For Quick Alerts
ALLOW NOTIFICATIONS  
For Daily Alerts

  ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ

  By Rajendra
  |

  ಇಷ್ಟು ದಿನ ಅಮಿತಾಬ್ ಬಚ್ಚನ್ ಕುಟುಂಬ ಎಂದರೆ ಒಂದು ಆದರ್ಶ ಕುಟುಂಬ ಎಂದೇ ಎಲ್ಲರೂ ಭಾವಿಸಿದ್ದರು. ಅಪ್ಪ-ಮಗನಾಗಲಿ, ಅತ್ತೆ-ಸೊಸೆಯಾಗಲಿ ಜಗಳವಾಡಿದ್ದು, ಗಾಸಿಪ್ ಸುದ್ದಿಗಳಿಗೆ ಆಹಾರವಾಗಿದ್ದು ಇಲ್ಲವೇ ಇಲ್ಲ ಎಂಬಂತಿತ್ತು. ಇನ್ನು ಜಯಾ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರು ಆದರ್ಶ ಅತ್ತೆ-ಸೊಸೆ ಎಂದೇ ಬಿಂಬಿಸಿಕೊಂಡಿದ್ದರು. ಆದರೆ ಈಗ ಸನ್ನಿವೇಶ ಬದಲಾಗಿದೆ, ಅದಕ್ಕೆ ತಕ್ಕಂತೆ ಪಾತ್ರಗಳಲ್ಲೂ ಬದಲಾವಣೆಯಾಗುತ್ತಿದೆ.

  ಈಗ ಬಚ್ಚನ್ ಮನೆಯಲ್ಲೂ ಎಲ್ಲ ಮನೆಗಳಂತೆ ಅತ್ತೆ ಸೊಸೆ ನಡುವೆ ಅಸಮಾಧಾನದ ಹೊಗೆ ಎದ್ದಿದೆಯೇ? ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯೇ? ಎಂಬ ಸುದ್ದಿಗಳು ಬೂದಿಮುಚ್ಚಿದ ಕೆಂಡದಂತೆ ವರದಿಯಾಗುತ್ತಿವೆ. ಬೆಂಕಿಯಿಲ್ಲದೆ ಹೊಗೆ ಬರಲು ಸಾಧ್ಯವೇ?

  ಅತ್ತೆ ಸೊಸೆ ಜಗಳದ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ರಾಧಿಕಾ ಕುಮಾರಸ್ವಾಮಿ. ಅಯ್ಯೋ ಶಿವನೇ ಅವರ್ಯಾವಾಗ ಅತ್ತೆ ಸೊಸೆ ಜಗಳಕ್ಕೆ ಬತ್ತಿ ಇಟ್ಟರಪ್ಪಾ ಎಂದು ಗಾಬರಿಯಾಗಬೇಡಿ. 'ಸ್ವೀಟಿ' ಚಿತ್ರದಲ್ಲಿ ಅವರು ಆಧುನಿಕ ಸೊಸೆಯಾಗಿ ಮೋಹಕ ಅತ್ತೆ ರಮ್ಯಾಕೃಷ್ಣ ಜೊತೆಗಿನ ಕೋಳಿ ಜಗಳನ್ನು ನೋಡಬಹುದು. ಸ್ಲೈಡ್ ನಲ್ಲಿ ಐಶ್ವರ್ಯಾ ರೈ, ಜಯಾ ಬಚ್ಚನ್ ಅತ್ತೆ ಸೊಸೆ ಕಥೆ...

