For Quick Alerts
  ALLOW NOTIFICATIONS  
  For Daily Alerts

  'ಉಡ್ತಾ ಪಂಜಾಬ್' ಚಿತ್ರದ ವಿವಾದ ಎಲ್ಲಿಯವರೆಗೆ ಬಂತು?

  By ಸೋನು ಗೌಡ
  |

  ಬಾಲಿವುಡ್ ನಟ ಶಾಹೀದ್ ಕಪೂರ್, ನಟಿ ಆಲಿಯಾ ಭಟ್, ನಟಿ ಕರೀನಾ ಕಪೂರ್ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ಉಡ್ತಾ ಪಂಜಾಬ್' ಚಿತ್ರದ ಕುರಿತು ವಿವಾದ ಎದ್ದಿರುವ ಕುರಿತ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದೆ.

  ಮುಂದಿನ ವಾರ ಜೂನ್ 13 ರಂದು ಚಿತ್ರದ ವಿವಾದದ ಕುರಿತಾಗಿ ಆದೇಶ ನೀಡುವುದಾಗಿ ನ್ಯಾಯಾಲಯ ಘೋಷಣೆ ಮಾಡಿದೆ.

  ಉಡ್ತಾ ಪಂಜಾಬ್ ಸೆನ್ಸಾರ್ ಕಟ್ ಬಗ್ಗೆ ಉಂಟಾಗಿರುವ ವಿವಾದದ ಕುರಿತು ಫ್ಯಾಂಟಮ್ ಫಿಲ್ಮ್ಸ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಜೂನ್ 10 ರಂದು ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ಸೆನ್ಸಾರ್ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.[ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕಟ್, ಸೆನ್ಸಾರಿಗೆ ಟ್ವೀಟ್ ಪೆಟ್ಟು]

  'ಸಾಮಾನ್ಯವಾಗಿ ಚಿತ್ರಮಂದಿರಗಳಿಗೆ ಬರುವ ಬಹುತೇಕ ಜನರು ಪ್ರೌಢಾವಸ್ಥೆಗೆ ಬಂದಿರುತ್ತಾರೆ. ತಾವು ಏನನ್ನು ನೋಡಬೇಕು ಹಾಗೂ ನೋಡಬಾರದು ಎಂಬ ಆಯ್ಕೆಯನ್ನು ಸೆನ್ಸಾರ್ ಮಂಡಳಿ ಜನರಿಗೆ ನೀಡಬೇಕು' ಎಂದು ನ್ಯಾಯಾಲಯ ಹೇಳಿದೆ.

  ಸಿನಿಮಾದಲ್ಲಿ ಕೆಲವು ನಿಂದನೆ ಮತ್ತು ಆಕ್ಷೇಪಣಾರ್ಹ ಪದಗಳಿವೆ. ಜೊತೆಗೆ ಇನ್ನು ಕೆಲವು ದೃಶ್ಯಗಳು ಅಸಭ್ಯತೆಯಿಂದ ಕೂಡಿದೆ, ಅದಕ್ಕೆ ಕತ್ತರಿ ಹಾಕಬೇಕು. ಹಾಗೂ ಪಾತ್ರಧಾರಿಗಳು ತಮ್ಮ ಕೈಗೆ ಡ್ರಗ್ಸ್ ಚುಚ್ಚಿಕೊಳ್ಳುತ್ತಿರುವ ಕೆಲವು ದೃಶ್ಯಗಳು ಕ್ಲೋಸ್ ಅಪ್ ನಲ್ಲಿದ್ದು, ಅವುಗಳನ್ನು ತೆಗೆದು ಹಾಕಲು ನ್ಯಾಯಾಲಯ ತಿಳಿಸಿದೆ.

  ಇನ್ನು ಸಿನಿಮಾವನ್ನು ಟಿವಿಯಲ್ಲಿ ಅಥವಾ ಚಿತ್ರಮಂದಿರದಲ್ಲಿ ನೋಡಬೇಕೆಂಬುದು ಜನರ ಆಯ್ಕೆಗೆ ಬಿಟ್ಟ ವಿಚಾರ. ಪ್ರತಿಯೊಬ್ಬರಿಗೆ ಅವರದೇ ಆದ ಆಯ್ಕೆ ಅಂತ ಇರುತ್ತದೆ, ಎಂದು ಕೋರ್ಟ್ ವಿಚಾರಣೆಯನ್ನು ಜೂನ್ 13ಕ್ಕೆ ಮುಂದೂಡಿದೆ.

  English summary
  The Bombay High Court on Friday adjourned the hearing of Shahid Kapoor starrer 'Udta Punjab', and said it will pronounce its order on the matter on June 13. The High Court told the CBFC that multiplex audience are mature enough and added that the people should be allowed to see the film as everybody has a choice. Bollywood Actress Alia Bhatt, Bollywood Actress Kareena Kapoor in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X