»   » ರಾಜೇಶ್ ಖನ್ನಾ ಪಾದ ಸ್ಪರ್ಶಿಸಿ ಕಣ್ಣೀರಾದ ಅಮಿತಾಬ್

ರಾಜೇಶ್ ಖನ್ನಾ ಪಾದ ಸ್ಪರ್ಶಿಸಿ ಕಣ್ಣೀರಾದ ಅಮಿತಾಬ್

Posted By:
Subscribe to Filmibeat Kannada

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ನಮ್ಮನ್ನಗಲಿದ ಬಾಲಿವುಡ್ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಪಾರ್ಥಿವ ದೇಹದ ಪಾದ ಸ್ಪರ್ಶಸಿ ಕಣ್ಣೀರಿಟ್ಟಿದ್ದಾರೆ. ನಿನ್ನೆ (ಜುಲೈ 18 2012) ತಮ್ಮ ಸ್ವಗೃಹ 'ಆಶೀರ್ವಾದ್'ನಲ್ಲಿ ಅನಾರೋಗ್ಯದಿಂದ ತೀರಿಕೊಂಡ ಹಿರಿಯ ನಟ ರಾಜೇಶ್ ಖನ್ನಾ, ಅಮಿತಾಬ್ ಸೂಪರ್ ಸ್ಟಾರ್ ಆಗುವುದಕ್ಕಿಂತ ಮೊದಲು ಆ ಸೀಟಿನಲ್ಲಿ ರಾರಾಜಿಸಿದವರು.

ರಾಜೇಶ್ ಖನ್ನಾ ಜೊತೆ ಅಮಿತಾಬ್ ಬಚ್ಚನ್ ಅವರು 'ಆನಂದ್' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ರಾಜೇಶ್ ಖನ್ನಾರ ಮನೆಗೆ ಬಂದ ಅಮಿತಾಬ್, ಅವರ ಪಾರ್ಥಿವ ಶರೀರವನ್ನು ನೋಡಿದ ತಕ್ಷಣ ಭಾವೋದ್ವೇಗಕ್ಕೆ ಒಳಗಾದರು. ತಾವು ಧರಿಸಿದ್ದ ಕನ್ನಡಕವನ್ನು ತೆಗೆದು ರಾಜೇಶ್ ಕಾಲನ್ನು ಸ್ಪರ್ಶಿಸಿ ಕಣ್ಣೀರಿಟ್ಟರು ಮೇರುನಟ ಅಮಿತಾಬ್ ಬಚ್ಚನ್. ಈ ದೃಶ್ಯವನ್ನು ನೋಡಿದವರೆಲ್ಲಾ ಕಂಬನಿ ತುಂಬಿಕೊಂಡರು.

'ಕಾಕಾರ ಪಾದವನ್ನು ಮುಟ್ಟಿ ಶೃದ್ಧಾಂಜಲಿ ಸಲ್ಲಿಸಿದ ತಮ್ಮ ಅಪ್ಪ ಅಮಿತಾಬ್ ಅವರು ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದನ್ನು ಅರಿತ ಮಗ ಅಭಿಷೇಕ್ ಬಚ್ಚನ್, ಅಮಿತಾಬ್ ಕುಸಿದು ಬೀಳದಂತೆ ತಡೆಯಲು ಅವರೆಡೆ ಓಡಿಬಂದು ಆಸರೆಯಾಗಿ ನಿಂತಿದ್ದು ಅಲ್ಲಿ ಕಂಡುಬಂದ ದೃಶ್ಯವಾಗಿತ್ತು. ಆ ಮಟ್ಟಿಗೆ ಅಮಿತಾಬ್ ಶಾಕ್ ಆಗಿದ್ದು ಅಲ್ಲಿ ನೆರೆದವರೆಲ್ಲರ ಗಮನಕ್ಕೆ ಬಂದಿದೆ.

ಈ ದೃಶ್ಯ ಎಲ್ಲರ ಹೃದಯ ಕಲಕಿದ್ದು ಸತ್ಯವಾಗಿತ್ತಾದರೂ ಆ ಕ್ಷಣ ರಾಜೇಶ್ ಖನ್ನಾ ಇನ್ನಿಲ್ಲವೆಂಬುದನ್ನು ನಂಬಲೂ ಸಾಧ್ಯವಿರಲಿಲ್ಲ. ರಾಜೇಶ್ ಖನ್ನಾ ಪಾರ್ಥಿವ ದೇಹದ ಅಂತಿಮ ದರ್ಶನ ಪಡೆದ ನಂತರ ದುಃಖತಪ್ತರಾದ ಅಮಿತಾಬ್, ತಮ್ಮ ಟ್ವಿಟ್ಟರ್ ಪೇಜಿನಲ್ಲಿ ಹೀಗೆ ಬರೆದಿದ್ದಾರೆ...
"At his home earlier today. Someone close came up and told me, his last words were 'time up ho gaya- pack up!!"

(ಏಜೆನ್ಸೀಸ್)

English summary
Big B, who worked with Rajesh Khanna in Anand, got very emotional after seeing Kaka's body. Amitabh Bachchan removed his spectacles and touched Rajesh Khanna's feet with moist eyes.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada