For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ ಚಿತ್ರೋತ್ಸವ: 'ಬೆಲ್ ಬಾಟಮ್' ರೋಚಕತೆ, 'ಭುಜ್' ದೇಶಪ್ರೇಮ

  |

  ಕೊರೊನಾ ವೈರಸ್‌ನಿಂದ ತತ್ತರವಾಗಿದ್ದ ಬಾಲಿವುಡ್‌ ಮತ್ತೆ ಸಹಜ ಸ್ಥಿತಿಯತ್ತ ಹೆಜ್ಜೆ ಹಾಕಿದೆ. ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕಿದೆ. ರಿಲೀಸ್‌ಗೆ ರೆಡಿಯಿರುವ ಚಿತ್ರಗಳು ಈಗ ತೆರೆಗೆ ಬರಲು ಸಜ್ಜಾಗುತ್ತಿವೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಎರಡು ರೋಚಕ ಸಿನಿಮಾ ಬಿಗ್ ಪರದೆ ಮೇಲೆ ಬರಲು ಸಿದ್ಧವಾಗಿದೆ. ಬೆಲ್ ಬಾಟಮ್ ಮತ್ತು ಭುಜ್ ಸಿನಿಮಾಗಳ ಮೂಲಕ ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ಹೆಚ್ಚಿಸಿಬಹುದಾಗಿದೆ.

  ಅಕ್ಷಯ್ ಕುಮಾರ್ ನಟನೆಯ 'ಬೆಲ್ ಬಾಟಮ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕ ವಲಯದಲ್ಲಿ ಕುತೂಹಲ ಹೆಚ್ಚಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಿಸಿದ್ದು, 80ರ ದಶಕದಲ್ಲಿ ನಡೆಯುವ ಸ್ಪೈ ಥ್ರಿಲ್ಲರ್ ಕಥೆ ಹೊಂದಿದೆ.

  'ಮಾಸ್ಟರ್' ಮಾರ್ಗದಲ್ಲೇ ಸಾಗಿದ ಅಕ್ಷಯ್ ಕುಮಾರ್ 'ಬೆಲ್ ಬಾಟಮ್' ಸಿನಿಮಾಗೆ ಸಂಕಷ್ಟ'ಮಾಸ್ಟರ್' ಮಾರ್ಗದಲ್ಲೇ ಸಾಗಿದ ಅಕ್ಷಯ್ ಕುಮಾರ್ 'ಬೆಲ್ ಬಾಟಮ್' ಸಿನಿಮಾಗೆ ಸಂಕಷ್ಟ

  ವಿಮಾನ ಅಪಹರಣಕಾರರ ಬೆನ್ನಟ್ಟಿ ಹೊರಡುವ ಭಾರತದ ಸ್ಪೈ ಏಜೆಂಟ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಖಿಲಾಡಿ ವೃತ್ತಿ ಜೀವನದಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಇದಾಗಬಹುದು ಎಂದು ಅಂದಾಜಿಸಲಾಗಿದೆ. ಅಕ್ಷಯ್ ಕುಮಾರ್ ಪತ್ನಿ ಪಾತ್ರದಲ್ಲಿ ವಾಣಿ ಕಪೂರ್ ಅಭಿನಯಿಸಿದ್ದಾರೆ. ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಹುಮಾ ಖುರೇಶಿ ಸಹ ನಟಿಸಿದ್ದಾರೆ. ಮುಂದೆ ಓದಿ...

  ನೈಜ ಘಟನೆಯ ಬೆಲ್ ಬಾಟಮ್

  ನೈಜ ಘಟನೆಯ ಬೆಲ್ ಬಾಟಮ್

  1984ರ ಸಮಯದಲ್ಲಿ ವಿಮಾನಗಳ್ಳರು ಭಾರತದ ವಿಮಾನವೊಂದನ್ನು ಅಪಹರಣ ಮಾಡ್ತಾರೆ. ಸುಮಾರು 200ಕ್ಕೂ ಅಧಿಕ ಪ್ರಯಾಣಿಕರು ಆ ವಿಮಾನದಲ್ಲಿ ಸಿಲುಕಿಕೊಂಡಿರುತ್ತಾರೆ. ಅವರನ್ನ ರಕ್ಷಿಸುವ ಸಲುವಾಗಿ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಕ್ಯಾಬಿನೆಟ್ ಸಚಿವರ ಜೊತೆ ಚರ್ಚೆ ಮಾಡ್ತಾರೆ. ಈ ಆಪರೇಷನ್‌ಗೆ ಸೂಕ್ತ ವ್ಯಕ್ತಿ ಯಾರು ಎಂದು ಪ್ರಶ್ನೆ ಉಂಟಾದಾಗ ಅಕ್ಷಯ್ ಕುಮಾರ್ ಎಂಟ್ರಿಯಾಗುತ್ತದೆ. ಅಕ್ಷಯ್ ಕುಮಾರ್ ಬೆಲ್ ಬಾಟಮ್ ಹೆಸರಿನಲ್ಲಿ ಆಪರೇಷನ್ ಕೈಗೊಂಡು ವಿಮಾನ ಹೈಜಾಕ್ ಮಾಡಿದವರಿಂದ ಹೇಗೆ ಪ್ರಯಾಣಿಕರನ್ನು ಮತ್ತು ವಿಮಾನವನ್ನು ರಕ್ಷಿಸುತ್ತಾರೆ ಎನ್ನುವುದು ಟ್ರೈಲರ್‌ನಲ್ಲಿ ತೋರಿಸಿರುವ ಕಥೆ.

