For Quick Alerts
  ALLOW NOTIFICATIONS  
  For Daily Alerts

  ಆರ್ಯನ್ ಖಾನ್ ಬಂಧನಕ್ಕೂ ನನಗೂ ಸಂಬಂಧವಿಲ್ಲ-ಅಜಯ್ ದೇವಗನ್

  |

  ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್‌ನಲ್ಲಿ ಬಂಧಿತನಾಗಿದ್ದಾರೆ. ಈ ಘಟನೆಯಿಂದಾಗಿ ಶಾರುಖ್ ಕುಟುಂಬವೇ ದುಖಃ ತಪ್ತವಾಗಿದ್ದು, ಎಲ್ಲಾ ರೀತಿಯ ಸಂಭ್ರಮಾಚರಣೆಗಳು, ಸಿನಿಮಾ ಶೂಟಿಂಗ್, ಜಾಹಿರಾತುಗಳ ಶೂಟಿಂಗ್‌ಗೆ ಶಾರುಖ್ ಗೈರಾಗುತ್ತಿದ್ದಾರೆ. ಮಗ ಹೊರಗೆ ಬರುವವರೆಗೂ ಮನೆಯಲ್ಲೂ ಮೌನ ಆವರಿಸಿದ್ದು, ಏನು ಮಾಡಬೇಕು ಎಂಬುದು ಗೊತ್ತಾಗದೇ ಪರದಾಡುತ್ತಿದ್ದಾರೆ. ಅಲ್ಲದೇ ಶಾರುಖ್ ಕುಟುಂಬದ ಈ ಪರಿಸ್ಥಿತಿ ನೋಡಿ ಬಾಲಿವುಡ್‌ನ ಹಲವು ಸ್ಟಾರ್ ಸೆಲೆಬ್ರೆಟಿಗಳು ಬೆಂಬಲ ನೀಡುತ್ತಿದ್ದು, ಶಾರುಖ್ ಪರವಾಗಿ ನಿಂತಿದ್ದಾರೆ. ಆದರೆ ನಟ ಅಜಯ್ ದೇವಗನ್ ಮಾತು ಈಗ ಚರ್ಚೆಗೆ ಕಾರಣವಾಗಿದೆ.

  ಹೌದು, ಶಾರುಖ್ ಮತ್ತು ಅಜಯ್ ದೇವಗನ್‌ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರೋದು ಎಲ್ಲರಿಗೂ ಗೊತ್ತೇ ಇದೆ. ಈ ಪಾನ್ ಮಸಾಲ ಜಾಹೀರಾತಿನ ಎರಡನೇ ಆವೃತ್ತಿಯ ಚಿತ್ರೀಕರಣಕ್ಕೆ ದಿನಾಂಕ ನಿಗಧಿ ಮಾಡಲಾಗಿತ್ತು. ಇದಕ್ಕೂ ಕೂಡ ಶಾರುಖ್ ಖಾನ್ ಗೈರಾಗಿದ್ದು, ಅಜಯ್ ದೇವಗನ್ ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

  ಅಲ್ಲದೇ ಶೂಟಿಂಗ್ ದಿನವನ್ನು ನಾನು ಮುಂದಕ್ಕೆ ಹಾಕಲು ಇಷ್ಟ ಪಡೋದಿಲ್ಲ ಎಂದು ಅಜಯ್ ದೇವಗನ್ ನಿರ್ಮಾಪಕರಿಗೆ ತಿಳಿಸಿದ್ದಾರಂತೆ. ಹಾಗೇ ಶಾರುಖ್ ಮಗನ ಸಮಸ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ, ಅದು ಶಾರುಖ್ ಖಾನ್ ಪರ್ಸನಲ್ ವಿಚಾರ. ಇದೇ ಕಾರಣಕ್ಕೆ ನನ್ನ ಶೂಟಿಂಗ್ ದಿನವನ್ನು ನಾನು ಮುಂದಕ್ಕೆ ಹಾಕಲು ಸಾಧ್ಯವಿಲ್ಲ. ನನಗೆ ಬೇರೆ ಬೇರೆ ಕೆಲಸ ಇದೆ ಎಂದಿದ್ದಾರೆ ಎಂದು ಕಮಲ್ ಆರ್ ಖಾನ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ ಇಷ್ಟೆನಾ ಬಾಲಿವುಡ್ ಮಂದಿಯ ಒಗ್ಗಟ್ಟು ಎಂದು ಪ್ರಶ್ನೆ ಮಾಡಿದ್ದಾರೆ. ಈ ಆರೋಪಕ್ಕೆ ಸದ್ಯ ಅಜಯ್ ದೇವಗನ್ ಇನ್ನೂ ಯಾವುದೇ ತರಹದ ಪ್ರತಿಕ್ರೀಯೆ ನೀಡಲು ಮುಂದಾಗಿಲ್ಲ.

  ಶಾರುಖ್ ಪುತ್ರನ ಬಂಧನಕ್ಕೆ ಈಗಾಗಲೇ ಬಾಲಿವುಡ್‌ನ ಹೃತಿಕ್ ರೋಷನ್, ಸಲ್ಮಾನ್ ಖಾನ್, ಶೇಖರ್ ಸುಮನ್, ವಿಶಾಲ್ ದದ್ಲಾನಿ, ಸ್ವರಾ ಭಾಸ್ಕರ್, ಹನ್ಸಲ್ ಮೆಹ್ತಾ,ಫರ್ಹಾ ಖಾನ್, ಸೇರಿದಂತೆ ಹಲವರು ಬೆಂಬಲಿಸಿದ್ದಾರೆ. ಅಲ್ಲದೇ ಆರ್ಯನ್ ಖಾನ್ ಬಂಧನದ ಹಿಂದೆ ದೊಡ್ಡ ಷಡ್ಯಂತ್ರವೇ ಇದೇ ಎಂದು ಆರೋಪಿಸಿದ್ದಾರೆ. ಇವರನ್ನು ಹೊರತುಪಡಿಸಿ ಸಾಕಷ್ಟು ಮಂದಿ ಆರ್ಯನ್ ಖಾನ್ ಬಗ್ಗೆ ಪ್ರತಿಕ್ರೀಯೆ ನೀಡದೇ ಮೌನವಾಗಿದ್ದಾರೆ.

   Aryan Khan drug case: Ajay Devgn refuses to reschedule ad shoot with Shah Rukh Khan

  ಇನ್ನು ಶಾರುಖ್ ಕುಟುಂಬ ಎಷ್ಟೇ ಪ್ರಯತ್ನ ಮಾಡಿದರೂ, ಆರ್ಯನ್ ಖಾನ್‌ಗೆ ಜಾಮೀನು ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಎಷ್ಟೇ ದೊಡ್ಡ ದೊಡ್ಡ ವಕೀಲರ ಸಹಾಯ ಪಡೆದರೂ ಮಗನನ್ನು ಹೊರತರಲು ಸಾಧ್ಯವಾಗುತ್ತಿಲ್ಲ.ವಿಶೇಷ ಎನ್​ಡಿಪಿಎಸ್​ ಕೋರ್ಟ್​ನಲ್ಲಿ ಅವರ ಜಾಮೀನು ಅರ್ಜಿ ರಿಜೆಕ್ಟ್​ ಆಗಿದೆ. ಹಾಗಾಗಿ ಆರ್ಯನ್​ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.​

  English summary
  Did Ajay Devgn refuse to halt shoot for Shah Rukh Khan as had nothing to do with Aryan Khan's arrest?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X