For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್ ನಲ್ಲಿ ಐಶ್ವರ್ಯ ರೈ ನಟನೆಯ 'ಫಾನ್ನೇ ಖಾನ್' ಕಳಪೆ ಪ್ರದರ್ಶನ.!

  By Harshitha
  |

  ಬರೋಬ್ಬರಿ 17 ವರ್ಷಗಳ ನಂತರ ಐಶ್ವರ್ಯ ರೈ ಬಚ್ಚನ್ ಹಾಗೂ ಅನಿಲ್ ಕಪೂರ್ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಮದುವೆ ಆಗಿ ಮಗು ಆಗಿದ್ದರೂ, ನಟಿ ಐಶ್ವರ್ಯ ರೈ ಬಚ್ಚನ್ ಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿದೆ.

  ಹೀಗಿದ್ದರೂ, ಐಶ್ವರ್ಯ ರೈ ಬಚ್ಚನ್ ಹಾಗೂ ಅನಿಲ್ ಕಪೂರ್ ನಟನೆಯ ಚಿತ್ರ 'ಫಾನ್ನೇ ಖಾನ್' ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿಲ್ಲ. ನಿಜ ಹೇಳ್ಬೇಕಂದ್ರೆ, 'ಫಾನ್ನೇ ಖಾನ್' ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಸಿಕ್ಕಿಲ್ಲ.

  ಬಿಡುಗಡೆ ಆದ ಮೊದಲ ದಿನ 'ಫಾನ್ನೇ ಖಾನ್' ಮಾಡಿರುವ ಕಲೆಕ್ಷನ್ ಕೇವಲ 2.15 ಕೋಟಿ. ಇದು ಕಡಿಮೆ ಮೊತ್ತ ಏನಲ್ಲ ನಿಜ. ಆದ್ರೆ, ಬಾಲಿವುಡ್ ಗಿರುವ ಮಾರ್ಕೆಟ್ ಗೆ 2.15 ಕೋಟಿ ತೀರಾ ಕಳಪೆ.

  ಐಶ್ವರ್ಯ ರೈ ಬಚ್ಚನ್ ಹಾಗೂ ಅನಿಲ್ ಕಪೂರ್ ಗೆ ಇರುವ ಸ್ಟಾರ್ ವಾಲ್ಯುಗೆ 2.15 ಕೋಟಿ ಓಪನ್ನಿಂಗ್ ಕಲೆಕ್ಷನ್ ತುಂಬಾ ಕಡಿಮೆ ಅನ್ನೋದು ಟ್ರೇಡ್ ಎಕ್ಸ್ ಪರ್ಟ್ ಗಳ ಅಭಿಪ್ರಾಯ.

  ಇನ್ನೂ ಎರಡನೇ ದಿನದ ಕಲೆಕ್ಷನ್ 2.75 ಕೋಟಿ ಅಂತ ಅಂದಾಜಿಸಲಾಗಿದೆ. ವೀಕೆಂಡ್ ನಲ್ಲೂ 'ಫಾನ್ನೇ ಖಾನ್'ಗೆ ಬೇಡಿಕೆ ಕಂಡುಬಂದಿಲ್ಲ. ಹಾಗ್ನೋಡಿದ್ರೆ, ವಿಮರ್ಶಕರಿಂದಲೂ 'ಫಾನ್ನೇ ಖಾನ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ, 'ಫಾನ್ನೇ ಖಾನ್' ಚಿತ್ರ ನೋಡಲು ಪ್ರೇಕ್ಷಕರು ಕೂಡ ಚಿತ್ರಮಂದಿರದ ಕಡೆ ಮುಗಿಬೀಳುತ್ತಿಲ್ಲ.

  English summary
  Bollywood Actress Aishwarya Rai starrer Fanney Khan performs poorly at Box office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X