  ಟ್ರೈಲರ್‌ನಲ್ಲಿ ಗಮನ ಸೆಳೆದ ಇಂದಿರಾ

  ಟ್ರೈಲರ್‌ನಲ್ಲಿ ಗಮನ ಸೆಳೆದ ಇಂದಿರಾ

  ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ ಅಭಿನಯ ಒಂದು ಕ್ಷಣ ಅಚ್ಚರಿ ಉಂಟು ಮಾಡುವಂತಿದೆ. ಬೆಲ್ ಬಾಟಮ್ ಲುಕ್‌ನಲ್ಲಿ ಅಕ್ಷಯ್ ಕುಮಾರ್ ಎಂಟ್ರಿ ಸಹ ಥ್ರಿಲ್ ಉಂಟು ಮಾಡಿದೆ. ರಂಜಿತ್ ಎಂ ತಿವಾರಿ ನಿರ್ದೇಶನದ ಈ ಚಿತ್ರ ಆಗಸ್ಟ್ 19 ರಂದು ತೆರೆಗೆ ಬರ್ತಿದೆ.

  ಹಿಂದಿಗೆ ರಿಮೇಕ್ ಆಗ್ತಿದೆ ಮತ್ತೊಂದು ತೆಲುಗು ಸಿನಿಮಾ: ಅಜಯ್ ದೇವಗನ್ ನಿರ್ಮಾಣಹಿಂದಿಗೆ ರಿಮೇಕ್ ಆಗ್ತಿದೆ ಮತ್ತೊಂದು ತೆಲುಗು ಸಿನಿಮಾ: ಅಜಯ್ ದೇವಗನ್ ನಿರ್ಮಾಣ

  ಸ್ವಾತಂತ್ರ್ಯ ದಿನಕ್ಕೆ 'ಭುಜ್' ಸಿನಿಮಾ

  ಸ್ವಾತಂತ್ರ್ಯ ದಿನಕ್ಕೆ 'ಭುಜ್' ಸಿನಿಮಾ

  ಬೆಲ್ ಬಾಟಮ್ ಚಿತ್ರಕ್ಕೂ ಒಂದು ವಾರ ಮುಂಚೆ ಅಜಯ್ ದೇವಗನ್ ನಟಿಸಿರುವ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಸಿನಿಮಾ ಬಿಡುಗಡೆಯಾಗುತ್ತಿದೆ. ಆಗಸ್ಟ್ 13 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. 1971ರಲ್ಲಿ ನಡೆದ ಭಾರತ-ಪಾಕ್ ಯುದ್ಧದ ನೈಜ ಘಟನೆಗಳನ್ನು ಆಧರಿಸಿ ಮಾಡಿರುವ ಚಿತ್ರ ಇದಾಗಿದ್ದು, ಸ್ಕ್ವಾಡ್ರನ್ ಲೀಡರ್ ವಿಜಯ್ ಕಾರ್ಣಿಕ್ ನಾಯಕನಾಗಿ ದೇವಗನ್ ನಟಿಸಿದ್ದಾರೆ.

  ವಿಜಯ್ ಕಾರ್ಣಿಕ್ ಪಾತ್ರದಲ್ಲಿ ಅಜಯ್

  ವಿಜಯ್ ಕಾರ್ಣಿಕ್ ಪಾತ್ರದಲ್ಲಿ ಅಜಯ್

  ಭಾರತ-ಪಾಕ್ ಯುದ್ಧದ ಸಮಯದಲ್ಲಿ ಭುಜ್ ವಿಮಾನ ನಿಲ್ದಾಣದ ಉಸ್ತುವಾರಿ ವಹಿಸಿದ್ದ ಸ್ಕ್ವಾಡ್ರನ್ ಲೀಡರ್ ವಿಜಯ್ ಕಾರ್ಣಿಕ್ ಗುಜರಾತಿನ ಗಡಿ ಪ್ರದೇಶವನ್ನು ಪಾಕಿಸ್ತಾನದ ಸೈನ್ಯದಿಂದ ಹೇಗೆ ರಕ್ಷಿಸಿದರೆಂಬುದು ರೋಚಕ ಕಥೆ. ಈ ವೇಳೆ ಮಧಾಪರ್‌ನ ಸ್ಥಳೀಯ ಹಳ್ಳಿಯ 300 ಮಹಿಳೆಯರ ಸಹಾಯದಿಂದ ಸಂಪೂರ್ಣ ಐಎಎಫ್ ವಾಯುನೆಲೆಯನ್ನು ನಿಯಂತ್ರಿಸಿದ ಸಾಹಸಮಯ ಕಥೆ ಹೊಂದಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ಅಮ್ಮಿ ವಿರ್ಕ್, ನೋರಾ ಫತೇಹಿ ಮತ್ತು ಶರದ್ ಕೇಳ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  English summary
  Akshay Kumar's Bell bottom in Cinemas and Ajay devgan starrer's Bhuj in Disney Hotstar. Double Dhamaka in this independence day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X