»   » ನಮ್ಮ ಸಂಸಾರ ಆನಂದ ಸಾಗರ:ಅಭಿಷೇಕ್ ಬಚ್ಚನ್

ನಮ್ಮ ಸಂಸಾರ ಆನಂದ ಸಾಗರ:ಅಭಿಷೇಕ್ ಬಚ್ಚನ್

Posted By:
Subscribe to Filmibeat Kannada

ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಪತ್ನಿ ಮತ್ತು ಸೊಸೆಯ ನಡುವೆ ಅಸಮಾಧನದ ಹೊಗೆ ಎದ್ದಿದೆ, ಸೊಸೆ ಐಶ್ವರ್ಯ ರೈ ಬಚ್ಚನ್ ತನ್ನ ಪತಿ ಮತ್ತು ಮಗಳ ಜೊತೆ ಬೇರೆ ಮನೆ ಮಾಡಲಿದ್ದಾರೆ ಎನ್ನುವ ಗುಸುಗುಸು ಸುದ್ದಿಗೆ ಮಗ ಅಭಿಷೇಕ್ ಬಚ್ಚನ್ ಪೂರ್ಣ ವಿರಾಮವಿಟ್ಟಿದ್ದಾರೆ.

ಕಳೆದ ಒಂದು ವಾರದಿಂದ ಐಶ್ವರ್ಯ ರೈ ಬಚ್ಚನ್ ಮತ್ತು ಅತ್ತೆ ಜಯಾ ಬಚ್ಚನ್ ನಡುವಿನ ಸಂಬಂಧ ಹಳಸಿದೆ. ಐಶ್ವರ್ಯ ತನ್ನ ಪತಿ ಅಭಿಷೇಕ್ ಬಚ್ಚನ್  ಮತ್ತು ಮಗಳು ಆರಾಧ್ಯಳೊಂದಿಗೆ ಈಗಿರುವ 'ಜಲ್ಸಾ' ಮನೆ ತೊರೆದು ಬೇರೆ ಮನೆಗೆ ಹೋಗಲಿದ್ದಾರೆಂದು ಸುದ್ದಿಯಾಗಿತ್ತು. (ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ)

Aishwarya separating from Big B house, Abhishek said its just rubbish

ಮಾವನ ಮನೆಯಲ್ಲಿ ಇರಲು ಐಶ್ವರ್ಯಾಗೆ ಇಷ್ಟವಿಲ್ಲ. ಅತ್ತೆ ಜಯಾ ಬಚ್ಚನ್ ಜೊತೆ ಐಶೂ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಇಷ್ಟು ದಿನ ಸಹಿಸಿಕೊಂಡಿದ್ದೇ ಸಾಕು. ಇನ್ನು ಬೇರೆ ಮನೆ ಮಾಡೋಣ ಎನ್ನುವ ನಿರ್ಧಾರಕ್ಕೆ ಐಶ್ವರ್ಯ ಬಂದಿದ್ದಾರೆಂದು ಗಾಳಿ ಸುದ್ದಿ ಹಬ್ಬಿತ್ತು.

ಈಗ ಈ ಎಲ್ಲಾ ಗಾಳಿ ಸುದ್ದಿಗೆ ಅಭಿಷೇಕ್ ಬಚ್ಚನ್ ಟ್ವಿಟರ್ ಮೂಲಕ ಉತ್ತರ ನೀಡಿ ತೆರೆ ಎಳೆದಿದ್ದಾರೆ.

ಟ್ವಿಟರ್ ನಲ್ಲಿ ತನ್ನ ಅಭಿಮಾನಿ ಕೇಳಿದ ಪಶ್ನೆಗೆ ಉತ್ತರಿಸಿದ ಅಭಿಷೇಕ್, 'It's rubbish' ಎಂದಿದ್ದಾರೆ. ಈ ವದಂತಿ ಅದು ಹೇಗೆ ಹಬ್ಬಿತೋ ತಿಳಿದಿಲ್ಲ, ಇದೊಂದು ನಿರಾಧಾರ. ನಮ್ಮ ಕುಟುಂಬದಲ್ಲಿ ಅಂತಹ ಯಾವುದೆ ಘಟನೆಗಳು ನಡೆದಿಲ್ಲ.

ಮಾಧ್ಯಮಗಳಲ್ಲಿನ ವರದಿ ನಿರಾಧಾರ ಎಂದು ಉತ್ತರಿಸಿದ್ದಾರೆ. ಅಭಿಷೇಕ್ ಹೇಳಿಕೆ ಪೂರಕ ಎನ್ನುವಂತೆ ಐಶ್ವರ್ಯಾ ರೈ ಆಪ್ತ ಬಳಗ ಕೂಡಾ ಈ ಗಾಳಿಸುದ್ದಿಯನ್ನು ಖಡಾಖಂಡಿತವಾಗಿ ನಿರಾಕರಿಸಿವೆ.

English summary
Aishwarya Rai Bachchan separating from Big B house Jalsa, Abhishek Bachchan said its just rubbish.
Please Wait while comments are loading...