  ಮನೆಯಲ್ಲಿ ಅತ್ತೆ ಮಾತೇ ನಡೆಯಬೇಕಂತೆ

  ಬಹುಶಃ ಅತ್ತೆ ಸೊಸೆ ನಡುವಿನ ಜಗಳಕ್ಕೆ ಇಂಥಹದ್ದೇ ಕಾರಣ ಎಂದು ಹೇಳುವುದು ಕಷ್ಟ. ಈಗ ಬಚ್ಚನ್ ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಇದ್ದಾರೆ. ಆದರೆ ಮನೆಯಲ್ಲಿ ಅತ್ತೆ ಸೊಸೆ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬುದು ಬಾಲಿವುಡ್ ಬಾತ್. ಇದಕ್ಕೆ ಕಾರಣವಾಗಿರುವುದು ಅತ್ತೆ ಜಯಾ ಬಚ್ಚನ್ ಅವರು ತಾನೇ ಮೇಲು. ಮನೆಯಲ್ಲಿ ತನ್ನ ಮಾತೇ ನಡೆಯಬೇಕು ಎಂಬ ಧೋರಣೆ.

  ಬಿಗ್ ಬಿ ಕುಟುಂಬದಲ್ಲೂ ಈ ರೀತಿಯ ವಾತಾವರಣ

  ಬಿಗ್ ಬಿ ಕುಟುಂಬದಲ್ಲೂ ಈ ರೀತಿಯ ವಾತಾವರಣ ಉಂಟೇ? ಎಂದು ಕೆಲವರು ಚಕಿತರಾಗುತ್ತಿದ್ದಾರೆ. ಅವರೂ ಮನುಷ್ಯರೇ ಅಲ್ಲವೆ? ಇಲ್ಲದೆ ಇರುತ್ತದಾ ಎಂದು ಇನ್ನೂ ಕೆಲವರು ತಮಗೆ ತಾವೇ ಹೇಳಿಕೊಳ್ಳುತ್ತಿದ್ದಾರೆ. ಐಶೂ ಮತ್ತು ಜಯಾ ಬಚ್ಚನ್ ನಡುವೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳೂ ಇದಕ್ಕೆ ಇನ್ನಷ್ಟು ಇಂಬು ಕೊಡುತ್ತವೆ.

  ಅತ್ತೆ ಜೊತೆ ಸೊಸೆಯ ಹೊಂದಾಣಿಕೆ ಕೊರತೆ

  ಮಾವನ ಮನೆಯಲ್ಲಿ ಇರಲು ತಮಗಿಷ್ಟವಿಲ್ಲ ಎಂದು ಐಶ್ವರ್ಯಾ ರೈ ಬಹಳ ದಿನಗಳಿಂದ ಕನವರಿಸುತ್ತಿದ್ದಾರಂತೆ. ಅಂದರೆ ಬೇರೆ ಮನೆ ಮಾಡಬೇಕೆಂಬ ಆಸೆ ಅವರದು. ಅತ್ತೆ ಜಯಾ ಬಚ್ಚನ್ ಜೊತೆ ಐಶೂ ಹೊಂದಿಕೊಳ್ಳಲು ಕಷ್ಟವಾಗುತ್ತಿರುವುದು. ಇಷ್ಟು ದಿನ ಸಹಿಸಿಕೊಂಡಿದ್ದೇ ಸಾಕು. ಇನ್ನು ಬೇರೆ ಮನೆ ಮಾಡೋಣ ಎಂಬುದು.

  ಇಬ್ಬರ ನಡುವೆ ಮಾತುಕತೆಯೂ ಗೌಣ

  ಐಶ್ವರ್ಯಾ ರೈ ಜೊತೆ ಪ್ರತಿ ಸಣ್ಣ ವಿಚಾರಕ್ಕೂ ಜಯಾ ಬಚ್ಚನ್ ಮೂಗು ತೂರಿಸುತ್ತಿರುವುದು ಐಶೂಗೆ ಸಹಿಸಿಕೊಳ್ಳಲು ಆಗುತ್ತಿಲ್ಲವಂತೆ. ಈ ಕಾರಣಗಳಿಂದ ಅತ್ತೆ ಸೊಸೆ ನಡುವಿನ ಅಂತರ ಹೆಚ್ಚಾಗುತ್ತಿತ್ತು ಇಬ್ಬರ ನಡುವೆ ಮಾತುಕತೆಯೂ ಗೌಣವಾಗುತ್ತಿದೆಯಂತೆ.

  ಕ್ಷುಲ್ಲಕ ಘಟನೆಗಳಿಂದ ಬೇಸತ್ತ ಐಶ್ವರ್ಯಾ ರೈ

  ಇನ್ನು ಐಶ್ವರ್ಯಾ ರೈ ಮಾಡುವ ಯಾವುದೇ ಕೆಲಸವಿರಲಿ, ತೆಗೆದುಕೊಳ್ಳುವ ನಿರ್ಣಯವಿರಲಿ ಮೊದಲು ಅತ್ತೆಗೆ ತಿಳಿಸಬೇಕಂತೆ. ಮನೆಯಲ್ಲಿ ಪ್ರತಿದಿನ ನಡೆಯುತ್ತಿರುವ ಈ ರೀತಿಯ ಕ್ಷುಲ್ಲಕ ಘಟನೆಗಳಿಂದ ಐಶ್ವರ್ಯಾ ರೈ ಬೇಸತ್ತಿದ್ದಾರಂತೆ. ತನ್ನ ಗಂಡ ಹಾಗೂ ಮಗಳ ಜೊತೆ ಬೇರೆ ಸಂಸಾರ ಮಾಡುವುದೇ ಇದಕ್ಕೆಲ್ಲಾ ಪರಿಹಾರ ಎಂದು ಐಶೂ ಯೋಚಿಸಿದ್ದಾರೆ ಎಂಬುದು ಮತ್ತೊಂದು ಕಥಾನಕ.

  ಮನೆತನದ ಹೆಸರು ಕರೆಯದೆ ಬೈಸಿಕೊಂಡ

  ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಫೋಟೋ ಜರ್ನಲಿಸ್ಟ್ ಒಬ್ಬರು ಐಶ್ವರ್ಯಾ ರೈ ಅವರ ಹೆಸರನ್ನು ಕೂಗಿದ. ಆದರೆ ಆತ ಅತ್ತೆ ಮನೆತನದ ಹೆಸರು 'ಬಚ್ಚನ್' ಸೇರಿಸದೆ ಕರೆದದ್ದು ಜಯಾ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಬಳಿಕ ಆ ಜರ್ನಲಿಸ್ಟ್ ಮೇಲೆ ಜಯಾ ಕೆಂಡಾಮಂಡಲವಾಗಿದ್ದು ಸುದ್ದಿಯಾಯಿತು.

  ಫೋಟೋಗ್ರಾಫರ್ ಗೆ ಬೆಂಡೆತ್ತಿದ ಅತ್ತ್ತೆ

  "ತಮ್ಮ ಸೊಸೆಯನ್ನು ಐಶ್ವರ್ಯಾ...ಐಶ್ವರ್ಯಾ ಎಂದು ಕರೆಯುತ್ತೀದ್ದೀರಲ್ಲಾ...ಅವರೇನಾದರೂ ತಮ್ಮ ಸ್ನೇಹಿತೆಯೇ ಅಥವಾ ಕ್ಲಾಸ್ ಮೇಟಾ?" ಎಂದು ಫೋಟೋ ಜರ್ನಲಿಸ್ಟ್ ನ್ನು ಬೆಂಡೆತ್ತಿದ್ದರು. ಇದೆಲ್ಲಾ ಮಾಧ್ಯಮಗಳ ಸಮ್ಮುಖದಲ್ಲೇ ನಡೆದದ್ದು ಐಶ್ವರ್ಯಾ ರೈ ಅಸಹನೆ ಮತ್ತಷ್ಟು ಕಾರಣವಾಯಿತು.

  ಇನ್ನು ಗಂಡ ಹಾಗೂ ಮಾವನ ವಿಚಾರಕ್ಕೆ ಬಂದರೆ...

  ಈ ಘಟನೆ ಬಳಿಕ ನೋವುಂಡ ಬಚ್ಚನ್ ಸೊಸೆ ಐಶ್ವರ್ಯಾ ರೈ ಬಳಿಕ ಅತ್ತೆ ಮೇಲೆ ಕಿಡಿಕಿಡಿಯಾದರೂ ಎಂಬ ಸುದ್ದಿಯೂ ಇದೆ. ಈಗ ಇಬ್ಬರ ನಡುವಿನ ಅಂತರ ಇನ್ನಷ್ಟು ದೂರಕ್ಕೆ ಸರಿಯುತ್ತಿದೆ. ಐಶೂಗೆ ಅತ್ತೆ ಮೇಲಷ್ಟೇ ಅಸಹನೆ ಇರುವುದು. ಇನ್ನು ಗಂಡ ಹಾಗೂ ಮಾವನ ವಿಚಾರಕ್ಕೆ ಬಂದರೆ....

  ಗಂಡ ಮಾವನ ಮೇಲೆ ಕರಗದ ಪ್ರೇಮಾಭಿಮಾನ

  ತನ್ನ ಗಂಡ ಅಭಿಷೇಕ್ ಬಚ್ಚನ್ ಹಾಗೂ ಮಾವ ಅಮಿತಾಬ್ ಬಚ್ಚನ್ ಎಂದರೆ ಐಶೂಗೆ ಇನ್ನೂ ಪ್ರೇಮಾಭಿಮಾನಗಳಲ್ಲಿ ಸಾಸಿವೆ ಕಾಳಿನಷ್ಟೂ ಕಡಿಮೆಯಾಗಿಲ್ಲವಂತೆ. ಅಭಿಷೇಕ್ ಬಚ್ಚನ್ ತನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಇನ್ನು ಮಾವ ತನ್ನ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವುದೇ ಇಲ್ಲ.

  ಡೈಲಿ ಸೀರಿಯಲ್ ನಂತಾಗಿರುವ ಸಂಸಾರ

  ಒಂದು ಮಗುವಿಗೆ ತಾಯಿಯಾಗಿರುವ ಐಶ್ವರ್ಯಾ ರೈ ಮತ್ತೆ ಬಣ್ಣ ಹಚ್ಚಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಅತ್ತೆ ಏನಂತಾರೋ ಏನೋ ಎಂಬ ಅಳುಕು ಅವರನ್ನು ಕಾಡುತ್ತಿದೆ. ಅತ್ತೆ ಸೊಸೆ ನಡುವಿನ ಜಗಳ ವಿಕೋಪಕ್ಕೆ ಹೋಗುವ ಮೊದಲು ತಾನು ಬೇರೆ ಸಂಸಾರ ಹೂಡಬೇಕು ಎಂಬ ಆಲೋಚನೆಯಲ್ಲಿ ಐಶ್ವರ್ಯಾ ರೈ ಇದ್ದಾರೆ ಎಂಬುದು ಬಾಲಿವುಡ್ ನಲ್ಲಿ ಯಾವುದೇ ಡೈಲಿ ಸೀರಿಯಲ್ ಗಿಂತಲೂ ಕಡಿಮೆ ಇಲ್ಲದಂತೆ ಓಡುತ್ತಿರುವ ಧಾರಾವಾಹಿ.

  English summary
  Bollywood's first family, The Bachchans, are not only a brand but they also stand for managing to be successful not only in their profession but also in their personal lives. The Bachchan family members - patriarch and Bollywood legend Amitabh Bachchan, his immensely talented wife (probably the most talented member of the family) Jaya, their son Abhishek and his more popular and successful wife Aishwarya Rai - always put up a united front in public. No sound of discord had been heard ever since Abhishek got married to Aishwarya a few years ago.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more