For Quick Alerts
  ALLOW NOTIFICATIONS  
  For Daily Alerts

  'ನಗ್ನ ವಿಡಿಯೋ ಪೋಸ್ಟ್ ಮಾಡಿದ್ರು': ರಾಜ್ ಕುಂದ್ರಾ ವಿರುದ್ಧ ಮತ್ತೊಬ್ಬ ನಟಿ ದೂರು

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ರಾಜ್ ಕುಂದ್ರಾಗೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೇ ಬಾಲಿವುಡ್‌ನ ಕೆಲವು ನಟಿಯರು ಹಾಗೂ ಮಾಡೆಲ್‌ಗಳು ಕುಂದ್ರಾ ಸಂಸ್ಥೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಶ್ಲೀಲ ಸಿನಿಮಾ ನಿರ್ಮಿಸುತ್ತಿದ್ದರು, ಒತ್ತಾಯವಾಗಿ ನಟಿಯರ ನಗ್ನ ವಿಡಿಯೋ ಚಿತ್ರಿಸಲಾಗುತ್ತಿತ್ತು. ಕಿರುಕುಳ ಕೊಡುವುದು, ಬೆದರಿಕೆ ಹಾಕಿ ವಿಡಿಯೋ ಶೂಟ್ ಮಾಡಿದ್ದರು ಎಂದೆಲ್ಲಾ ಆರೋಪಗಳು ವರದಿಯಾಗಿದೆ.

  ಇದೀಗ, ಮತ್ತೊಬ್ಬ ನಟಿ ಕಮ್ ಮಾಡೆಲ್ ಶಿಲ್ಪಾ ಶೆಟ್ಟಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ತೆಲುಗು ಬುಲೆಟಿನ್, ಜೀ ತೆಲುಗು, ಟಿ-ನ್ಯೂಸ್ ತೆಲುಗು ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ, ''ಅನುಮತಿ ಇಲ್ಲದೇ ಇಂಟರ್‌ನೆಟ್‌ನಲ್ಲಿ ನಗ್ನ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರಂತೆ.

  ಬ್ಲೂ ಫಿಲ್ಮ್ ದಂಧೆ ಪ್ರಕರಣ; ರಾಜ್ ಕುಂದ್ರ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ಬ್ಲೂ ಫಿಲ್ಮ್ ದಂಧೆ ಪ್ರಕರಣ; ರಾಜ್ ಕುಂದ್ರ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

  ಈ ದೂರು ಕೊಟ್ಟಿರುವ ಮಾಡೆಲ್ ಕಮ್ ನಟಿ ಯಾರೆಂದು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ, ಮುಂಬೈನ ಮಲ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.

  ''ತನ್ನ ಖಾಸಗಿ ಭಾಗಗಳನ್ನು ವಿಡಿಯೋದಲ್ಲಿ ತೋರಿಸುವುದಿಲ್ಲ ಎಂದು ನಂಬಿಸಿ ನಗ್ನವಾಗಿ ವಿಡಿಯೋ ಚಿತ್ರೀಕರಿಸಿದರು. ಆಮೇಲೆ ನನ್ನ ಅನುಮತಿ ಪಡೆಯದೆ, ನಗ್ನ ವಿಡಿಯೋವನ್ನು ಹಾಟ್‌ಶಾಟ್ ಆಪ್‌ನಲ್ಲಿ ಹಾಗೂ ಇತರೆ ಆಪ್‌ನಲ್ಲಿ ಅಪ್‌ಲೌಡ್ ಮಾಡಲಾಗಿದೆ. ಸ್ನೇಹಿತರ ಮೂಲಕ ನನಗೆ ಈ ವಿಷಯ ತಿಳಿಯಿತು' ಎಂದು ನಟಿ ದೂರಿದ್ದಾರೆ.

  ರಾಜ್ ಕುಂದ್ರಾ ಕೇಸ್: 8 ಗಂಟೆ ವಿಚಾರಣೆ, ಪೊಲೀಸರ ಮುಂದೆ ಶೆರ್ಲಿನ್ ಬಿಚ್ಚಿಟ್ಟ ವಿಷಯಗಳೇನು?ರಾಜ್ ಕುಂದ್ರಾ ಕೇಸ್: 8 ಗಂಟೆ ವಿಚಾರಣೆ, ಪೊಲೀಸರ ಮುಂದೆ ಶೆರ್ಲಿನ್ ಬಿಚ್ಚಿಟ್ಟ ವಿಷಯಗಳೇನು?

  ಜಾಮೀನು ನಿರಾಕರಿಸಿದ ಹೈ ಕೋರ್ಟ್

  14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾಗೆ ತಕ್ಷಣ ಜಾಮೀನು ಮಂಜೂರು ಮಾಡಬೇಕು ಎಂದು ವಕೀಲರು ಮನವಿ ಮಾಡಿದ್ದರು. ಆದರೆ, ಶಿಲ್ಪಾ ಶೆಟ್ಟಿ ಪತಿಗೆ ಮುಂಬೈ ಹೈ ಕೋರ್ಟ್ ಆಘಾತ ನೀಡಿದೆ. ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

  Another Actress Filed Complaint against Raj kundra

  ಸೆಕ್ಷನ್ 41ಸಿಆರ್‌ಪಿಸಿ ಅಡಿ ನೋಟಿಸ್ ನೀಡದೆ ರಾಜ್ ಕುಂದ್ರಾರನ್ನು ಬಂಧಿಸಲಾಗಿದೆ. ಇದು ಅಕ್ರಮ ಬಂಧನ ಎಂದು ವಕೀಲರು ಕೋರ್ಟ್‌ನಲ್ಲಿ ವಾದಿಸಿದ್ದರು. ಆದರೆ, ಕೇಸ್‌ಗೆ ಸೂಕ್ತ ರೀತಿಯಲ್ಲಿ ಸಹಕರಿಸಿಲ್ಲ, ಕಚೇರಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಕುಂದ್ರಾ ನಡೆದುಕೊಂಡ ರೀತಿಯಿಂದಾಗಿ ಬಂಧಿಸಬೇಕಾಯಿತು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಎರಡು ಕಡೆ ವಾದ ಆಲಿಸಿದ ಮುಂಬೈ ಕೋರ್ಟ್ ರಾಜ್ ಕುಂದ್ರಾ ಮತ್ತು ರಿಯಾನ್ ಥೋರ್ಪೆಗೆ ಬಿಡುಗಡೆ ನಿರಾಕರಿಸಿದೆ.

  ವಿಚಾರಣೆ ಎದುರಿಸಿದ ಬಂದ ಶೆರ್ಲಿನ್ ಚೋಪ್ರಾ

  ರಾಜ್ ಕುಂದ್ರಾ ಬಂಧನ ಕೇಸ್‌ನಲ್ಲಿ ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಪೊಲೀಸರ ಸಮನ್ಸ್ ನೀಡಿದ್ದರು. ಈ ಹಿನ್ನೆಲೆ ಶನಿವಾರ ಪೊಲೀಸರು ಎದುರು ಹಾಜರಾದ ನಟಿಗೆ ಸುಮಾರು 8 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಈ ವೇಳೆ ಕುಂದ್ರಾ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಶೆರ್ಲಿನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  ರಾಜ್ ಕುಂದ್ರಾ ಅವರ ಆರ್ಮ್‌ಪ್ರೈಮ್ ಸಂಸ್ಥೆ ಜೊತೆಗಿನ ಒಪ್ಪಂದ ಹೇಗಾಯಿತು ಮತ್ತು ಆ ಒಪ್ಪಂದಲ್ಲಿ ಯಾವೆಲ್ಲ ಅಂಶಗಳಿವೆ ಎಂದು ಶೆರ್ಲಿನ್ ಚೋಪ್ರಾಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ಕೇಸ್‌ನಲ್ಲಿ ರಾಜ್ ಕುಂದ್ರಾ ಅವರ ಜೊತೆ ನಿಮ್ಮ ಸಂಬಂಧವೇನು? ಅವರ ಸಂಸ್ಥೆಯಲ್ಲಿ ಎಷ್ಟು ವಿಡಿಯೋಗಳಲ್ಲಿ ನೀವು ಪಾಲ್ಗೊಂಡಿದ್ರಿ ಎಂದು ವಿಚಾರಣೆಯಲ್ಲಿ ಕೇಳಿದ್ರು ಎಂದು ಶೆರ್ಲಿನ್ ಇ-ಟೈಮ್ಸ್‌ಗೆ ಹೇಳಿದ್ದಾರೆ. ಅವರು ಕೇಳಿದ ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ ಎಂದು ನಟಿ ಶೆರ್ಲಿನ್ ತಿಳಿಸಿದ್ದಾರೆ.

  ''ಈ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಎಂದು ದಿನಾಂಕ-ಸಮಯದ ಸಮೇತ ನಾನು ಪೊಲೀಸರೊಂದಿಗೆ ಮಾಹಿತಿ ನೀಡಿದ್ದೇನೆ. ವಾಟ್ಸಾಪ್ ಚಾಟ್ ಸಹ ಒಪ್ಪಿಸಿದ್ದೇನೆ. ಈ ಹಿಂದೆ ಮಹಾರಾಷ್ಟ್ರ ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ್ದ ಎಲ್ಲಾ ಮಾಹಿತಿ, ದಾಖಲೆ ಹಾಗು ಹೇಳಿಕೆಗಳನ್ನು ಈಗ ಮುಂಬೈ ಪೊಲೀಸರಿಗೂ ನೀಡಿದ್ದೇನೆ. ಕಳೆದ ಏಪ್ರಿಲ್ ತಿಂಗಳಲ್ಲಿ ಕುಂದ್ರಾ ವಿರುದ್ಧ ಏಕೆ ದೂರು ನೀಡಿದ್ದೆ ಎಂದು ಸಹ ವಿವರಿಸಿದ್ದೇನೆ'' ಎಂದು ನಟಿ ಶೆರ್ಲಿನ್ ಮಾಧ್ಯಮಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

  English summary
  Pornography case: Another Actress Filed Complaint against businessman Raj kundra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X