For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟಿ ಆಶಾ ಫಾರೆಕ್‌ಗೆ ಈ ಬಾರಿ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ

  |

  ಸಿನಿಮಾ ರಂಗದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಪ್ರತಿಷ್ಠಿತ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ಈ ಬಾರಿ ಹಿರಿಯ ನಟಿ ಆಶಾ ಫಾರೆಕ್ ಅವರಿಗೆ ನೀಡಲಾಗಿದೆ. ಕಳೆದ ಬಾರಿ ಈ ಪ್ರಶಸ್ತಿಯನ್ನು ಸೂಪರ್ ಸ್ಟಾರ್ ರಜನೀಕಾಂತ್‌ಗೆ ನೀಡಲಾಗಿತ್ತು.

  ಆಶಾ ಫಾರೆಕ್ ಅವರಿಗೆ 2020ನೇ ಸಾಲಿನ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದೆಂದು ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ಮಂಗಳವಾರ ಘೋಷಿಸಿದರು.

  ರಜನೀಕಾಂತ್‌ಗೆ ಮೊದಲ ಫ್ಯಾನ್‌ ಕ್ಲಬ್‌ ಸ್ಥಾಪಿಸಿದ್ದ ಅಭಿಮಾನಿ ಮುತ್ತುಮಣಿ ನಿಧನ ರಜನೀಕಾಂತ್‌ಗೆ ಮೊದಲ ಫ್ಯಾನ್‌ ಕ್ಲಬ್‌ ಸ್ಥಾಪಿಸಿದ್ದ ಅಭಿಮಾನಿ ಮುತ್ತುಮಣಿ ನಿಧನ

  ಗುಜರಾತಿನಲ್ಲಿ 1942ರಲ್ಲಿ ಜನಿಸಿದ ಆಶಾ ಫಾರೆಕ್ ಕೇವಲ ಹತ್ತು ವರ್ಷದವರಾಗಿದ್ದಾನಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 1952 ರಲ್ಲಿ ತೆರೆಕಂಡ ಮಾ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಆಶಾ ಫಾರೆಕ್ ಆ ನಂತರ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು.

  1952 ರಿಂದ 1999 ರವರೆಗೆ ಸತತ 47 ವರ್ಷಗಳ ಕಾಲ ಸಿನಿಮಾಗಳಲ್ಲಿ ನಟಿಸಿರುವ ಆಶಾ ಫಾರೆಕ್, 1999 ರ ಬಳಿಕ ಚಿತ್ರರಂಗದಿಂದ ದೂರ ಉಳಿದರು. 79 ವರ್ಷದ ಆಶಾ ಫಾರೆಕ್ ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.

  1950-60-70 ರ ದಶಕದ ಸ್ಟಾರ್ ನಟರುಗಳೊಂದಿಗೆ ಸಿನಿಮಾಗಳಲ್ಲಿ ನಟಿಸಿರುವ ಆಶಾ ಫಾರೆಕ್‌ ಅವರಿಗೆ ಹಲವು ಫಿಲಂಫೇರ್ ಪ್ರಶಸ್ತಿಗಳು ಸೇರಿದಂತೆ ಪದ್ಮಶ್ರೀ ಗೌರವವೂ ಲಭಿಸಿದೆ. ಇದೀಗ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

  'ದಿಲ್ ದೇಖೋ ದೇಖೊ', 'ಜಿದ್ದಿ', 'ಲವ್ ಇನ್ ಟೋಕಿಯೊ', 'ತೀಸ್ರಿ ಮಂಜಿಲ್', 'ಬಹಾರೋಂಕೆ ಸಪ್ನೆ', 'ಪ್ಯಾರ್ ಕಾ ಮೌಸಮ್', 'ಕನ್ಯಾದಾನ್' ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಆಶಾ ಫಾರೆಕ್ ನಟಿಸಿದ್ದಾರೆ. 1999 ರಲ್ಲಿ ಬಿಡುಗಡೆ ಆದ 'ಸರ್ ಆಂಕೋ ಪಾರ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಆಶಾ ಫಾರೆಕ್ ಕಾಣಿಸಿಕೊಂಡಿದ್ದು, ಅದೇ ಅವರ ಕೊನೆಯ ಸಿನಿಮಾ.

  2019 ಹಾಗೂ 2020 ರಲ್ಲಿ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಿರಲಿಲ್ಲವಾದ್ದರಿಂದ 2019 ರ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ರಜನೀಕಾಂತ್‌ಗೆ ಕಳೆದ ವರ್ಷ ನೀಡಲಾಯಿತು. 2020 ರ ಫಾಲ್ಕೆ ಪ್ರಶಸ್ತಿಯನ್ನು ಆಶಾ ಫಾರೆಕ್ ಅವರಿಗೆ ಈ ವರ್ಷ ನೀಡಲಾಗುತ್ತಿದೆ.

  English summary
  Dada Saheb Phalke Award to be conferred to actor Asha Parekh this year: Union Minister Anurag Thakur.
  Tuesday, September 27, 2022, 16:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X