»   » ಬಾಕ್ಸ್ ಆಫೀಸಲ್ಲಿ ಜಿಲೇಬಿ ಸವಿದ ಅಕ್ಕಿ ಚಿತ್ರ 'ಬೇಬಿ'

ಬಾಕ್ಸ್ ಆಫೀಸಲ್ಲಿ ಜಿಲೇಬಿ ಸವಿದ ಅಕ್ಕಿ ಚಿತ್ರ 'ಬೇಬಿ'

Posted By:
Subscribe to Filmibeat Kannada

ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಬಹುತಾರಾಗಣದ ಚಿತ್ರ 'ಬೇಬಿ'. ಈ ಚಿತ್ರ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದು ಬಾಕ್ಸ್ ಆಫೀಸಲ್ಲಿ ಜಿಲೇಬಿ ಸವಿದಿದೆ. ಹತ್ತೇ ದಿನಗಳಲ್ಲಿ ಚಿತ್ರ ನಿವ್ವಳ ರು.76.47 ಕೋಟಿ ಕಲೆಕ್ಷನ್ ಮಾಡಿದೆ.

ಅಕ್ಷಯ್ ಕುಮಾರ್ ಅವರ ಆಕ್ಷನ್ ಪೋಸ್ಟರ್, ವಿಚಿತ್ರವಾದ ಶೀರ್ಷಿಕೆಯ ಕಾರಣ 'ಬೇಬಿ' ಚಿತ್ರ ಪ್ರೇಕ್ಷಕರನ್ನು ಥಿಯೇಟರ್ ನತ್ತ ಸೆಳೆಯುತ್ತಿದೆ. ಆದರೆ ಅಕ್ಕಿ ಪ್ರೇಕ್ಷಕರನ್ನು ನಿರಾಶೆಪಡಿಸುವುದಿಲ್ಲ. ಚಿತ್ರ ಕುತೂಹಲಭರಿತವಾಗಿ ಸಾಗಿಹೋಗುತ್ತದೆ. [ಬೇಬಿ ಚಿತ್ರ ವಿಮರ್ಶೆ]

ಈ ಚಿತ್ರದ ಟೀಸರ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಅದಕ್ಕೆ 'ಬೇಬಿ ಸಿಜಲ್' ಎಂದು ಹೆಸರಿಡಲಾಗಿತ್ತು. ಅಕ್ಕಿ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

Akshay Kumar's Baby Box office report

ಸರಿಸುಮಾರು ರು.58.97 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಚಿತ್ರಕ್ಕೆ ನೀರಜ್ ಪಾಂಡೆ ಆಕ್ಷನ್ ಕಟ್ ಹೇಳಿದ್ದಾರೆ. ಪಾತ್ರವರ್ಗದಲ್ಲಿ ಡ್ಯಾನಿ ಡೆನ್ ಜೋಂಗ್ ಪ, ಅನುಪಮ್ ಖೇರ್, ರಾಣ ದಗ್ಗುಬಾಟಿ, ತಾಪಸಿ ಪಣ್ಣು, ಕೆಕೆ ಮೆನನ್ ಸೇರಿದಂತೆ ಮುಂತಾದರಿದ್ದಾರೆ.

ಅಕ್ಷಯ್ ಕುಮಾರ್ ಅವರ ಅಭಿನಯ ಹಾಗೂ ನೀರಜ್ ಪಾಂಡೆ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇತ್ತೀಚೆಗೆ ಅಕ್ಕಿ ಚಿತ್ರಗಳು ದೇಶಪ್ರೇಮ ಸಾರುತ್ತಿದ್ದು ಬಾಲಿವುಡ್ ಖಾನ್ ತ್ರಯರ ಚಿತ್ರಗಳಿಗೆ ಸೆಡ್ಡುಹೊಡೆಯುತ್ತಿರುವುದು ವಿಶೇಷ.

ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಬ್ರೇಕ್ ಹಾಕಲು ಪ್ರಯತ್ನಿಸುವ ರಹಸ್ಯ ಕಾರ್ಯಚರಣೆ ಹೆಸರು 'ಬೇಬಿ'. ಈ ತಂಡ ಏನೆಲ್ಲಾ ಮಾಡುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು. (ಏಜೆನ್ಸೀಸ್)

English summary
Akshay Kumar's Baby movie collects sum of Rs 76.47cr in just 10 days in box office. Akshay Kumar in an action avatar, a heavy imagery and unusual title, which set the tone of the movie and generated curiosity value.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada