»   » ತಾಯಿಯನ್ನ ಕಳೆದುಕೊಂಡ ಬೋನಿ ಮೊದಲ ಪತ್ನಿಯ ಪುತ್ರ ಅಂದು ಆಡಿದ್ದ ಮಾತೇನು.?

ತಾಯಿಯನ್ನ ಕಳೆದುಕೊಂಡ ಬೋನಿ ಮೊದಲ ಪತ್ನಿಯ ಪುತ್ರ ಅಂದು ಆಡಿದ್ದ ಮಾತೇನು.?

Posted By:
Subscribe to Filmibeat Kannada

ನಟಿ ಶ್ರೀದೇವಿಯಿಂದಾಗಿ ತನ್ನ ತಾಯಿ ಮೋನಾಗೆ ಮೋಸ ಆಯ್ತು ಎಂಬ ಕೊರಗು, ನೋವು, ಸಂಕಟ ಇದ್ದರೂ... ಮನಸ್ತಾಪವನ್ನ ಮರೆತು, ಭಿನ್ನಾಭಿಪ್ರಾಯವನ್ನ ಬದಿಗಿಟ್ಟು ನಟ ಅರ್ಜುನ್ ಕಪೂರ್, ಶ್ರೀದೇವಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.

ಶ್ರೀದೇವಿಯಿಂದಾಗಿ ತನ್ನ ತಾಯಿಗೆ ಬೋನಿ ಕಪೂರ್ ವಿಚ್ಛೇದನ ನೀಡಿದ್ದರೂ, ಆ ದ್ವೇಷವನ್ನ ಸಾಧಿಸದೆ ಶ್ರೀದೇವಿ ಪಾರ್ಥೀವ ಶರೀರವನ್ನ ಮುಂಬೈಗೆ ತರಲು ದುಬೈಗೆ ಹಾರಿದ್ದರು ಅರ್ಜುನ್ ಕಪೂರ್.

ಬೋನಿ ಕಪೂರ್ ಮೊದಲ ಪತ್ನಿ ಮೋನಾ ಕಪೂರ್ ತೀರಿಕೊಂಡಾಗ, ಶ್ರೀದೇವಿ ಆಗಲಿ, ಆಕೆಯ ಮಕ್ಕಳಾದ ಜಾಹ್ನವಿ, ಖುಷಿ ಆಗಲಿ ಬರಲಿಲ್ಲ. ಹೀಗಿದ್ದರೂ, ಶ್ರೀದೇವಿ ಮೃತಪಟ್ಟಾಗ ಜಾಹ್ನವಿ ಹಾಗೂ ಖುಷಿ ಜೊತೆಯಲ್ಲಿದ್ದು, ಇಬ್ಬರಿಗೂ ಆತ್ಮ ಸ್ಥೈರ್ಯ ತುಂಬಿದ್ದು ಮೋನಾ ಪುತ್ರಿ ಅನ್ಷುಲಾ ಕಪೂರ್.

ಶ್ರೀದೇವಿ ಆಗಮನದಿಂದ ಬೋನಿ ಕಪೂರ್ ಕುಟುಂಬದಲ್ಲಿ ಒಡಕು ಮೂಡಿತ್ತು. ಈಗ ಅದೇ ಶ್ರೀದೇವಿ ನಿಧನದಿಂದ ಬೋನಿ ಕಪೂರ್ ಮಕ್ಕಳೆಲ್ಲ ಒಂದಾಗಿದ್ದಾರೆ.

ಶ್ರೀದೇವಿಯ ಪ್ರೀತಿಯ ಬಲೆಯಲ್ಲಿ ಸಿಲುಕಿ, ಮನೆಯಿಂದ ಬೋನಿ ಕಪೂರ್ ಹೊರ ನಡೆದ ಮೇಲೆ ಮಕ್ಕಳಾದ ಅರ್ಜುನ್ ಹಾಗೂ ಅನ್ಷುಲಾ ಬೆನ್ನೆಲುಬಾಗಿ ನಿಂತಿದ್ದು ತಾಯಿ ಮೋನಾ ಕಪೂರ್ ಮಾತ್ರ. ಹೀಗಾಗಿ, ತಾಯಿ ಮೋನಾ ಕಪೂರ್ ಮೇಲೆ ಅರ್ಜುನ್ ಕಪೂರ್ ಗೆ ಬೆಟ್ಟದಷ್ಟು ಪ್ರೀತಿ.

ಹೀಗಿರುವಾಗಲೇ, 2012, ಮಾರ್ಚ್ 25 ರಂದು ಮೋನಾ ಕಪೂರ್ ಇಹಲೋಕ ತ್ಯಜಿಸಿದರು. ಹೀರೋ ಆಗಿ ಅರ್ಜುನ್ ಕಪೂರ್ ಬೆಳ್ಳಿತೆರೆ ಮೇಲೆ ಮಿಂಚುವ ಕೆಲವೇ ಕೆಲವು ದಿನಗಳ ಮುನ್ನ ಮೋನಾ ಕಪೂರ್ ವಿಧಿವಶರಾದರು. ಅರ್ಜುನ್ ಕಪೂರ್ ಅಭಿನಯದ ಚೊಚ್ಚಲ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ತಾಯಿಯನ್ನ ನೆನೆದು ಪತ್ರಿಕಾ ಮಿತ್ರರೊಂದಿಗೆ ತಮ್ಮ ಮನದಾಳವನ್ನ ಅರ್ಜುನ್ ಕಪೂರ್ ಹಂಚಿಕೊಂಡಿದ್ದರು. ಅದರ ಅನುವಾದ ಇಲ್ಲಿದೆ ಓದಿರಿ...

