For Quick Alerts
  ALLOW NOTIFICATIONS  
  For Daily Alerts

  ರಣ್ಬೀರ್ ಕಪೂರ್, ಆಲಿಯಾ ಭಟ್‌ಗೆ ಅವಳಿ ಮಕ್ಕಳು!?

  By Bhagya.s
  |

  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಏಪ್ರಿಲ್ 14 ರಂದು ಮುಂಬೈನಲ್ಲಿ ತಮ್ಮ ಹತ್ತಿರದ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಮದುವೆ ಆದ ಕೆಲವೇ ತಿಂಗಳಲ್ಲಿ ಈ ಜೋಡಿ ತಾವು ಪೋಷಕರಾಗುತ್ತಿರುವ ಬಗ್ಗೆ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು.

  ಇನ್ನು ಈ ಜೋಡಿ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದೆ. ಶಂಷೇರಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಣಬೀರ್ ಕಪೂರ್ ತಮ್ಮ ಜೀವನದ ಹಲವು ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ರಣಬೀರ್‌ಗೆ ಹಲವು ಪ್ರಶ್ನೆಗಳು ಎದುರಾದವು. ಎರಡು ಸತ್ಯ ಮತ್ತು ಒಂದು ಸುಳ್ಳು ಹೇಳಿ ಎಂದು ನಿರೂಪಕರಿಂದ ಪ್ರಶ್ನೆ ಬರುತ್ತದೆ.

  ಆಗ ರಣ್ಬೀರ್ ಕಪೂರ್ ನೀಡಿದ ಹೇಳಿಕೆ ಹೀಗಿತ್ತು. "ನಾನು ಅವಳಿ ಮಕ್ಕಳಿಗೆ ತಂದೆಯಾಗಲಿದ್ದೇನೆ ಮತ್ತು ನಾನು ಬಹಳ ದೊಡ್ಡ ಪೌರಾಣಿಕ ಚಿತ್ರದ ಭಾಗವಾಗಲಿದ್ದೇನೆ. ನಾನು ಕೆಲಸದಿಂದ ದೀರ್ಘ ವಿರಾಮ ತೆಗೆದುಕೊಳ್ಳುತ್ತೇನೆ." ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಇದರಿಂದ ಈ ಎರಡು ವಿಚಾರದಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂದು ನಿರ್ಧರಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ.

  ಅವರು ಅವಳಿ ಮಕ್ಕಳ ತಂದೆಯಾಗಲಿದ್ದಾರೆ ಎಂಬುದು ನಿಜವೋ ಸುಳ್ಳೋ? ರಣಬೀರ್ ಯಾಕೆ ಹೀಗೆ ಹೇಳಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ನಟ ರಣ್ಬೀರ್ ಕಪೂರ್ ಸಿನಿಮಾರಂಗದಿಂದ ದೊಡ್ಡ ವಿರಾಮ ತೆಗೆದುಕೊಳ್ಳುತ್ತಾರೆ ಎನ್ನುವುದು ಸುಳ್ಳು ಎನ್ನಲಾಗುತ್ತಿದೆ. ಯಾಕೆಂದರೆ ಸಾಲು, ಸಾಲು ಸಿನಿಮಾಗಳು ಇರುವುದರಿಂದ ಅದು ಸುಳ್ಳು ಇರಬಹುದು. ಹಾಗಾಗಿ ಅವರು ಅವಳಿ ಮಕ್ಕಳಿಗೆ ತಂದೆ ಆಗುತ್ತಾ ಇರುವುದು ನಿಜ ಇರಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

  ಈ ಜೋಡಿಯ ಮದುವೆ ಹೆಚ್ಚು ಗೌಪ್ಯವಾಗಿತ್ತು. ಮದುವೆಯಲ್ಲಿ ನೀತು ಕಪೂರ್, ರಿಧಿಮಾ ಕಪೂರ್, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಶಾಹೀನ್ ಭಟ್ ಮತ್ತು ಇತರರು ಭಾಗವಹಿಸಿದ್ದರು. ಅವರ ಮದುವೆಯಾದ ಕೆಲವೇ ದಿನಗಳಲ್ಲಿ ಅವರ ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

  ಇನ್ನೊಂದೆಡೆ ಕೆರಿಯರ್ ವಿಚಾರದಲ್ಲಿ ಸಖತ್ ಬ್ಯುಸಿಯಾಗಿರುವ ಈ ಸೆಲೆಬ್ರಿಟಿ ಜೋಡಿ ಸದ್ಯ ಬ್ರಹ್ಮಾಸ್ತ್ರ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಲ್ಲದೆ, ರಣಬೀರ್ ಕಪೂರ್ ಶಂಶೇರಾ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಜುಲೈ 22 ರಂದು ಶಂಶೇರಾ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಚಿತ್ರದ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ.

  English summary
  Alia Bhatt Ranbir Kapoor expecting twin Babies. Know more about the news.
  Sunday, July 17, 2022, 22:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X