For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ಪಕ್ಕಕ್ಕೆ ತಳ್ಳಿದ ಅಮಿತಾಬ್ ಬಚ್ಚನ್

  |

  ಕಿರುತೆರೆ ಸಾಮ್ರಾಜ್ಯಕ್ಕೆ ಒಬ್ಬರೇ ಮಹಾರಾಜ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅವರು ಬೇರಾರೂ ಅಲ್ಲ, ಬಾಲಿವುಡ್ ಮೇರು ನಟ ಬಿಗ್ ಬಿ ಅಮಿತಾಬ್ ಬಚ್ಚನ್. ಇತ್ತೀಚಿಗೆ ಕಿರಿತೆರೆಗೆ ಲಗ್ಗೆಯಿಟ್ಟ ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಕೂಡ ಅಮಿತಾಬ್ ಜನಪ್ರಿಯತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸತ್ಯಮೇವ ಜಯತೇ, ಕೆಬಿಸಿ ಜನಪ್ರಿಯತೆಯ ಸಮೀಪ ಹೋಗಿದೆಯಾದರೂ ಅದನ್ನು ಮೀರಿಸುವಲ್ಲಿ ಸಫಲವಾಗಿಲ್ಲ.

  ಅಮೀರ್ ಖಾನ್ ಅವರ ಸತ್ಯಮೇವ ಜಯತೇ ಪ್ರಪಂಚದಾದ್ಯಂತ ಸುದ್ದಿಯಾಗಿ ದೇಶದಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸಿದೆ. ಎಲ್ಲೆಲ್ಲೂ ಅಮೀರ್ ಖಾನ್ ಹಾಗೂ ಸತ್ಯಮೇವ ಜಯತೇ ಜನರ ನಾಲಿಗೆ ತುದಿಯಲ್ಲಿದೆ. ಆದರೂ ಆಶ್ಚರ್ಯವೆಂಬಂತೆ, ಸ್ಟಾರ್ ಪ್ಲಸ್ ನಲ್ಲಿ ಮೂಡಿಬರುತ್ತಿರುವ ಸತ್ಯಮೇವ ಜಯತೇ ಟಿವಿ ಟಿಆರ್ ಪಿ ರೇಟಿಂಗ್ ಕೇವಲ 3. ಆದರೆ ಕೆಬಿಸಿ, ಶಾರುಖ್ ಖಾನ್ ನಡೆಸುತ್ತಿದ್ದ ಕೆಬಿಸಿ-5 ನಲ್ಲೂ ಸಾಕಷ್ಟು ಮುಂದಿತ್ತು.

  ಅಷ್ಟೇ ಅಲ್ಲ, ಸಲ್ಮಾನ್ ಖಾನ್ ಶೋ ದಸ್ ಕಾ ಧಮ್ ಕೂಡ ಸತ್ಯಮೇವ ಜಯತೇ ಗಿಂತ್ ಟಿವಿ ಟಿಆರ್ ಪಿ ರೇಟಿಂಗ್ ನಲ್ಲಿ ಮುಂದಿತ್ತು. ಆದರೆ, ಅಮಿತಾಬ್ ನಡೆಸಿಕೊಡುತ್ತಿದ್ದ ಕೆಬಿಸಿ ಆವೃತ್ತಿಗಳಾದ 1-4, ಕಿರಿತೆರೆ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಟಿಆರ್ ಪಿ ದಾಖಲಿಸಿ ಅದನ್ನು ಇನ್ನೂ ಯಾರೂ ಅಳಿಸಿಹಾಕದಂತೆ ಕಾಪಾಡಿಕೊಂಡಿದೆ. ಅಷ್ಟೇ ಅಲ್ಲ, ಮತ್ತೆ ಸದ್ಯದಲ್ಲೇ ಕೆಬಿಸಿ-6, ಅಮಿತಾಬ್ ಸಾರಥ್ಯದಲ್ಲಿ ಮೂಡಿ ಬರಲಿದೆ. ಬಿಗ್ ಬಿ 'ಜೈ ಹೋ...' ಎಂದಿದ್ದಾರೆ ಕಿರುತೆರೆ ವೀಕ್ಷಕರು. (ಏಜೆನ್ಸೀಸ್)

  English summary
  Aamir Khan's recent television show Satyamev Jayate failed to beat megastar Amitabh Bachchan. Satyamev Jayate has clocked an opening TVR (Television Rating) of 3 on Star Plus. But, Amitabh Bachchan's Kaun Banega Crorepati series has been the leading show so far. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X