twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಕಂಗನಾ ರಣಾವತ್ ಬಂಧನಕ್ಕೆ ಒತ್ತಾಯ: ಟ್ವಿಟ್ಟರ್ ನಲ್ಲಿ ಟ್ರೆಂಡ್

    |

    ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದೆ. ಮೊನ್ನೆ ಮೊನ್ನೆಯಷ್ಟೆ ಸುಶಾಂತ್ ಸಿಂಗ್ ತಂದೆ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೆ ಈಗ ನಟಿ ಕಂಗನಾ ರಣಾವತ್ ಅನ್ನು ಬಂಧಿಸಿ ಎಂದು ಒತ್ತಾಯ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ #arrestkanganaranaut ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

    ಸುಶಾಂತ್ ಸಿಂಗ್ ಸಾವಿನ ಬಳಿಕ ಕಂಗನಾ ಹೆಚ್ಚು ಸುದ್ದಿಯಲ್ಲಿದ್ದಾರೆ. ದಿನಕ್ಕೊಬ್ಬರ ಮೇಲೆ ಆರೋಪ ಮಾಡುತ್ತ ಬಾಲಿವುಡ್ ನ ಕರಾಳಮುಖವನ್ನು ಬಯಲಿಗೆಳೆಯುತ್ತಿದ್ದಾರೆ. ಕಂಗನಾಗೆ ಸಾಕಷ್ಟು ಸತ್ಯ ಗೊತ್ತಿದೆ, ಅವರನ್ನು ಅರೆಸ್ಟ್ ಮಾಡಿದರೆ ಎಲ್ಲಾ ಸತ್ಯಗಳು ಹೊರಬರಲಿವೆ ಎನ್ನುವ ಕಾರಣಕ್ಕೆ ಕಂಗನಾ ಅವರನ್ನು ಅರೆಸ್ಟ್ ಮಾಡಿ ಎಂದು ಸ್ವತಹ ಕಂಗನಾ ಟೀಂ ಒತ್ತಾಯ ಮಾಡುತ್ತಿದೆ.

    ಸುಶಾಂತ್ ಸಿಂಗ್ ಜೊತೆ ಸಿನಿಮಾ ಮಾಡದಿರಲು ಕಾರಣ ಹೃತಿಕ್ ರೋಷನ್: ಕಂಗನಾ ರಣಾವತ್ಸುಶಾಂತ್ ಸಿಂಗ್ ಜೊತೆ ಸಿನಿಮಾ ಮಾಡದಿರಲು ಕಾರಣ ಹೃತಿಕ್ ರೋಷನ್: ಕಂಗನಾ ರಣಾವತ್

    "ಕಂಗನಾ ಅವರನ್ನು ಬಂಧಿಸಿ, ನ್ಯಾಯಾಲಯದಲ್ಲಿ ವಿಚಾರಣೆ ಮಾಡಿ, ಸತ್ಯ ಹೊರ ಬರಬೇಕು. ಕಂಗನಾ ಗೆಲ್ಲಬೇಕು. ಒಂದು ವೇಳೆ ಕಂಗನಾ ಹೇಳುವುದರಲ್ಲಿ ತಪ್ಪಿದ್ದರೆ ಶಿಕ್ಷೆಯಾಗಬೇಕು, ಕಂಗನಾ ಶಾಶ್ವತವಾಗಿ ಚಿತ್ರರಂಗ ತೊರೆಯಲು ಸಿದ್ಧ. ನೀವು ತಯಾರಿದ್ದೀರಾ" ಎಂದು ಟ್ವೀಟ್ ಮಾಡಿದ್ದಾರೆ.

    ArrestKanganaRanaut Trend On Twitter

    ಕಂಗನಾ ರಣಾವತ್ ಟೀಂ ಎನ್ನುವ ಖಾತೆಯಿಂದ ಈ ಟ್ವೀಟ್ ಬಂದಿದ್ದು, ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ. ಹ್ಯಾಶ್ ಟ್ಯಾಗ್ ಬಳಸಿ ಕಂಗನಾ ಬಂಧನಕ್ಕೆ ಒತ್ತಾಯ ಮಾಡುತ್ತಿದ್ದಾರೆ.

    "ಕಂಗನಾರ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ಧ ಹಿಂದಿನಿಂದ ಪಿತೂರಿ ಮಾಡುವ ಬದಲು, ಹಾಲು ಕುಡಿಯುವ ಎಲ್ಲಾ ಚಿಂಗು ಮಿಂಗು ಗ್ಯಾಂಗ್ ಅರೆಸ್ಟ್ ಕಂಗನಾಗೆ ಧೈರ್ಯ ತುಂಬಬೇಕು. ಹೊರಗಿನವರ ಕಿರುಕುಳಕ್ಕೆ ಕನಿಷ್ಠ ಕಾರಣವನ್ನು ನಾವು ತಿಳಿಯುತ್ತೇವೆ ದಯವಿಟ್ಟು ಕಂಗನಾರನ್ನು ಅರೆಸ್ಟ್ ಮಾಡಿ" ಎಂದು ಒತ್ತಾಯಿಸುತ್ತಿದ್ದಾರೆ.

    English summary
    Arrest Kangana Ranaut trend on Twitter. Team Kanagana says, Arrest her and truth must come out. if she is wrong then she must leave the film industry forever.
    Thursday, August 6, 2020, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X