ನನ್ನ ಯಶಸ್ಸು ನೋಡಲು ತಾಯಿ ಇಲ್ಲ

''ನನ್ನ ಕಾಲ ಮೇಲೆ ನಾನು ಸ್ವತಂತ್ರವಾಗಿ ನಿಂತಿರುವುದನ್ನ ನೋಡಲು ನನ್ನ ತಾಯಿ (ಮೋನಾ ಕಪೂರ್) ಇಲ್ಲ ಅಂತ ನಂಬುವುದೇ ನನಗೆ ಅಸಾಧ್ಯವಾಗಿದೆ. ನಾನು ಹೇಗಿರಬೇಕು ಎಂದು ಅಮ್ಮ ಬಯಸಿದ್ದರೋ, ಹಾಗಾಗಿದ್ದೇನೆ. ಅದ್ರೆ, ಅದನ್ನ ಕಣ್ತುಂಬಿಕೊಳ್ಳಲು ಅವರಿಲ್ಲ'' - ಅರ್ಜುನ್ ಕಪೂರ್, ನಟ, ಬೋನಿ ಕಪೂರ್ ಮೊದಲ ಪತ್ನಿ ಮೋನಾ ಪುತ್ರ

ಶ್ರೀದೇವಿಯನ್ನ ಬೋನಿ ಕೈಹಿಡಿದಾಗ, ಮೊದಲ ಪತ್ನಿ ಮೋನಾಗಾದ ಆಘಾತ ಅಷ್ಟಿಷ್ಟಲ್ಲ.!

ತಾಯಿ ಇಲ್ಲದೆ ಜೀವನ ನಡೆಸುತ್ತಿರುವೆ..

''ನಮಗಾಗಿ ನನ್ನ ತಾಯಿ ತುಂಬಾ ತ್ಯಾಗ ಮಾಡಿದ್ದರು. ನನ್ನ ಬೆನ್ನೆಲುಬಾಗಿದ್ದರು. ಆದ್ರೀಗ, ಬೆನ್ನೆಲುಬಿಲ್ಲದೇ ನಾನು ಜೀವನ ನಡೆಸಬೇಕಾಗಿದೆ. ನನಗೀಗ ನನ್ನ ಸಹೋದರಿಯೇ (ಅನ್ಷುಲಾ) ಎಲ್ಲ'' - ಅರ್ಜುನ್ ಕಪೂರ್, ನಟ, ಬೋನಿ ಕಪೂರ್ ಮೊದಲ ಪತ್ನಿ ಮೋನಾ ಪುತ್ರ

ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

ತಂಗಿಗೆ ಹೆಚ್ಚು ಪ್ರೀತಿ ಸಿಗಲಿಲ್ಲ

''ನನಗಿಂತ ಹೆಚ್ಚು ಸಂಕಟ ಪಟ್ಟಿರುವುದು ನನ್ನ ತಂಗಿ ಅನ್ಷುಲಾ. ತಂದೆ ಬೋನಿ ಕಪೂರ್ ಜೊತೆಗೆ ನಾನು 11 ವರ್ಷ, ತಾಯಿ ಜೊತೆ 25 ವರ್ಷ ಕಳೆದಿದ್ದೇನೆ. ನನಗಿಂತ ಅನ್ಷುಲಾ ಐದು ವರ್ಷ ಚಿಕ್ಕವಳು. ತಂದೆ-ತಾಯಿ ಜೊತೆ ಆಕೆ ಕಳೆದ ಕ್ಷಣಗಳು ಕಡಿಮೆ. ಆದರೂ, ಅನ್ಷುಲಾ ನನಗಿಂತ ಹೆಚ್ಚು ಮೆಚ್ಯೂರ್ಡ್ ಹಾಗೂ ವಿದ್ಯಾವಂತೆ'' - ಅರ್ಜುನ್ ಕಪೂರ್, ನಟ, ಬೋನಿ ಕಪೂರ್ ಮೊದಲ ಪತ್ನಿ ಮೋನಾ ಪುತ್ರ

ಅಮ್ಮ ತೀರಿಕೊಂಡ ಮೇಲೆ...

''ಅಮ್ಮ ತೀರಿಕೊಂಡಾಗ, ಅನ್ಷುಲಾ ಜವಾಬ್ದಾರಿ ನನ್ನ ಮೇಲಿತ್ತು. ಆದ್ರೆ, ಯು.ಎಸ್ ನಲ್ಲಿ ಪದವಿ ಮುಗಿಸಿಕೊಂಡು ಬಂದ ಅನ್ಷುಲಾ ನನ್ನೆಲ್ಲ ಜವಾಬ್ದಾರಿಗಳನ್ನ ಅವಳೇ ನಿಭಾಯಿಸಿದಳು. ಅಮೇರಿಕಾದಲ್ಲೇ ಒಳ್ಳೆ ಕೆಲಸ ಸಿಕ್ಕಿದ್ದರೂ, ಅದನ್ನ ಬಿಟ್ಟು ನನಗಾಗಿ ಭಾರತಕ್ಕೆ ಬಂದಳು. ನನಗೆ ನನ್ನ ತಂಗಿಯೇ ಶಕ್ತಿ. ತಂದೆ-ತಾಯಿ ಇಲ್ಲದಿರುವಾಗ, ಆ ಸ್ಥಾನದಲ್ಲಿ ನಿಂತು ನನ್ನನ್ನ ನೋಡಿಕೊಳ್ಳುತ್ತಿರುವುದು ಆಕೆಯೇ. ಹಾಗ್ನೋಡಿದ್ರೆ, ನಾನು ನನ್ನ ತಂಗಿಯನ್ನ ಮಗುವಿನ ಹಾಗೆ ನೋಡಿಕೊಳ್ಳಬೇಕಿತ್ತು. ಆದ್ರೆ, ಅವಳು ನನ್ನನ್ನ ಹಾಗೆ ನೋಡಿಕೊಳ್ಳುತ್ತಿದ್ದಾಳೆ'' - ಅರ್ಜುನ್ ಕಪೂರ್, ನಟ, ಬೋನಿ ಕಪೂರ್ ಮೊದಲ ಪತ್ನಿ ಮೋನಾ ಪುತ್ರ

ಎರಡನೇ ಮದುವೆ ಆದಾಗ ಕೋಪ, ಸಿಟ್ಟು ಬಂದಿದ್ದು ನಿಜ

''ನನ್ನ ತಂದೆ ಎರಡನೇ ಮದುವೆ ಆದಾಗ, ನನಗೆ ಕೋಪ, ಸಿಟ್ಟು ಬಂದಿದ್ದು ನಿಜ. ಆದ್ರೆ, ಕಾಲ ಕ್ರಮೇಣ ನನಗೆ ಎಲ್ಲವೂ ಅರ್ಥ ಆಯ್ತು. ನನ್ನ ತಾಯಿ ನನ್ನನ್ನ ಚೆನ್ನಾಗಿ ಬೆಳೆಸಿದರು. ಅಪ್ಪನ ಬಗ್ಗೆ ಅಮ್ಮ ಎಂದೂ ಕೆಟ್ಟದಾಗಿ ಮಾತಾಡಿದವರಲ್ಲ'' - ಅರ್ಜುನ್ ಕಪೂರ್, ನಟ, ಬೋನಿ ಕಪೂರ್ ಮೊದಲ ಪತ್ನಿ ಮೋನಾ ಪುತ್ರ

ಶ್ರೀದೇವಿ ಮೇಲೆ ದ್ವೇಷ ಇಲ್ಲ

''ನನಗೆ ಶ್ರೀದೇವಿ ಮೇಲೆ ಯಾವುದೇ ದ್ವೇಷ ಇಲ್ಲ. ಅವರ ಬಗ್ಗೆ ಗೌರವ ಇದೆ. ಜಾಹ್ನವಿ ಹಾಗೂ ಖುಷಿಯನ್ನ ನಾನು ಭೇಟಿ ಮಾಡಿಲ್ಲ. ಅವರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ'' - ಅರ್ಜುನ್ ಕಪೂರ್, ನಟ, ಬೋನಿ ಕಪೂರ್ ಮೊದಲ ಪತ್ನಿ ಮೋನಾ ಪುತ್ರ

ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡ ಅರ್ಜುನ್

ಅಂದು ಶ್ರೀದೇವಿ ಮೇಲೆ ಗೌರವ ಇದೆ ಎಂದಿದ್ದ ಅರ್ಜುನ್ ಕಪೂರ್, ಇಂದು ಅದೇ ಗೌರವದಿಂದಲೇ ಶ್ರೀದೇವಿ ಅಂತಿಮ ಸಂಸ್ಕಾರದಲ್ಲಿ ಅರ್ಜುನ್ ಕಪೂರ್ ಹಾಗೂ ಅನ್ಷುಲಾ ಕಪೂರ್ ಪಾಲ್ಗೊಂಡಿದ್ದರು. ದುಃಖತಪ್ತರಾಗಿದ್ದ ತಂದೆಗೆ ಅರ್ಜುನ್ ಮಾನಸಿಕ ಸ್ಥೈರ್ಯ ತುಂಬಿದರು.

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ಪತ್ನಿಯನ್ನ ಕಳೆದುಕೊಂಡ ದುಃಖ ಪತ್ರ ಮುಖೇನ ಹೊರಹಾಕಿದ ಬೋನಿ ಕಪೂರ್

ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಲು ಮೊದಲ ಪತಿ(?) ಬರಲೇ ಇಲ್ಲ!

ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

English summary
Bollywood Actor Arjun Kapoor spoke about his struggling life after his mother Mona Kapoor's death in an interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada