»   » 5 ವರ್ಷದ ನಂತರ ಮತ್ತೆ ಒಂದಾಗ್ತಿದ್ದಾರೆ ಅರ್ಜುನ್-ಪರಿಣಿತಿ

5 ವರ್ಷದ ನಂತರ ಮತ್ತೆ ಒಂದಾಗ್ತಿದ್ದಾರೆ ಅರ್ಜುನ್-ಪರಿಣಿತಿ

Posted By:
Subscribe to Filmibeat Kannada

ಯಾವುದಾದರೂ ಒಂದು ಸಿನಿಮಾ ಕಥೆ, ಚಿತ್ರದಲ್ಲಿನ ನಟ-ನಟಿಯ ಕಾಂಬಿನೇಷನ್ ದೃಷ್ಟಿಯಿಂದ ಇಷ್ಟವಾಗಿ, ಚಿತ್ರವು ಸೂಪರ್ ಹಿಟ್ ಆದರೆ, ಅದೇ ತಾರೆಯರ ಕಾಂಬಿನೇಷನ್ ಚಿತ್ರವನ್ನು ತೆರೆ ಮೇಲೆ ನೋಡಲು ಸಿನಿ ಪ್ರಿಯರು ಬಯಸುತ್ತಾರೆ. ಅಂತಹ ತಾರೆಯರಲ್ಲಿ ಅರ್ಜುನ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಕಾಂಬಿನೇಷನ್ ಅಂದ್ರೆ ಬಾಲಿವುಡ್ ಸಿನಿಪ್ರೇಮಿಗಳಿಗೆ ಅಚ್ಚುಮೆಚ್ಚು. 2012 ರಲ್ಲಿ ತೆರೆಕಂಡ 'Ishaqzaad' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ ಈಗ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

5 ವರ್ಷಗಳ ನಂತರ ಅರ್ಜುನ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಮತ್ತೆ ಒಂದಾಗುತ್ತಿರುವ ಆ ಚಿತ್ರ ಯಾವುದು ಎಂಬುದರ ಡೀಟೈಲ್ಸ್ ಇಲ್ಲಿದೆ ನೋಡಿ..

ಸಿನಿಮಾ ಹೆಸರು

ಅರ್ಜುನ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಮತ್ತೆ ಜೊತೆಯಾಗಿ ನಟಿಸಲಿರುವ ಚಿತ್ರದ ಹೆಸರು 'ಸಂದೀಪ್ ಔರ್ ಪಿಂಕಿ ಫರಾರ್'.

ದಿಬಾಕರ್ ಬ್ಯಾನರ್ಜಿ ನಿರ್ದೇಶನ

'ಸಂದೀಪ್ ಔರ್ ಪಿಂಕಿ ಫರಾರ್' ಚಿತ್ರವನ್ನು ಖ್ಯಾತ ನಿರ್ದೇಶಕ ದಿಬಾಕರ್ ಬ್ಯಾನರ್ಜಿ ನಿರ್ದೇಶನ ಮಾಡಲಿದ್ದು, ಈ ಸಿನಿಮಾ ಒಂದು ಡ್ರಾಮಾಟಿಕ್ ಥ್ರಿಲ್ಲರ್ ಚಿತ್ರವಾಗಿರಲಿದೆ.

'ಸಂದೀಪ್ ಔರ್ ಪಿಂಕಿ ಫರಾರ್' ನಲ್ಲಿ ಮತ್ತೊಂದು ಜೋಡಿ

ಈ ಚಿತ್ರದಲ್ಲಿ ಅರ್ಜುನ್ ಮಾತ್ರವಲ್ಲದೇ ಮತ್ತಿಬ್ಬರು ಹೀರೋಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇನ್ನು ಈ ಚಿತ್ರದ ಬಗ್ಗೆ ನಿರ್ದೇಶಕ ದಿಬಾಕರ್ ರವರು ಮಾಧ್ಯಮಗಳೊಂದಿಗೆ ಮಾತನಾಡಿ, 'ಇದು ನನ್ನ ಮೊದಲ ಚಿತ್ರದಂತೆ ಅನುಭವ ಆಗುತ್ತಿದೆ. ಮತ್ತೊಮ್ಮೆ ನಾನು ಈ ಚಿತ್ರದ ಬಗ್ಗೆ ಹೆಚ್ಚು ತಿಳಿದುಕೊಂಡು ಜೊತೆಯಲ್ಲಿ ಇರದ ಪುರುಷ ಮತ್ತು ಮಹಿಳೆ ಬಗೆಗಿನ ಕಥೆಯನ್ನು ಹೇಳಬೇಕಿದೆ. ಆದರೆ ಈ ಚಿತ್ರದಲ್ಲಿ ಇಬ್ಬರು ಸಹ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯವಿಲ್ಲ' ಎಂದು ಚಿತ್ರಕಥೆ ಕುರಿತು ಹೇಳಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣ

ಪರಿಣಿತಿ ಚೋಪ್ರಾ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳುವ ಖುಷಿಯಿಂದ ಅರ್ಜುನ್ ಕಪೂರ್, 'ಯಶ್ ರಾಜ್ ಫಿಲ್ಮ್ಸ್ ಅಡಿಯಲ್ಲಿ ಆದಿತ್ಯ ಚೋಪ್ರಾ ಮತ್ತು ಪರಿಣಿತಿ ಚೋಪ್ರಾ ಅವರೊಂದಿಗೆ ಮತ್ತೆ ವರ್ಕ್ ಮಾಡುವುದು ನನಗೆ ಮನೆಗೆ ಹಿಂದಿರುಗಿದಾಗ ಆಗುವಂತಹ ಅದ್ಭುತ ಫೀಲ್ ಆಗುತ್ತಿದೆ. ಪರಿಣಿತಿ ನನ್ನ ಅತ್ಯಂತ ಅದ್ಭುತ ಮತ್ತು ಮೊದಲ ಕೋಸ್ಟಾರ್' ಎಂದಿದ್ದಾರೆ.

ಪರಿಣಿತಿ ಕನಸು ನನಸು

ಇನ್ನು ನಟಿ ಪರಿಣಿತಿ ಚೋಪ್ರಾ ಸಹ " 'Ishaqzaade' ಚಿತ್ರದ ನಂತರ ಅರ್ಜುನ್ ಮತ್ತು ದಿಬಾಕರ್ ಅವರ ಜೊತೆ ಮತ್ತೆ ಸಿನಿಮಾ ಮಾಡುವುದು ನನ್ನ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ಇವರ ಎಲ್ಲಾ ಚಿತ್ರಗಳು ವಿಭಿನ್ನವಾಗಿರುತ್ತವೆ ಮತ್ತು ಉತ್ತಮ ಪರಿಣಾಮ ಬೀರುತ್ತವೆ' ಎಂದು 'ಸಂದೀಪ್ ಔರ್ ಪಿಂಕಿ ಫರಾರ್' ಚಿತ್ರದಲ್ಲಿ ನಟಿಸುವ ಖುಷಿಯನ್ನು ಡಿಎನ್‌ಎ ಜೊತೆ ಹಂಚಿಕೊಂಡಿದ್ದಾರೆ.

English summary
Bollywood Actor Arjun Kapoor and Actress Parineeti Chopra to reunite with Dibakar Banerjee’s next titled 'Sandeep Aur Pinky Faraar'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada