For Quick Alerts
  ALLOW NOTIFICATIONS  
  For Daily Alerts

  ಐಟಿ ದಾಳಿ ಬಳಿಕ ಚಿತ್ರೀಕರಣ ಆರಂಭಿಸಿದ ಅನುರಾಗ್ ಕಶ್ಯಪ್-ತಾಪ್ಸಿ

  |

  ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ನಿವಾಸ ಹಾಗು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆದಿತ್ತು.

  ತೆರಿಗೆ ವಂಚನೆ ಆರೋಪದಲ್ಲಿ ನಿರ್ದೇಶಕ ಹಾಗೂ ನಟಿ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಇದೀಗ, ಐಟಿ ಪರಿಶೀಲನೆ ನಡೆದ ಬಳಿಕ ಇಬ್ಬರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

  ತಾಪ್ಸಿ ಪನ್ನು-ಅನುರಾಗ್ ಕಶ್ಯಪ್ ಮನೆಯಲ್ಲಿ ದೊರಕಿದೆ ನೂರಾರು ಕೋಟಿ: ಐಟಿ ಇಲಾಖೆ ಮಾಹಿತಿ

  ಅನುರಾಗ್ ಕಶ್ಯಪ್ ಮತ್ತು ತಾಪ್ಸಿ 'ದೋಬಾರಾ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮರು ಪ್ರಾರಂಭಿಸಿದ್ದಾರೆ. ಸಣ್ಣದೊಂದು ಬ್ರೇಕ್‌ನ ನಂತರ ಮತ್ತೆ ಚಿತ್ರೀಕರಣ ಶುರು ಮಾಡಿರುವ ಕಶ್ಯಪ್-ತಾಪ್ಸಿ ಫೋಟೋ ಹಂಚಿಕೊಂಡಿದ್ದಾರೆ.

  ಅಂದ್ಹಾಗೆ, ಫೆಬ್ರವರಿ 22 ರಂದು ದೋಬಾರಾ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಮಾರ್ಚ್ 3 ರಂದು ಹೈದರಾಬಾದ್, ಮುಂಬೈ ಹಾಗೂ ಪುಣೆಯಲ್ಲಿ ನಿರ್ದೇಶಕ ಕಶ್ಯಪ್, ನಟಿ ತಾಪ್ಸಿ ಹಾಗೂ ನಿರ್ದೇಶಕ ವಿಕಾಸ್ ಭಾಲ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada

  ಆದಾಯ ತೆರಿಗೆ ದಾಳಿ ಬಳಿಕ ಮಾಹಿತಿ ನೀಡಿರುವ ಐಟಿ ಅಧಿಕಾರಿಗಳು, 650 ಕೋಟಿ ಮೌಲ್ಯದ ಆಸ್ತಿ, ಹಣದ ಲೆಕ್ಕಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ಹೇಳಿದ್ದರು.

  English summary
  Bollywood Director Anurag Kashyap and actress Taapsee Pannu restarts shooting after IT Raid.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X