For Quick Alerts
  ALLOW NOTIFICATIONS  
  For Daily Alerts

  ಮಲೈಕಾ ಅರೋರಾ ಜೊತೆ ಮದುವೆ ಬಗ್ಗೆ ನಟ ಅರ್ಜುನ್ ಕಪೂರ್ ಪ್ರತಿಕ್ರಿಯೆ

  |

  ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿಲ್ಲ. ಸುಮಾರು ಎರಡು ವರ್ಷಗಳಿಂದ ಜೊತೆಯಲ್ಲಿರುವ ಈ ಜೋಡಿ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಟ ಅರ್ಜುನ್ ಕಪೂರ್ ತನಗಿಂತ 12 ವರ್ಷ ದೊಡ್ಡವರಾಗಿರುವ ನಟಿ ಮಲೈಕಾ ಅವರನ್ನು ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  ತೆಲುಗು ಟಿವಿ ಲೋಕದಲ್ಲಿ ದಾಖಲೆ ಬರೆದಿದ್ಯಂತೆ KGF | TRP | KGF1 | Filmibeat Kannada

  ನಟಿ ಮಲೈಕಾ, ಸಲ್ಮಾನ್ ಖಾನ್ ಸಹೋದರ ಅರ್ಬಾಸ್ ಖಾನ್ ಗೆ ವಿಚ್ಛೇದನ ನೀಡಿದ ನಂತರ ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರು ಸದಾ ಜೊತೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತೆ. ಇಬ್ಬರ ನಡುವೆ ಡೇಟಿಂಗ್ ವಿಚಾರ ಬಹಿರಂಗವಾಗುತ್ತಿದ್ದಂತೆ ಮದುವೆ ಯಾವಾಗ ಆಗುತ್ತೀರಿ ಎನ್ನುವ ಪ್ರಶ್ನೆ ಇಬ್ಬರಿಗೆ ಎದುರಾಗುತ್ತಲೆ ಇದೆ.

  ತನಗಿಂತಲೂ 12 ವರ್ಷ ಹಿರಿಯ ಪ್ರೇಯಸಿ ಜೊತೆ ಮದುವೆಗೆ ಅರ್ಜುನ್ ಕಪೂರ್ ಸಜ್ಜು!ತನಗಿಂತಲೂ 12 ವರ್ಷ ಹಿರಿಯ ಪ್ರೇಯಸಿ ಜೊತೆ ಮದುವೆಗೆ ಅರ್ಜುನ್ ಕಪೂರ್ ಸಜ್ಜು!

  ಮದುವೆ ಬಗ್ಗೆ ನಟ ಅರ್ಜುನ್ ಕಪೂರ್ ಮಾತನಾಡಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಅರ್ಜುನ್ ಕಪೂರ್ ಮದುವೆ ಆಗುವುದಿಲ್ಲ ಎಂದು ಹೇಳಿದ್ದಾರೆ. "ಮದುವೆ ಆದರೆ ಕೂದಲು ಉದುರುತ್ತಂತೆ. ತಲೆ ಬೋಳಾಗುತ್ತೆ. ಬೋಳಾಗುವುದಾದರೆ ನನ್ಯಾಕೆ ಮದುವೆ ಆಗಲಿ" ಎಂದು ನಗುತ್ತ ಹಾಸ್ಯ ಮಾಡಿದ್ದಾರೆ

  ನಂತರ ಮದುವೆ ಗಂಭೀರವಾಗಿ ಮಾತನಾಡಿದ ಅರ್ಜುನ್ ನಾನು ಸದ್ಯದಲ್ಲೇ ಮದುವೆ ಆಗುವುದಿಲ್ಲ. ನಾನು ಯಾರಿಂದ ಏನನ್ನು ಮರೆಮಾಚಲ್ಲ. ಸದ್ಯ ನನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನ ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತಿದೆ. ಅದು ಹಾಗೆ ಇರಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.

  ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಅರ್ಜುನ್ ಕಪೂರ್ ಸದ್ಯದಲ್ಲಿ ಮದುವೆ ಪ್ಲಾನ್ ಇಲ್ಲ ಹರಿದಾಡುತ್ತಿದ್ದ ಸುದ್ದಿಗೆ ತೆರೆ ಎಳೆದಿದ್ದಾರೆ. ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 2017ರಲ್ಲಿ ಬೇರೆ ಬೇರೆ ಆಗಿದ್ದಾರೆ. 1998ರಲ್ಲಿ ಮದುವೆಯಾಗಿದ್ದ ಈ ಜೋಡಿ 19 ವರ್ಷಗಳ ದಾಂಪತ್ಯ ಜೀವನ ಕಡಿದುಕೊಂಡು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಈಗ ಮಲೈಕಾ ಹೆಸರು ಅರ್ಜುನ್ ಕಪೂರ್ ಜೊತೆ ಕೇಳಿ ಬರುತ್ತಿದೆ.

  English summary
  Bollywood Actor Arjun Kapoor opens up about his Marriage with Malaika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X