Rai Bachchan is not having a good time in Bollywood, as two of her previous movies Jazbaa and Fanney Khan were average films at the box office. And now it looks like in her upcoming film, she will be replaced by Taapsee Pannu.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more