For Quick Alerts
  ALLOW NOTIFICATIONS  
  For Daily Alerts

  ಜಾಹೀರಾತಿನಿಂದ ಹಿಂದೆ ಸರಿದು, ಹಣ ಮರಳಿಸಿದ ಅಮಿತಾಬ್ ಬಚ್ಚನ್: ಕಾರಣ?

  |

  ಸಿನಿಮಾಗಳಿಗಿಂತಲೂ ಜಾಹಿರಾತುಗಳಲ್ಲಿ ಅಭಿನಯಿಸುವುದು ಸುಲಭ ಮತ್ತು ಹೆಚ್ಚು ಹಣವೂ ದೊರೆಯುತ್ತದೆ, ಹಾಗಾಗಿ ಸಿನಿಮಾ ನಟರು ಜಾಹೀರಾತು ಅವಕಾಶಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಆದರೆ ಖ್ಯಾತ ನಟ ಅಮಿತಾಬ್ ಬಚ್ಚನ್ ತಾವು ಈಗಾಗಲೇ ನಟಿಸಿರುವ ಜಾಹೀರಾತಿನಿಂದ ಹಿಂದೆ ಸರಿದಿರುವುದಲ್ಲದೆ ಸಂಸ್ಥೆಗೆ ಹಣವನ್ನು ಮರಳಿಸಿದ್ದಾರೆ.

  ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಹೆಸರಿನ ಪಾನ್ ಗುಟ್ಕಾದ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಅವರ ಜೊತೆಗೆ ರಣ್ವೀರ್ ಸಿಂಗ್ ಸಹ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಇದರಿಂದಾಗಿ ಅಮಿತಾಬ್ ಬಚ್ಚನ್ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿತ್ತು. ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಪಾನ್ ಮಸಾಲಾವನ್ನು ತಿನ್ನುತ್ತಿರುವಂತೆ ಚಿತ್ರಿಸಲಾಗಿದೆ. ರಣ್ವೀರ್ ಸಿಂಗ್ ಸಹ ಪಾನ್ ಮಸಾಲಾ ತಿನ್ನುತ್ತಿರುವಂತೆ ಚಿತ್ರಿಸಲಾಗಿದೆ.

  ಇದೀಗ ಅಮಿತಾಬ್ ಬಚ್ಚನ್ 'ಕಮಲಾ ಪಸಂದ್' ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ಆ ಜಾಹೀರಾತಿನಲ್ಲಿ ನಟಿಸಲು ತಾವು ಪಡೆದಿದ್ದ ಹಣವನ್ನು ಸಂಸ್ಥೆಗೆ ಮರಳಿಸಿದ್ದಾರೆ.

  ಜಾಹೀರಾತಿನಿಂದ ಹಿಂದೆ ಸರಿಯುವಂತೆ ತಂಬಾಕು ವಿರೋಧಿ ಸಂಘ-ಸಂಸ್ಥೆಗಳು ಸಹ ಅಮಿತಾಬ್ ಬಚ್ಚನ್‌ಗೆ ಮನವಿ ಮಾಡಿದ್ದವು. ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವುದನ್ನು ಅಭಿಮಾನಿಗಳು ಸಹ ಟೀಕೆ ಮಾಡಿದ್ದರು. ಹೀಗಾಗಿ ಅಮಿತಾಬ್ ಬಚ್ಚನ್ ಈಗ ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ. ಆದರೆ ಅದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ರಣ್ವೀರ್ ಸಿಂಗ್ ಜಾಹೀರಾತಿನಿಂದ ಹಿಂದೆ ಸರಿದಿಲ್ಲ.

  ಈ ಬಗ್ಗೆ ಅಮಿತಾಬ್ ಬಚ್ಚನ್ ಕಡೆಯಿಂದ ಅಧಿಕೃತ ಹೇಳಿಕೆ ಬಿಡುಗಡೆ ಆಗಿದ್ದು, ''ಜಾಹೀರಾತಿಗೆ ಸಹಿ ಮಾಡಿದಾಗ ಅದೊಂದು ಸರೋಗೇಟಿವ್ (ಅಸಲಿ ಉತ್ಪನ್ನಕ್ಕೆ ಪ್ರಚಾರ ನೀಡಲು ಪರ್ಯಾಯ ಉತ್ಪನ್ನದ ಜಾಹೀರಾತು ಪ್ರದರ್ಶಿಸುವುದು) ಜಾಹೀರಾತು ಎಂಬುದು ಗೊತ್ತಿರಲಿಲ್ಲ. ಕಳೆದ ವಾರವೇ ಜಾಹೀರಾತಿನಿಂದ ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ'' ಎಂದು ಹೇಳಲಾಗಿದೆ. ಜಾಹೀರಾತಿಗೆ ಬಚ್ಚನ್ ಪಡೆದಿದ್ದ ಹಣವನ್ನು ಮರಳಿಸಲಾಗಿದೆ.

  ಅಮಿತಾಬ್ ಬಚ್ಚನ್‌ಗೆ ಪತ್ರ ಬರೆದಿದ್ದ ರಾಷ್ಟ್ರೀಯ ತಂಬಾಕು ನಿರ್ಮೂಲನೆ ಸಂಸ್ಥೆಯ ಅಧ್ಯಕ್ಷ ಶೇಖರ್ ಸಲ್ಕಾರ್, ''ಪಾನ್ ಮಸಾಲಾ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಮಿತಾಬ್ ಬಚ್ಚನ್ ಸರ್ಕಾರದ ಪರವಾಗಿ ಪೊಲಿಯೋ ಅಭಿಯಾನದ ರಾಯಭಾರಿ ಆಗಿದ್ದಾರೆ. ಹೀಗಿದ್ದಾಗ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜಾಹೀರಾತಿನಿಂದ ಅವರು ಹಿಂದೆ ಸರಿಯಬೇಕು. ಬಾಲಿವುಡ್ ನಟರು ಇಂಥಹಾ ಉತ್ಪನ್ನಗಳ ಪ್ರಚಾರ ಮಾಡುವುದರಿಂದ ಯುವಕರು ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ'' ಎಂದಿದ್ದರು.

  ಹಲವು ಬಾಲಿವುಡ್ ಸ್ಟಾರ್ ನಟರು ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ವಿಮಲ್ ಪಾನ್ ಮಸಾಲಾದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ಸ್ಟಾರ್ ನಟ ಹೃತಿಕ್ ರೋಷನ್ ಸಿಗ್ನೇಚರ್ ಹೆಸರಿನ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲವು ನಟರು ಗುಟ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಇದೀಗ ಅಮಿತಾಬ್ ಬಚ್ಚನ್ ಗುಟ್ಕಾ ಜಾಹೀರಾತಿನಿಂದ ಹಿಂದೆ ಸರಿದಿದ್ದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Actor Amitabh Bachchan backed himself from tobacco advertisement. He gave back money he took as remuneration from the tobacco company.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X