»   » 'ಫ್ಯಾನಿ ಖಾನ್' ಚಿತ್ರಕ್ಕೆ ಸಜ್ಜಾದ ಐಶೂ! ನಟ ಯಾರು?

'ಫ್ಯಾನಿ ಖಾನ್' ಚಿತ್ರಕ್ಕೆ ಸಜ್ಜಾದ ಐಶೂ! ನಟ ಯಾರು?

Posted By:
Subscribe to Filmibeat Kannada

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ 'ಫ್ಯಾನಿ ಖಾನ್' ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಈ ಚಿತ್ರ ಆಗಸ್ಟ್ ನಲ್ಲಿ ಸೆಟ್ಟೇರಲಿದೆ. 2018 ರ ಏಪ್ರಿಲ್ ನಲ್ಲಿ ತೆರೆಗೆ ತರಲು ನಿರ್ಧರಿಸಿರುವ ಈ ಚಿತ್ರದಲ್ಲಿ ಐಶೂ ಜೊತೆ 17 ವರ್ಷಗಳ ನಂತರ ಬಾಲಿವುಡ್ ನಟನೊಬ್ಬ ಜೊತೆಯಾಗುತ್ತಿರುವುದು ವಿಶೇಷ.

'ಫ್ಯಾನಿ ಖಾನ್' ಚಿತ್ರಕ್ಕಾಗಿ ಈಗ 17 ವರ್ಷಗಳ ನಂತರ ಐಶ್ವರ್ಯ ರೈ ಬಚ್ಚನ್ ಜೊತೆ ಮತ್ತೆ ತೆರೆ ಹಂಚಿಕೊಳ್ಳುತ್ತಿರುವುದು ನಟ ಹಾಗೂ ನಿರ್ಮಾಪಕರಾದ ಅನಿಲ್ ಕಪೂರ್. ಈ ಜೋಡಿ ಹಿಂದೆ 2000 ನೇ ಇಸವಿಯಲ್ಲಿ 'ಹಮಾರಾ ದಿಲ್ ಆಪ್ಕೆ ಪಾಸ್ ಹೈ' ಮತ್ತು 1999 ರಲ್ಲಿ 'ತಾಲ್'(Taal) ಚಿತ್ರದಲ್ಲಿ ಅಭಿನಯಿಸಿದ್ದರು.

Anil Kapoor and Aishwarya Rai Bachchan’s 'Fanney Khan' All Set To Go On Floors!

ಫ್ಯಾನಿ ಖಾನ್ ಎಂಬ ಹಾಡುಗಾರ ತನ್ನ ಮಗಳು ಸಹ ಮ್ಯೂಸಿಕ್ ವರ್ಲ್ಡ್ ನಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಆಸೆಯಲ್ಲಿ ಸ್ಟ್ರಗಲ್ ಮಾಡುವ ಚಿತ್ರ ಕಥೆಯನ್ನು 'ಫ್ಯಾನಿ ಖಾನ್' ಹೊಂದಿದೆ.

ಐಶ್ವರ್ಯ ರೈ ಬಚ್ಚನ್ ಆಗಸ್ಟ್ ನಲ್ಲಿ ಚಿತ್ರೀಕರಣಕ್ಕೆ ಭಾಗಿಯಾಗಲಿದ್ದು, ಚಿತ್ರವನ್ನು ಟಿ-ಸೀರೀಸ್ ರಾಕೇಶ್ ಓಂಪ್ರಕಾಶ್ ಮೆಹ್ರಾ ಪಿಕ್ಚರ್ಸ್ ಮತ್ತು KriArj ಎಂಟರ್‌ ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾಗೆ ನವ ನಿರ್ದೇಶಕ ಅಥುಲ್ ಮಂಜ್ರೇಕರ್ ಎಂಬುವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅನಿಲ್ ಕಪೂರ್ ಸಹ ಈ ಚಿತ್ರದ ಸ್ಕ್ರಿಪ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಐಶ್ವರ್ಯ ಅವರೊಂದಿಗೆ ಅಭಿನಯಿಸಲಿರುವ ಎರಡನೇ ಸಂಗೀತ ಹಿನ್ನೆಲೆಯ ಚಿತ್ರ ಇದಾಗಿದೆ.

English summary
Anil Kapoor and Aishwarya Rai Bachchan’s 'Fanney Khan' All Set To Go On Floors!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada