For Quick Alerts
  ALLOW NOTIFICATIONS  
  For Daily Alerts

  ಹೊಸ ಸಿನಿಮಾ ಘೋಷಣೆ ಮಾಡಿದ ಅಜಯ್ ದೇವಗನ್

  |

  ಬಾಲಿವುಡ್ ನಟ, ನಿರ್ಮಾಪಕ ಅಜಯ್ ದೇವಗನ್ ಶುಕ್ರವಾರ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಸೇರಿ ಜಂಟಿ ನಿರ್ಮಾಣಕ್ಕೆ ಕೈ ಹಾಕಿರುವ ಅಜಯ್ ದೇವಗನ್ ಹೊಸ ಚಿತ್ರಕ್ಕೆ 'ಗೋಬರ್' ಎಂದು ಹೆಸರಿಟ್ಟಿದ್ದಾರೆ.

  ಈ ಚಿತ್ರದಲ್ಲಿ ಅಜಯ್ ದೇವಗನ್ ನಿರ್ಮಾಪಕನಾಗಿ ತೊಡಗಿಕೊಂಡಿರುವುದು ಅಧಿಕೃತವಾಗಿದೆ. ಆದರೆ, ನಟನಾಗಿ ಕಾಣಿಸಿಕೊಳ್ಳುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಈ ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ನೀಡಿಲ್ಲ.

  ಅಲಿಯಾ ಭಟ್ v/s ಪ್ರಭಾಸ್; ಬಾಕ್ಸ್ ಆಫೀಸ್ ನಲ್ಲಿ ಮೆಗಾವಾರ್

  'ಗೋಬರ್' ಕಾಮಿಡಿ ಜಾನರ್ ಸಿನಿಮಾ ಆಗಿದ್ದು, ಸಬಲ್ ಶೇಖಾವತ್ ನಿರ್ದೇಶನ ಮಾಡಲಿದ್ದಾರೆ. ಈ ಪ್ರಾಜೆಕ್ಟ್ ಇವರಿಗೆ ಚೊಚ್ಚಲ ಸಿನಿಮಾ ಆಗಲಿದೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಆರಂಭಿಸುವ ತಯಾರಿ ನಡೆದಿದೆ.

  'ಈ ಚಿತ್ರದಲ್ಲಿ ಪಶುವೈದ್ಯನ ಸುತ್ತ ಹಣೆಯಲಾಗಿದೆ. ತಾನು ಕೆಲಸ ಮಾಡುವ ಸ್ಥಳೀಯ ಆಸ್ಪತ್ರೆಯಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಎದ್ದು ನಿಂತು ವಿಷಯಗಳನ್ನು ಸರಿದೂಗಿಸುವ ಕಥೆ. ಬಹಳ ಪರಿಣಾಮಕಾರಿಯಾಗಿ ಬರಲಿದೆ, ಪ್ರೇಕ್ಷಕರಿಗೆ ಒಂದೊಳ್ಳೆಯ ಮನರಂಜನೆ ನೀಡಲಿದೆ' ಎಂದು ಅಜಯ್ ದೇಗವನ್ ತಿಳಿಸಿದ್ದಾರೆ.

  ಇನ್ನುಳಿದಂತೆ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ನಾಯಕನಾಗಿ ನಟಿಸಿರುವ 'ಮೈದಾನ್' ಹಾಗೂ 'ಭುಜ್: ಪ್ರೈಡ್ ಆಫ್ ಇಂಡಿಯಾ' ಸಿನಿಮಾಗಳು ತೆರೆಗೆ ಬರಬೇಕಿದೆ.

  ಅಭಿಮಾನಿಗಳ ಪಾಲಿಗೆ ದರ್ಶನ್ ಡಿ ಬಾಸ್ ಹೇಗಾದ್ರು ಗೊತ್ತಾ? | Filmibeat Kannada

  ಅಮಿತಾಭ್ ಬಚ್ಚನ್ ಜೊತೆ ಮಾಡುತ್ತಿರುವ ಮೇಡೇ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ನಿರ್ದೇಶಿಸಿ, ನಿರ್ಮಾಣ ಸಹ ಮಾಡ್ತಿದ್ದಾರೆ.

  English summary
  Ajay Devgn announced his new comedy-drama film titled Gobar, directed by Sabal Shekhawat and produced by Siddharth Roy Kapur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X