»   » ಪಿಗ್ಗಿ ಕಾಲು ಪ್ರದರ್ಶನ ವಿವಾದ ಕುರಿತು ಅಮಿತಾಬ್ ಬಚ್ಚನ್ ಹೇಳಿದ್ದೇನು?

ಪಿಗ್ಗಿ ಕಾಲು ಪ್ರದರ್ಶನ ವಿವಾದ ಕುರಿತು ಅಮಿತಾಬ್ ಬಚ್ಚನ್ ಹೇಳಿದ್ದೇನು?

Posted By:
Subscribe to Filmibeat Kannada

ನಟಿ ಪ್ರಿಯಾಂಕ ಚೋಪ್ರಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದ ವೇಳೆ ಧರಿಸಿದ್ದ ತಂಡುಡುಗೆ ಮತ್ತು ಅವರ ಮುಂದೆ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡು ದೇಶದಾದ್ಯಂತ ಟೀಕೆಗೆ ಒಳಗಾಗಿದ್ದರು. ಹಲವರು ಅದನ್ನು ಫ್ರೊಫೇಶನಲ್ ಎಂದಿದ್ರೆ, ಇನ್ನೂ ಹಲವರು ಆಕ್ಷೇಪ ವ್ಯಕ್ತಪಡಿಸಿ ಸಂಸ್ಕೃತಿ ಪಾಠ ಹೇಳಿದ್ದರು.[ಪ್ರಿಯಾಂಕ ಪ್ರದರ್ಶನಕ್ಕಿಟ್ಟಳು ಕಾಲು, ಶುರುವಾಯ್ತು ಟ್ರೋಲ್]

ಸಾಮಾಜಿಕ ಜಾಲತಾಣದಲ್ಲಿ ನಡೆದ ಟ್ರೋಲ್ ಗಳಿಗೆ ತಲೆಕೆಡಿಸಿಕೊಳ್ಳದ ಪಿಗ್ಗಿ, ನಂತರ ನೀಲ ಕಾಲುಗಳ ಪ್ರದರ್ಶನದ ಹಲವು ಫೋಟೋಗಳನ್ನು ಒಂದರ ಹಿಂದೆ ಒಂದರಂತೆ ಸರಣಿ ಫೋಟೋಗಳನ್ನು ಇನ್‌ಸ್ಟಗ್ರಾಂನಲ್ಲಿ ಹರಿಯ ಬಿಟ್ಟು, ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಪ್ರಿಯಾಂಕ ಬಗ್ಗೆ ನಡೆದ ಆನ್‌ಲೈನ್ ಟ್ರೋಲ್ ಬಗ್ಗೆ ಈಗ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.

Amitabh Bachchan react on Priyanka’s dress controversy

ಅಮಿತಾಬ್ ಬಚ್ಚನ್ ಮೊನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಶ್ ರವರ ಪತ್ನಿ ಅಮೃತಾ ಫಡ್ನವಿಶ್ ಹಾಡಿರುವ 'ಫಿರ್ ಸೆ' ಆಲ್ಬಮ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಬಿಗ್ ಬಿ ಗೆ ಮಾಧ್ಯಮದವರು ಪ್ರಿಯಾಂಕ ಚೋಪ್ರಾ ಡ್ರೆಸ್ ಮತ್ತು ಮೊಣಕಾಲು ಪ್ರದರ್ಶನಕ್ಕೆ ನಡೆದ ಟ್ರೋಲ್ ಬಗ್ಗೆ ಪ್ರತಿಕ್ರಿಯೆ ಕೇಳಿದ್ದರು. ಈ ವೇಳೆ ಅಮಿತಾಬ್ ಬಚ್ಚನ್ ರವರು, " ನಾನು ಅದರ ಬಗ್ಗೆ ಮಾತನಾಡಲು ಪ್ರಧಾನಿ ಮೋದಿಯೂ ಅಲ್ಲ, ನಟಿ ಪ್ರಿಯಾಂಕ ಚೋಪ್ರಾನು ಅಲ್ಲ. ನಾನ್ ಹೇಗೆ ಉತ್ತರ ನೀಡಲಿ" ಎಂದು ಸ್ವಲ್ಪ ಖಾರವಾಗಿಯೇ ಉತ್ತರಿಸಿದ್ದಾರೆ.

ಅಲ್ಲದೇ ಪ್ರಿಯಾಂಕ ಚೋಪ್ರಾ ಬಗ್ಗೆ ನಾನು ಮಾತನಾಡುವ ಪರಿಸ್ಥಿತಿಯಲ್ಲಿಯೂ ಇಲ್ಲ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.

English summary
Megastar Amitabh Bachchan speaking about Priyanka’s dress controversy, he said "I am neither PM, nor Priyanka Chopra. How can I answer then?”

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada