For Quick Alerts
  ALLOW NOTIFICATIONS  
  For Daily Alerts

  ಭಾವಿ ಪತಿಗೆ ಭಾವನಾತ್ಮಕ ಪತ್ರ ಬರೆದು, ಕ್ಷಮೆಯಾಚಿಸಿದ ಸುಶಾಂತ್ ಸಿಂಗ್ ಮಾಜಿ ಪ್ರಿಯತಮೆ ಅಂಕಿತಾ

  |

  ಹಿಂದಿ ಕಿರುತೆರೆಯ ಖ್ಯಾತ ನಟಿ ಅಂಕಿತಾ ಲೋಖಂಡೆ ಯಾರಿಗೆ ತಾನೆ ಗೊತ್ತಿಲ್ಲ. ನಟಿಯಾಗಿ ಹೆಚ್ಚು ಗುರುತಿಸಿಕೊಂಡಿದ್ದಕ್ಕಿಂತ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಎಂದೇ ಹೆಚ್ಚು ಖ್ಯಾತಿಗಳಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಭಾರಿ ಸುದ್ದಿಯಲ್ಲಿದ್ದ ನಟಿ ಅಂಕಿತಾ, ರಿಯಾ ಚಕ್ರವರ್ತಿ ವಿರುದ್ಧ ಸಾಕಷ್ಟು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

  ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಅಂಕಿತಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಭಾವಿ ಪತಿಗೆ ಭಾವನಾತ್ಮಕ ಪತ್ರ ಬರೆಯುವ ಮೂಲಕ ಅಂಕಿತಾ ಮತ್ತೆ ಸದ್ದು ಮಾಡುತ್ತಿದ್ದಾರೆ. ನಟಿ ಅಂಕಿತಾ, ವಿಕ್ಕಿ ಜೈನ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಇದೀಗ ಇಬ್ಬರು ಮದುವೆಯಾಗುವ ಪ್ಲಾನ್ ಮಾಡಿದ್ದಾರೆ. ಈ ಮಧ್ಯೆ ಭಾವಿ ಪತಿಗೆ ಹೃದಯಸ್ಪರ್ಶಿ ಪತ್ರ ಬರೆದು, ಕ್ಷಮೆಯಾಚಿಸಿದ್ದಾರೆ. ಮುಂದೆ ಓದಿ..

  ಸುಶಾಂತ್ ಸಿಂಗ್ ಸಾವಿನ ಪ್ರಕರಣ: 3 ತಿಂಗಳ ಬಳಿಕ ಮೌನ ಮುರಿದ ಬಿಹಾರ ಸಿಎಂ ನಿತೀಶ್ ಕುಮಾರ್ಸುಶಾಂತ್ ಸಿಂಗ್ ಸಾವಿನ ಪ್ರಕರಣ: 3 ತಿಂಗಳ ಬಳಿಕ ಮೌನ ಮುರಿದ ಬಿಹಾರ ಸಿಎಂ ನಿತೀಶ್ ಕುಮಾರ್

  ಅಂಕಿತಾ ಬೆಂಬಲಕ್ಕೆ ನಿಂತ ಭಾವಿ ಪತಿ

  ಅಂಕಿತಾ ಬೆಂಬಲಕ್ಕೆ ನಿಂತ ಭಾವಿ ಪತಿ

  ಸುಮಾರು 10 ವರ್ಷಗಳಿಂದ ಇಬ್ಬರು ಒಬ್ಬರಿಗೊಬ್ಬರು ಪರಿಚಿತರು. ಸುಶಾಂತ್ ಸಿಂಗ್ ನಿಂದ ದೂರ ಆದ ಬಳಿಕ ಅಂಕಿತಾ, ವಿಕ್ಕಿ ಜೈನ್ ಜೊತೆ ಪ್ರೀತಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಅಂಕಿತಾರ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಲ್ಲಿ ನಿಂತು ಬೆಂಬಲಿಸಿದ ಭಾವಿ ಪತಿಯ ಬಗ್ಗೆ ಭಾವುಕ ಸಂದೇಶ ಬರೆದಿದ್ದಾರೆ. ತನ್ನಿಂದ ಬಂದ ಎಲ್ಲಾ ಟೀಕೆಗಳಿಗೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

  ಜೊತೆಗಾರನಾಗಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸುತ್ತೇನೆ

  ಜೊತೆಗಾರನಾಗಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸುತ್ತೇನೆ

  "ನನ್ನ ಭಾವನೆಗಳನ್ನು ವಿವರಿಸಲು ಪದಗಳೇ ಸಿಗುತ್ತಿಲ್ಲ. ನಮ್ಮನ್ನು ಒಟ್ಟಿಗೆ ನೋಡಿದಾಗ ನನ್ನ ಮನಸ್ಸಿನಲ್ಲಿ ಬರುವ ಒಂದು ವಿಷಯವೆಂದರೆ ನನ್ನ ಜೀವನದಲ್ಲಿ ನಿಮ್ಮನ್ನು ನಮ್ಮನ್ನು ಸ್ನೇಹಿತನಾಗಿ, ಜೊತೆಗಾರನಾಗಿ, ಆತ್ಮ ಸಂಗಾತಿಯಾಗಿ ಕಳುಹಿಸಿದ್ದಕ್ಕೆ ನಾನು ದೇವರಿಗೆ ಕೃತಜ್ಞನಾಗಿದ್ದೇನೆ" ಎಂದಿದ್ದಾರೆ.

  ಸುಶಾಂತ್ ಸಹೋದರಿಯರ ವಿರುದ್ಧ ಎಫ್‌ಐಆರ್ ರದ್ದು ಮಾಡದಂತೆ ರಿಯಾ ಮನವಿಸುಶಾಂತ್ ಸಹೋದರಿಯರ ವಿರುದ್ಧ ಎಫ್‌ಐಆರ್ ರದ್ದು ಮಾಡದಂತೆ ರಿಯಾ ಮನವಿ

  'ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆ ನಿಂತ ನಿಮಗೆ ಧನ್ಯವಾದಗಳು'

  'ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆ ನಿಂತ ನಿಮಗೆ ಧನ್ಯವಾದಗಳು'

  "ನನ್ನ ಜೊತೆ, ನನಗಾಗಿ ಇರುವುದಕ್ಕಾಗಿ ಧನ್ಯವಾದಗಳನ್ನು ಹೇಳುತ್ತೇನೆ. ನನ್ನ ಎಲ್ಲಾ ಸಮಸ್ಯೆಗಳನ್ನು ನಿಮ್ಮ ಸಮಸ್ಯೆಯೇ ಎಂದು ಭಾವಿಸಿದ್ದಕ್ಕಾಗಿ ಮತ್ತು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ನನ್ನನ್ನು ಮತ್ತು ನನ್ನ ಸಂದರ್ಭಗಳನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು." ಎಂದು ಹೇಳಿದ್ದಾರೆ.

  DIRECTOR'S DIARY : ಬೆಳೆಯೋ ಟೈಮ್ ನಲ್ಲಿ ನನ್ನ ವಿರುದ್ಧ ರವಿ ಬೆಳಗೆರೆ ಪತ್ರಿಕೆಯಲ್ಲಿ ಆರ್ಟಿಕಲ್ ಬಂದಿತ್ತು| Part 1
  ದಯವಿಟ್ಟು ಕ್ಷಮಿಸಿ-ಅಂಕಿತಾ

  ದಯವಿಟ್ಟು ಕ್ಷಮಿಸಿ-ಅಂಕಿತಾ

  "ದಯವಿಟ್ಟು ನನ್ನು ಕ್ಷಮಿಸು, ನನ್ನಿಂದಾಗಿ ನೀವು ಟೀಕೆಗಳನ್ನು ಎದುರಿಸಿದ್ದಕ್ಕಾಗಿ. ಅದು ನಿಮಗೆ ಅರ್ಹವಲ್ಲ. ಪದಗಳು ತುಂಬಾ ಕಡಿಮೆಯಾಗುತ್ತವೆ. ಆದರೆ ಈ ಬಂಧವು ಅದ್ಭುತವಾಗಿದೆ. ಐ ಲವ್ ಯು" ಎಂದು ಭಾವಿ ಪತಿಯ ಬಗ್ಗೆ ದೀರ್ಘವಾಗಿ ಬರೆದುಕೊಂಡು ಕ್ಷಮೆಯಾಚಿಸಿದ್ದಾರೆ.

  English summary
  Sushant Singh ex girlfriend Ankita Lokhande pens heartfelt love letter to beau Vicky Jain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X