Just In
Don't Miss!
- News
ಕೊರೊನಾ ಕಾಲದಲ್ಲೂ ಬಿಬಿಎಂಪಿಗೆ ಸಂದಾಯವಾದ ಆಸ್ತಿ ತೆರಿಗೆ ಎಷ್ಟು ಗೊತ್ತಾ?
- Education
ECIL Recruitment 2021: 19 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಆ ಒಂದು ಕರೆ ನನ್ನಲ್ಲಿ ಆತ್ಮ ವಿಶ್ವಾಸ ತುಂಬಿತ್ತು: 5 ವಿಕೆಟ್ ಕಿತ್ತ ಸಿರಾಜ್ ಭಾವುಕ ಪ್ರತಿಕ್ರಿಯೆ
- Finance
ಕಸದ ಗುಂಡಿ ಪಾಲಾದ ರು. 1971 ಕೋಟಿಯ ಬಿಟ್ ಕಾಯಿನ್ ಗೆ ಮತ್ತೆ ಹುಡುಕಾಟ
- Automobiles
ಹೊಸ ಲೊಗೊದೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ ಕಿಯಾ ಮೋಟಾರ್ಸ್ ಕಾರುಗಳು
- Lifestyle
ಕೋವಿಡ್ 19 ಲಸಿಕೆ: ಕೋವಿಡ್ಶೀಲ್ಡ್, ಕೊವಾಕ್ಸಿನ್ ಅಡ್ಡಪರಿಣಾಮಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟನೆ ಜೊತೆಗೆ ಹೊಸ ಉದ್ಯಮಕ್ಕೆ ಕೈ ಹಾಕಿದ ಆಲಿಯಾ ಭಟ್
ನಟಿ ಆಲಿಯಾ ಭಟ್ ಬಾಲಿವುಡ್‌ನ ಸಖತ್ ಬ್ಯುಸಿ ನಟಿಯರಲ್ಲಿ ಒಬ್ಬರು. ಕೋಟ್ಯಂತರ ಹಣವನ್ನು ಸಿನಿಮಾಗಳಿಂದ ಸಂಭಾದಿಸುತ್ತಿದ್ದಾರೆ ನಟಿ ಆಲಿಯಾ.
ಹೀಗಿದ್ದಾಗ್ಯೂ ಹೊಸ ಉದ್ಯಮವೊಂದಕ್ಕೆ ಕೈ ಹಾಕಿದ್ದಾರೆ ನಟಿ ಆಲಿಯಾ ಭಟ್. ಮಕ್ಕಳ ಉಡುಪುಗಳ ಬ್ರ್ಯಾಂಡ್ ಅನ್ನು ಹೊರತಂದಿದ್ದಾರೆ ನಟಿ ಆಲಿಯಾ ಭಟ್.
ಇದ್-ಎ-ಮಮ್ಮಾ ಹೆಸರಿನ ಆಲಿಯಾ ಭಟ್ ರ ಈ ಫ್ಯಾಷನ್ ಬ್ರ್ಯಾಂಡ್‌ನಲ್ಲಿ ಕೇವಲ ಮಕ್ಕಳ ಉಡುಪು ಮಾತ್ರ ದೊರೆಯುತ್ತದೆ. 2-14 ವರ್ಷದ ಮಕ್ಕಳಿಗಾಗಿ ಉಡುಪು ತಯಾರಿಸಿ ಮಾರುವ ಸಂಸ್ಥೆ ಇದ್-ಎ-ಮಮ್ಮಾ.
ಆಲಿಯಾ ಭಟ್‌ಗೆ ಬ್ಯುಸಿನೆಸ್ ಹೊಸದೇನೂ ಅಲ್ಲ, ಈ ಹಿಂದೆ ಹಲವು ಸ್ಟಾರ್ಟ್ ಅಪ್ ಕಂಪೆನಿಗಳಲ್ಲಿ ಆಲಿಯಾ ಹೂಡಿಕೆ ಮಾಡಿದ್ದರು. ಆದರೆ ಇದ್-ಎ-ಮಮ್ಮಾ ಮೂಲಕ ಸಂಪೂರ್ಣ ತಮ್ಮದೇ ಉದ್ದಿಮೆಯನ್ನು ಸ್ಥಾಪಿಸಿಕೊಂಡಿದ್ದಾರೆ.
ಇದ್-ಎ-ಮಮ್ಮಾ ಹೊರತರುತ್ತಿರುವ ಉಡುಪುಗಳಲ್ಲಿ ಸಾಕಷ್ಟು ಭಿನ್ನತೆ ಇದೆ. ಈ ಉತ್ಪನ್ನಗಳು ಸಂಪೂರ್ಣ ನೈಸರ್ಗಿಕ ಕಚ್ಚಾ ವಸ್ತುಗಳಿಂದ ಮಾಡಲ್ಪಟ್ಟಿದೆ. ಬಟ್ಟೆಗಳ ಬಟನ್‌ಗಳು ಸಹ ಪ್ಲಾಸ್ಟಿಕ್‌ನಿಂದ ಮಾಡಿರುವುದಿಲ್ಲ.
ನಾನು ಮತ್ತು ನನ್ನ ತಂಡ ಒಂದು ಒಳ್ಳೆಯ ಉದ್ಯಮ ವಿಭಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಿವಿ. ಆಗ ನಮಗೆ ಅನಿಸಿದ್ದು, ಮಕ್ಕಳ ಫ್ಯಾಷನ್ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಹಾಗಾಗಿ ಆ ವಿಭಾಗದಲ್ಲಿಯೇ ನಮ್ಮ ಕೆಲಸ ಆರಂಭಿಸಿದೆವು, ಅಲ್ಲಿಯೂ ಸಹ ಸಂಪೂರ್ಣ ಹೊಸ ಆಲೋಚನೆಯೊಂದಿಗೆ ನಾವು ಮಾರುಕಟ್ಟೆಗೆ ಬಂದಿದ್ದೇವೆ ಎಂದಿದ್ದಾರೆ ಆಲಿಯಾ ಭಟ್.
ನಟಿ ಆಲಿಯಾ ಭಟ್ ಇದೀಗ ತೆಲುಗಿನ ಆರ್‌ಆರ್‌ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಗಂಗೂಬಾಯಿ ಕಾಟಿಯಾವಾಡಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ರಣಬೀರ್ ಜೊತೆ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.