For Quick Alerts
  ALLOW NOTIFICATIONS  
  For Daily Alerts

  ಟೈಗರ್ ಶ್ರಾಫ್ ಟ್ರೈಲರ್ ನೋಡಿ F**K ಎಂದ ಅರ್ಜುನ್ ಕಪೂರ್

  |

  'ಸ್ಟೂಡೆಂಟ್ ಆಫ್ ದಿ ಇಯರ್-2' ಚಿತ್ರದ ಬಳಿಕ ನಟ ಟೈಗರ್ ಶ್ರಾಫ್ ಬಾಲಿವುಡ್ ಡ್ಯಾನ್ಸಿಂಗ್ ಸ್ಟಾರ್ ಹೃತಿಕ್ ರೋಷನ್ ಜೊತೆ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ವೈರಲ್ ಆಗಿತ್ತು. ನಂತರ ಆ ಚಿತ್ರ ಟೇಕ್ ಆನ್ ಆಗಿ ಚಿತ್ರೀಕರಣ ಕೂಡ ಆರಂಭವಾಗಿತ್ತು.

  ಇದೀಗ, ಟೈಗರ್ ಶ್ರಾಫ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ಅಭಿನಯದ 'ವಾರ್' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ವಾರ್ ಟ್ರೈಲರ್ ನೋಡಿದ ಬಾಲಿವುಡ್ ಮಂದಿ, ವಾಹ್ ಎಂದು ಅಚ್ಚರಿಯಿಂದ ನೋಡುತ್ತಿದ್ದಾರೆ.

  ಇಬ್ಬರು ಆಕ್ಷನ್ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಮಿಂಚಿರುವುದು ಸಿನಿಪ್ರೇಕ್ಷಕರಿಗೆ ಫುಲ್ ಮೀಲ್ಸ್ ಎಂಬ ಮಾತುಗಳು ಕೇಳಿಬರುತ್ತಿದೆ. ಅದಕ್ಕೆ ತಕ್ಕಂತೆ ವಾರ್ ಟ್ರೈಲರ್ ಬಂದಿದ್ದು, ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ಈಗ ಡಬಲ್ ಆಗಿದೆ. ಕಂಪ್ಲೀಟ್ ಆಕ್ಷನ್ ಪ್ಯಾಕೇಜ್ ಇದಾಗಿದ್ದು, ಟ್ರೈಲರ್ ನಿಂದಲೇ ಸಖತ್ ಕಿಕ್ ಕೊಡ್ತಿದೆ.

  'ಟೈಗರ್ ಶ್ರಾಫ್'ಗೆ ಜಬರ್ ದಸ್ತ್ ಬಿರುದು ನೀಡಿದ ಹೃತಿಕ್-ಅಕ್ಷಯ್ 'ಟೈಗರ್ ಶ್ರಾಫ್'ಗೆ ಜಬರ್ ದಸ್ತ್ ಬಿರುದು ನೀಡಿದ ಹೃತಿಕ್-ಅಕ್ಷಯ್

  ಈಗ ವಿಷ್ಯ ಏನಪ್ಪಾ ಅಂದ್ರೆ, ವಾರ್ ಚಿತ್ರದ ಟ್ರೈಲರ್ ನೋಡಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ಒಂದೇ ಪದದಲ್ಲಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ವಾರ್ ಟ್ರೈಲರ್ ಶೇರ್ ಮಾಡಿರುವ ಅರ್ಜುನ್ ಕಪೂರ್ F**K ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  ಹೃತಿಕ್ vs ಟೈಗರ್ : ಏನಿದು ಹೊಸ ಫೈಟ್.?ಹೃತಿಕ್ vs ಟೈಗರ್ : ಏನಿದು ಹೊಸ ಫೈಟ್.?

  ಅರ್ಜುನ್ ಕಪೂರ್ F**K ಎಂದು ಹಾಕಿದ್ದಾರೆ ಎಂದಾಕ್ಷಣ, ಸಿನಿಮಾ ಬಗ್ಗೆ ಅಥವಾ ಸ್ಟಾರ್ ನಟರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಅರ್ಥವಲ್ಲ. ತುಂಬಾ ಚೆನ್ನಾಗಿದೆ ಅಥವಾ ಚಿಂದಿ ಆಗಿದೆ ಎಂಬುದನ್ನ ಹೀಗೂ ವ್ಯಕ್ತಪಡಿಸಿರಬಹುದು. ಅಥವಾ Flak, folk, fork, fink ಈ ರೀತಿ ಎಷ್ಟೊಂದು ಅರ್ಥಗಳಿವೆ. ಹೀಗೆ ಯಾವುದು ಒಂದು ಅರ್ಥದಲ್ಲಿ ಈ ರೀತಿ ಹಾಕಿರಬಹುದು.

  Arjun kapoor Comment on war trailer

  ಅಂದ್ಹಾಗೆ, ಈ ಹಿಂದೆ ಹೃತಿಕ್ ರೋಷನ್ ಜೊತೆ ಬ್ಯಾಂಗ್ ಬ್ಯಾಂಗ್ ಸಿನಿಮಾ ಮಾಡಿದ್ದ ಸಿದ್ಧಾರ್ಥ್ ಆನಂದ್ ವಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯಶ್ ರಾಜ್ ಬ್ಯಾನರ್ ನಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ. ಇನ್ನುಳಿದಂತೆ ಇಬ್ಬರು ನಾಯಕರ ಜೊತೆ ವಾಣಿ ಕಪೂರ್ ನಾಯಕಿಯಾಗಿ ನಟಿಸಿದ್ದು, ಅಕ್ಟೋಬರ್ 2 ರಂದು ಸಿನಿಮಾ ತೆರೆಗೆ ಬರ್ತಿದೆ.

  English summary
  After watching war movie trailer bollywood actor arjun kapoor commented on this. war is starring of tiger shroff and hrithik roshan in lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X