For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹುಡ್ಗಿ ನತಾಶಾ ಬಗ್ಗೆ ನಿಮಗೆಷ್ಟು ಗೊತ್ತು.?

  |

  ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಎಂಗೇಜ್ ಆಗಿದ್ದಾರೆ. ಹೊಸ ವರ್ಷದ ದಿನವೇ ಸರ್ಬಿಯಾದ ಬ್ಯೂಟಿ ಕೈಗೆ ವಜ್ರದ ಉಂಗುರವನ್ನು ತೊಡಿಸಿ ಹಾರ್ದಿಕ್ ಪಾಂಡ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

  ಇಷ್ಟು ದಿನ ಹಲವು ನಟಿಯರ ಜೊತೆಗೆ ಹಾರ್ದಿಕ್ ಪಾಂಡ್ಯ ಹೆಸರು ತಳುಕು ಹಾಕಿಕೊಂಡಿತ್ತು. ಆದ್ರೀಗ, ತಮ್ಮ ಮನಸ್ಸಿನಲ್ಲಿ ಇರುವ ಹುಡುಗಿ ನತಾಶಾ ಸ್ಟ್ಯಾಂಕೋವಿಕ್ ಎಂಬುದನ್ನ ಹಾರ್ದಿಕ್ ಪಾಂಡ್ಯ ಖಚಿತ ಪಡಿಸಿದ್ದಾರೆ.

  ನ್ಯೂ ಇಯರ್ ಸೆಲೆಬ್ರೇಷನ್ ಗೆಂದು ದುಬೈಗೆ ತೆರಳಿದ್ದ ಹಾರ್ದಿಕ್ ಪಾಂಡ್ಯ, ಅಲ್ಲೇ ನತಾಶಾ ಕೈ ಬೆರಳಿಗೆ ಉಂಗುರ ತೊಡಿಸಿದ್ದಾರೆ. ಅಸಲಿಗೆ, ಯಾರೀ ನತಾಶಾ ಸ್ಟ್ಯಾಂಕೋವಿಕ್.? ಯಾವ ಯಾವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.? ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  ಸರ್ಬಿಯಾ ಮೂಲದ ಯುವತಿ ನತಾಶಾ

  ಸರ್ಬಿಯಾ ಮೂಲದ ಯುವತಿ ನತಾಶಾ

  ನತಾಶಾ ಸ್ಟ್ಯಾಂಕೋವಿಕ್ ಮೂಲತಃ ಸರ್ಬಿಯಾದವರು. ಭಾರತೀಯ ಚಿತ್ರರಂಗದಲ್ಲಿ ನಟಿಯಾಗಿ, ರಿಯಾಲಿಟಿ ಟಿವಿ ಸ್ಟಾರ್ ಆಗಿ ನತಾಶಾ ಸ್ಟ್ಯಾಂಕೋವಿಕ್ ಗುರುತಿಸಿಕೊಂಡಿದ್ದಾರೆ. ಸರ್ಬಿಯಾದಲ್ಲಿ ಹುಟ್ಟಿದ ನತಾಶಾಗಿನ್ನೂ 27 ವರ್ಷ ವಯಸ್ಸು.

  'ದನಕಾಯೋನು' ನಟಿ ಜೊತೆ ಎಂಗೇಜ್ ಆದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ'ದನಕಾಯೋನು' ನಟಿ ಜೊತೆ ಎಂಗೇಜ್ ಆದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ

  ಸ್ಪೆಷಲ್ ಡ್ಯಾನ್ಸ್ ನಂಬರ್ ನಲ್ಲಿ ನತಾಶಾ

  ಸ್ಪೆಷಲ್ ಡ್ಯಾನ್ಸ್ ನಂಬರ್ ನಲ್ಲಿ ನತಾಶಾ

  'ಡಿಜೆ ವಾಲೆ ಬಾಬು' ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡ ಮೇಲೆ ನತಾಶಾಗೆ ಜನಪ್ರಿಯತೆ ಸಿಕ್ತು. ಇಮ್ರಾನ್ ಹಶ್ಮಿ ಅಭಿನಯದ 'ದಿ ಬಾಡಿ' ಚಿತ್ರದಲ್ಲಿ ಸ್ಪೆಷಲ್ ಡ್ಯಾನ್ಸ್ ನಂಬರ್ ನಲ್ಲಿ ನತಾಶಾ ಸ್ಟ್ಯಾಂಕೋವಿಕ್ ಸೊಂಟ ಬಳುಕಿಸಿದ್ದರು.

  ಮಾಜಿ ಬಾಯ್ ಫ್ರೆಂಡ್ ಜೊತೆ ನತಾಶಾ

  ಮಾಜಿ ಬಾಯ್ ಫ್ರೆಂಡ್ ಜೊತೆ ನತಾಶಾ

  ಹಿಂದಿ ಕಿರುತೆರೆಯ ಪ್ರಖ್ಯಾತ ಡ್ಯಾನ್ಸ್ ಶೋ 'ನಚ್ ಬಲಿಯೇ-9'ನಲ್ಲಿ ಮಾಜಿ ಬಾಯ್ ಫ್ರೆಂಡ್ ಆಲಿ ಗೋನಿ ಜೊತೆ ನತಾಶಾ ಸ್ಟ್ಯಾಂಕೋವಿಕ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂರನೇ ರನ್ನರ್ ಅಪ್ ಆದರು ಆಲಿ ಗೋನಿ ಮತ್ತು ನತಾಶಾ.

  ಬಿಗ್ ಬಾಸ್ ನಲ್ಲಿ ನತಾಶಾ

  ಬಿಗ್ ಬಾಸ್ ನಲ್ಲಿ ನತಾಶಾ

  2018 ರಲ್ಲಿ ಬಿಡುಗಡೆ ಆದ ಶಾರುಖ್ ಖಾನ್ ಅಭಿನಯದ 'ಝೀರೋ' ಚಿತ್ರದಲ್ಲಿ ನತಾಶಾ ಸ್ಟ್ಯಾಂಕೋವಿಕ್ ಅಭಿನಯಿಸಿದ್ದರು. ಇದಲ್ಲದೇ ಹಲವು ಸಿನಿಮಾಗಳ ಡ್ಯಾನ್ಸ್ ನಂಬರ್ ಗಳಲ್ಲಿ ನತಾಶಾ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಹಿಂದಿಯ 'ಬಿಗ್ ಬಾಸ್-8'ರಲ್ಲಿ ನತಾಶಾ ಸ್ಟ್ಯಾಂಕೋವಿಕ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. 28ನೇ ದಿನಕ್ಕೆ 'ಬಿಗ್ ಬಾಸ್' ಮನೆಯಿಂದ ನತಾಶಾ ಸ್ಟ್ಯಾಂಕೋವಿಕ್ ಹೊರ ಬಂದಿದ್ದರು.

  ಕನ್ನಡ ಚಿತ್ರದಲ್ಲಿ ನತಾಶಾ

  ಕನ್ನಡ ಚಿತ್ರದಲ್ಲಿ ನತಾಶಾ

  ಇನ್ನೂ ಯೋಗರಾಜ್ ಭಟ್ ನಿರ್ದೇಶನದ ದುನಿಯಾ ವಿಜಯ್ ಅಭಿನಯದ 'ದನ ಕಾಯೋನು' ಚಿತ್ರದ ಹಾಡೊಂದರಲ್ಲೂ ನತಾಶಾ ಸ್ಟ್ಯಾಂಕೋವಿಕ್ ಡ್ಯಾನ್ಸ್ ಮಾಡಿದ್ದಾರೆ. ಸಿನಿರಂಗದಲ್ಲಿ ಅಷ್ಟೊಂದು ಸದ್ದು ಮಾಡದ ನತಾಶಾ ಸ್ಟ್ಯಾಂಕೋವಿಕ್ ಇದೀಗ ಹಾರ್ದಿಕ್ ಪಾಂಡ್ಯ ಗರ್ಲ್ ಫ್ರೆಂಡ್ ಆಗಿ ಬ್ರೇಕಿಂಗ್ ನ್ಯೂಸ್ ಮಾಡ್ತಿದ್ದಾರೆ.

  English summary
  Here is the complete report on Bollywood Actress, Hardhik Pandya Girl Friend Natasha Stankovic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X