»   » ತಮ್ಮ ವೃತ್ತಿ ಜೀವನದ ಕಹಿ ಅನುಭವ ಬಿಚ್ಚಿಟ್ಟ ಅನುಷ್ಕಾ ಶರ್ಮಾ

ತಮ್ಮ ವೃತ್ತಿ ಜೀವನದ ಕಹಿ ಅನುಭವ ಬಿಚ್ಚಿಟ್ಟ ಅನುಷ್ಕಾ ಶರ್ಮಾ

Posted By:
Subscribe to Filmibeat Kannada

ಬಾಲಿವುಡ್ ಸ್ಟಾರ್ ನಟಿಯರ ಪೈಕಿ ಅನುಷ್ಕಾ ಶರ್ಮಾ ಕೂಡ ಪ್ರಮುಖರು. ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ರಂಜಿಸಿರುವ ಈ ನಟಿ ಸಿನಿ ಮೆಕರ್ಸ್ ಗೆ ಅಚ್ಚುಮೆಚ್ಚು.

ಚೊಚ್ಚಲ ಚಿತ್ರದಲ್ಲೇ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಅದೃಷ್ಟ ಗಿಟ್ಟಿಸಿಕೊಂಡ ಅನುಷ್ಕಾ, ಮತ್ತೆ ಹಿಂದೆ ತಿರುಗಿ ನೋಡಿಲ್ಲ.

Anushka have been facing rejection from the age of 15

ಆದ್ರೆ, ಅನುಷ್ಕಾ ಶರ್ಮಾ ಕೂಡ ಆರಂಭದ ದಿನದಲ್ಲಿ ಕಹಿ ಅನುಭವವನ್ನ ಎದುರಿಸಿದ್ದರಂತೆ. ಚಿತ್ರರಂಗಕ್ಕೆ ಬರುವ ಮುಂಚೆ ನಟಿ ಅನುಷ್ಕಾ ಶರ್ಮಾ ಮಾಡಲಿಂಗ್ ಮಾಡ್ತಿದ್ದರು. ತಾವು 15ನೇ ವಯಸ್ಸಿನಲ್ಲಿದ್ದಾಗ ಸಿನಿಮಾಗಳಿಂದ ಆಫರ್ ಬಂದಿತ್ತು. ಆದ್ರೆ, ಬೇರೆ ನಟಿಯರಿಗೆ ಅವಕಾಶ ನೀಡುವ ಸಲುವಾಗಿ ತಮ್ಮ ಅವಕಾಶವನ್ನ ಕೈತಪ್ಪಿಸುತ್ತಿದ್ದರಂತೆ. ಇದು ಅನುಷ್ಕಾಗೆ ಬಹುದೊಡ್ಡ ನೋವು ಉಂಟು ಮಾಡಿತ್ತಂತೆ.

ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅನುಷ್ಕಾ ಕೇವಲ ನಟನೆ ಬಗ್ಗೆ ಮಾತ್ರ ಗಮನಹರಿಸಿದರು. ಅದರ ಪರಿಣಾಮ ಬಾಲಿವುಡ್ ಸ್ಟಾರ್ ನಿರ್ಮಾಪಕರು, ನಿರ್ದೇಶಕರು ಈಕೆಯ ಹಿಂದೆ ಬಿದ್ದರು.

ಅನುಷ್ಕಾ ಶರ್ಮಾ ನಟಿಯಾಗಲು ಈ ಬಾಲಿವುಡ್ ಬ್ಯೂಟಿಯೇ ಕಾರಣ! ಯಾರದು?

Anushka have been facing rejection from the age of 15

ಈಗ ಅನುಷ್ಕಾ ಶರ್ಮಾ ಕೇವಲ ನಟಿಯಾಗಿ ಮಾತ್ರವಲ್ಲದೇ, ತನ್ನದೇ ನಿರ್ಮಾಣ ಸಂಸ್ಥೆಯನ್ನ ಕೂಡ ಸ್ಥಾಪಿಸಿ, ನಿರ್ಮಾಪಕಿಯಾಗಿಯೂ ಬೆಳೆದು ನಿಂತಿದ್ದಾರೆ.

English summary
I have been facing rejection from the age of 15 says actress Anushka Sharma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada