For Quick Alerts
ALLOW NOTIFICATIONS  
For Daily Alerts

  ಪ್ರಿಯಾಂಕ ಪ್ರದರ್ಶನಕ್ಕಿಟ್ಟಳು ಕಾಲು, ಶುರುವಾಯ್ತು ಟ್ರೋಲ್

  By Suneel
  |

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನಿನ್ನೆಯಷ್ಟೆ(ಮೇ30) ಪ್ರಧಾನಿ ನರೇಂದ್ರ ಮೋದಿ ರವರನ್ನ ಭೇಟಿ ಮಾಡಿದ್ದ ಬಗ್ಗೆ ಹೇಳಿದ್ವಿ. ನಟಿ ಮೋದಿಯವರನ್ನು ಭೇಟಿ ಮಾಡಿದ್ದ ವೇಳೆಯ ಫೋಟೋವನ್ನು ಸಹ ಫಿಲ್ಮಿಬೀಟ್ ಪ್ರಕಟಿಸಿದ್ದ ಲೇಖನದಲ್ಲಿ ನೀವು ನೋಡಿರುತ್ತೀರಿ.[ಪ್ರಿಯಾಂಕಾ ಚೋಪ್ರಾಗೆ ಆಕಸ್ಮಿಕವಾಗಿ ನರೇಂದ್ರ ಮೋದಿ ಸಿಕ್ಕಾಗಾ.!]

  ನರೇಂದ್ರ ಮೋದಿ ರವರನ್ನು ಭೇಟಿ ಮಾಡಿದ ಸಂತೋಷದಲ್ಲಿ, "ಸುಂದರ ಕಾಕತಾಳೀಯ ಎಂಬಂತೆ ಇಂದು ಬೆಳಿಗ್ಗೆ(ಮಂಗಳವಾರ) ಪ್ರಧಾನಿ ಮೋದಿ ಸಿಕ್ಕರು. ನನ್ನ ಭೇಟಿಗಾಗಿ ಅವರು ಸಮಯ ತೆಗೆದುಕೊಂಡಿದ್ದಕ್ಕೆ ಧನ್ಯವಾದಗಳು ಮೋದಿ ಸರ್" ಎಂದು ಪ್ರಿಯಾಂಕ ಚೋಪ್ರಾ ಟ್ವೀಟ್ ಮಾಡಿದ್ದರು.

  ನರೇಂದ್ರ ಮೋದಿ ರವರನ್ನು ಭೇಟಿ ಮಾಡಿದ್ದ ವೇಳೆ ಪಿಗ್ಗಿ ತಾವು ಧರಿಸಿದ್ದ ಉಡುಗೆಗೆ ಈಗ ದೇಶದಾದ್ಯಂತ ಜನರಿಂದ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹಲವರು ಪ್ರಿಯಾಂಕ ಉಡುಗೆ ಟೀಕಿಸಿ ಕಾಮೆಂಟ್ ಮಾಡಿದ್ದಾರೆ. ಹಾಗೆ ಟ್ರೋಲ್ ಮಾಡಿದವರಿಗೆ ತಕ್ಷಣ ಪಿಗ್ಗಿಯೂ ಸಹ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿರಿ.

  ತುಂಡುಡುಗೆಯಲ್ಲಿ ಕೂತಿದ್ದ ರೀತಿ ಸರಿಯಿಲ್ಲ

  ಗ್ರೇಟ್ ಪ್ರಿಯಾಂಕ ಚೋಪ್ರಾ ಅವರೇ ನೀವು ನಮ್ಮ ದೇಶದ ಪ್ರಧಾನಿ ಮುಂದೆ ಕುಳಿತಾಗ ಆ ರೀತಿ ಕಾಲು ಮೇಲೆ ಕಾಲು ಹಾಕಿ ಕೂರಭಾರದಿತ್ತು. ಹಿರಿಯರನ್ನು ಭೇಟಿ ಮಾಡುವ ವೇಳೆ ಡೀಸೆಂಟ್ ಆಗಿರುವ ಉಡುಗೆಯಲ್ಲಿ ಇರಬೇಕು ಎಂಬುದನ್ನು ಮರೆಯಬಾರದಿತ್ತು. ಅದು ಭಾರತೀಯ ಸಂಸ್ಕೃತಿಯು ಹೌದು. ಇದು ನಮ್ಮ ಅಭಿಪ್ರಾಯ ಎಂದು ಹಲವರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

  ಉಡುಗೆಯಲ್ಲಿ ಸೌಜನ್ಯ ಇರಬೇಕು

  ನೀವು ಎಷ್ಟೇ ದೊಡ್ಡ ತಾರೆಯಾಗಿದ್ದರೂ ಈ ದೇಶದ ಪ್ರಧಾನಿ ಮುಂದೆ ಸೌಜನ್ಯ ಉಡುಗೆಯಿಂದ ಸರಳತೆ ತೋರಬೇಕಿತ್ತು. ನೀವು ಭಾರತೀಯರೇ?...ತುಂಡು ಉಡುಗೆಯಲ್ಲಿ ನೀವು ಪ್ರಧಾನಿ ಮುಂದೆ ಕುಳಿತ ರೀತಿ ಅಸಭ್ಯವಾಗಿತ್ತು. ಅವರಿಗೆ ಅಗೌರವ ತೋರಿದ್ದೀರಿ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  20 ಮೀಟರ್ ಗೌರವ ತೊಟ್ಟಿದ್ದ ಪಿಗ್ಗಿ

  ಮಾಧವಿ ಎಂಬುವರು, " ತುಂಡು ಉಡುಗೆ ಧರಿಸಿ ಮೋದಿ ರವರಿಗೆ ಅಗೌರವ ತೋರಿಸಿರುವುದು ನಿಮ್ಮ ಘನತೆಗೆ ತರವಲ್ಲ. ಆದರೆ ನೀವು ಮೆಟ್ ಗಾಲಾ ದಲ್ಲಿ 20 ಮೀಟರ್ ಗೌರವವನ್ನು ಧರಿಸಿದ್ರಿ' ಎಂದು ಟ್ವೀಟ್ ಮಾಡಿದ್ದಾರೆ.

  ಸಂಸ್ಕೃತಿ ಸದಾ ನೆನಪಿರಬೇಕು

  ಮೋದಿ ಅವರ ಮುಂದೆ ತುಂಡು ಉಡುಗೆ ಮತ್ತು ಕಾಲ ಮೇಲೆ ಕಾಲು ಹಾಕಿ ಕುಳಿತಿರುವುದು ಹೆಚ್ಚು ಬೇಸರ ತರಿಸುತ್ತದೆ. ಗಮನ ಬೇರೆಡೆ ಸೆಳೆಯುತ್ತದೆ. ಭಾರತೀಯ ಸಂಸ್ಕೃತಿ ಏನು ಎಂಬುದು ಸದಾ ನಿಮ್ಮ ನೆನಪಿನಲ್ಲಿರಬೇಕು ಎಂದು ಹಲವರು ಪಿಗ್ಗಿಗೆ ಸಂಸ್ಕೃತಿ ಪಾಠ ಹೇಳಿದ್ದಾರೆ.

  ಈ ಕಾಮೆಂಟ್ ಗೆ ನೀವೇನಂತೀರಿ...

  ಪ್ರಿಯಾಂಕ ಅವರ ಅದೇ ಫೋಟೋ ಬಗ್ಗೆ ಮತ್ತು ಹಲವರ ಕಾಮೆಂಟ್ ನೋಡಿ ಇನ್ನೂ ಕೆಲವರು " ಪ್ರಿಯಾಂಕ ಆ ರೀತಿ ಬಟ್ಟೆ ಧರಿಸಿರುವುದು ಮೋದಿ ರವರು ಒಬ್ಬ ಕ್ಲಾಸಿ ಮ್ಯಾನ್(Classy Man) ಆಗಿದ್ದು ಅವರ ದೃಷ್ಟಿ ಮಹಿಳೆಯರ ಕಾಲುಗಳ ಕಡೆ ಇರುವುದಿಲ್ಲ. ಆದರೆ ಕೆಲವರ ಆಕ್ಷೇಪ ಸರಿಯಿದ್ದರೂ ಸಹ ಅ ರೀತಿಯ ಅಲೋಚನೆಗಳನ್ನು ಮಾನಸಿಕವಾಗಿ ಶುದ್ಧಿಕರಿಸಬೇಕು. ನಾವುಗಳು 21ನೇ ಶತಮಾನದಲ್ಲಿ ಇದ್ದೇವೆ ಎಂಬುದನ್ನು ಮರೆಯಬಾರದು. ಅವರ ಉಡುಗೆ ಸುಂದರವಾಗಿ ಮತ್ತು ಡೀಸೆಂಟ್ ಆಗಿಯೇ ಇದೆ. ಅದು ಅವರ ಪ್ರೊಫೇಶನಲ್" ಎಂದು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

  ಪ್ರತಿಕ್ರಿಯೆಯಿಂದ ಶಾಕ್ ನೀಡಿದ ಪಿಗ್ಗಿ

  ದೇಶದಾದ್ಯಂತ ಜನರು ಅವರ ಉಡುಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ ಚೋಪ್ರಾ ತಾವು ಕಾಲು ಮೇಲೆ ಕಾಲು ಹಾಕಿ ಕುಳಿತ ಹಲವು ಫೋಟೋಗಳನ್ನು ಇನ್ ಸ್ಟಗ್ರಾಂ ನಲ್ಲಿ ಹರಿಯಬಿಟ್ಟಿದ್ದಾರೆ. ಈ ಫೋಟೋ ನೋಡಿ.

  ತಾಯಿಯೊಂದಿಗೆ ಕುಳಿತು ನೀಳ ಕಾಲುಗಳ ಪ್ರದರ್ಶನ

  ಸಾಮಾಜಿಕ ಜಾಲತಾಣಗಳ ಟ್ರೋಲ್ ಗೆ ಉತ್ತರ ಕೊಟ್ಟ ಪ್ರಿಯಾಂಕ ಚೋಪ್ರಾ 'Legs for days...#itsthegenes' ಎಂದು ಬರೆದು ತಮ್ಮ ತಾಯಿಯೊಂದಿಗೆ ಕುಳಿತು ನೀಲ ಕಾಲುಗಳನ್ನು ಪ್ರದರ್ಶನ ಮಾಡಿರುವ ಫೋಟೋವನ್ನು ಇನ್‌ ಸ್ಟಗ್ರಾಂ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

  English summary
  Priyanka Chopra was trolled for exposing legs in front of Narendra Modi. Priyanka Chopra was slammed because the dress exposed her legs. Her answer is show off some more leg with mother Madhu Chopra.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more