»   » ರಣ್ಬೀರ್ ಜೊತೆಗಿನ ಲಿಂಕಪ್ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದೇನು.?

ರಣ್ಬೀರ್ ಜೊತೆಗಿನ ಲಿಂಕಪ್ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದೇನು.?

Posted By:
Subscribe to Filmibeat Kannada

ಚಾಕಲೇಟ್ ಬಾಯ್ ರಣ್ಬೀರ್ ಕಪೂರ್ ಹಾಗೂ ಭಟ್ರ ಪುತ್ರಿ ಆಲಿಯಾ ಲವ್ ಮಾಡ್ತಿದ್ದಾರೆ ಎಂಬ ಗುಸು ಗುಸು ಯಾರು ಹಬ್ಬಿಸಿದ್ರೋ, ಗೊತ್ತಿಲ್ಲ. ಒಟ್ನಲ್ಲಿ, ಬಿಟೌನ್ ಗಲ್ಲಿಗಳನ್ನ ಒಮ್ಮೆ ರೌಂಡ್ ಹಾಕಿದ್ರೆ, ರಣ್ಬೀರ್ ಹಾಗೂ ಆಲಿಯಾ ಮಧ್ಯೆ ಏನೋ ಇದೆ ಎಂಬ ಸುದ್ದಿ ಕಿವಿಗೆ ಬೀಳುತ್ತೆ.

'ಬ್ರಹ್ಮಾಸ್ತ್ರ' ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವ ರಣ್ಬೀರ್ ಹಾಗೂ ಆಲಿಯಾ ಇದೀಗ ಸಿನಿಮಾ ಸುದ್ದಿಗಳಿಗಿಂತ ಗಾಸಿಪ್ ಕಾಲಂಗಳಲ್ಲಿಯೇ ಹೆಚ್ಚಾಗಿ ಸೌಂಡ್ ಮಾಡುತ್ತಿದ್ದಾರೆ.

''ಈ ಲಿಂಕಪ್ ರೂಮರ್ ಗಳಿಗೆಲ್ಲ 'ಬ್ರಹ್ಮಾಸ್ತ್ರ' ನಿರ್ದೇಶಕ ಅಯಾನ್ ಮುಖರ್ಜಿ ಕಾರಣ. 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ರಣ್ಬೀರ್ ಹಾಗೂ ಆಲಿಯಾ ಭಟ್ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ಇಬ್ಬರೂ ಕೆಲ ಕಾಲ ಕಳೆಯಬೇಕು ಅಂತ ಅಯಾನ್ ಮುಖರ್ಜಿ ಸೂಚಿಸಿದ್ದರಂತೆ. ಡೈರೆಕ್ಟರ್ ಹೇಳಿದಂತೆ, ಸಹಜವಾಗಿ ಎಲ್ಲೆಡೆ ಒಟ್ಟಾಗಿ ಕಾಣಿಸಿಕೊಳ್ತಿದ್ದ ರಣ್ಬೀರ್-ಆಲಿಯಾ ಗಾಸಿಪ್ ಪಂಡಿತರ ನಾಲಿಗೆ ಮೇಲೆ ನುಲಿದಾಡಲು ಆರಂಭಿಸಿದರು'' ಎಂದು 'ಫಿಲ್ಮ್ ಫೇರ್' ವರದಿ ಮಾಡಿತ್ತು.

Alia Bhat breaks silence on link-up rumours with Ranbir Kapoor

ರಣ್ಬೀರ್-ಆಲಿಯಾ ನಡುವೆ ಪ್ರೇಮಾಂಕುರ! ಇದು ನಿರ್ದೇಶಕರ 'ಬ್ರಹ್ಮಾಸ್ತ್ರ'?

ಆದ್ರೆ, ಇದರಲ್ಲಿ ಯಾವುದು ಸತ್ಯ.? ಯಾವುದು ಸುಳ್ಳು.? ರಣ್ಬೀರ್ ಹಾಗೂ ಆಲಿಯಾ ಮಧ್ಯೆ ಪ್ರೀತಿ ಇದ್ಯೋ.? ಇಲ್ವೋ.? ಎಂಬ ಡೌಟ್ ಮಾತ್ರ ಹಲವರಲ್ಲಿ ಕಾಡುತ್ತಿತ್ತು. ಡೌಟ್ ಯಾಕಪ್ಪಾ.? ಕ್ಲಿಯರ್ ಮಾಡಿಕೊಳ್ಳೋಣ ಅಂತ, ಮೊನ್ನೆಯಷ್ಟೇ ಮಾಧ್ಯಮದವರು ಆಲಿಯಾ ಭಟ್ ಗೆ ನೇರವಾಗಿ ''ರಣ್ಬೀರ್ ಜೊತೆಗೆ ಡೇಟಿಂಗ್ ಮಾಡ್ತಿದ್ದೀರಾ.?'' ಅಂತ ಪ್ರಶ್ನೆ ಕೇಳಿದರು.

ಅದಕ್ಕೆ, ''ಇಂತಹ ಸುದ್ದಿಗಳನ್ನ ಓದಿದಾಗ ನನಗೂ ತುಂಬಾ ಕನ್ ಫ್ಯೂಸ್ ಆಗುತ್ತದೆ. ಆದ್ರೆ, ಮೌನವೇ ಬಂಗಾರ ಎನ್ನುವುದನ್ನು ನಾನು ನಂಬಿದ್ದೇನೆ. ಹಾಗಂತ ನನಗೆ ವೈಯುಕ್ತಿಕ ಜೀವನ ಇಲ್ಲವೇ ಇಲ್ಲ ಅಂತಿಲ್ಲ. 'ವೈಯುಕ್ತಿಕ' ಅಂತ ಕರೆಯುವುದಕ್ಕೂ ಒಂದು ಕಾರಣ ಇದೆ. ಜನ ಏನಾದರೂ ಮಾತನಾಡಿಕೊಳ್ಳಲಿ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ'' ಅಂತ ಆಲಿಯಾ ಭಟ್ ಹೇಳಿದ್ದಾರೆ.

ಆಲಿಯಾ ಕೊಟ್ಟ ಈ ಉತ್ತರ ಕೇಳಿ, ಪತ್ರಕರ್ತರೇ ಈಗ ಕನ್ ಫ್ಯೂಸ್ ಆಗಿದ್ದಾರೆ. ಯಾಕಂದ್ರೆ, ಆಲಿಯಾ ಕೊಟ್ಟಿರುವ ಹೇಳಿಕೆ ಹಾಗಿದೆ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ.

English summary
Bollywood Actress Alia Bhat breaks silence on link-up rumours with Ranbir Kapoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X