For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ನಲ್ಲಿ ಡ್ರಗ್ಸ್ ಇದೆ, ಸಲ್ಮಾನ್ ಖಾನ್ ಡ್ರಗ್ಸ್ ವ್ಯಸನಿ: ಬಾಬಾ ರಾಮ್‌ದೇವ್

  |

  2020 ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹೊರಬಿದ್ದಿದ್ದ ಬಾಲಿವುಡ್ ಡ್ರಗ್ಸ್ ಕರ್ಮಕಾಂಡ, ಬಾಲಿವುಡ್‌ಗಿದ್ದ ಘನತೆಯನ್ನು ಬಹುತೇಕ ಮಣ್ಣು ಪಾಲು ಮಾಡಿತು.

  ಬಾಲಿವುಡ್ ಡ್ರಗ್ಸ್ ಪ್ರಕರಣದ ಬಿಸಿ ತುಸು ಕಡಿಮೆ ಆಯಿತು ಎಂದುಕೊಳ್ಳುವಾಗಲೇ ಈಗ ಮತ್ತೆ ಯೋಗಗುರು, ಬಾಬಾ ರಾಮ್‌ದೇವ್ ಅದೇ ವಿಷಯವನ್ನು ಮತ್ತೆ ಕೆದಕಿದ್ದಾರೆ.

  ಮುರಾದಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬಾಬಾ ರಾಮ್‌ದೇವ್, 'ಸಲ್ಮಾನ್ ಖಾನ್ ಮಾದಕ ವಸ್ತು ಸೇವನೆ ಮಾಡುತ್ತಾರೆ. ಆಮಿರ್ ಖಾನ್ ಬಗ್ಗೆ ನನಗೆ ಗೊತ್ತಿಲ್ಲ. ಶಾರುಖ್ ಖಾನ್ ಮಗ ಡ್ರಗ್ಸ್ ಸೇವಿಸುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ. ಬಾಲಿವುಡ್‌ನ ನಟಿಯರು ಯಾರ್ಯಾರು ಡ್ರಗ್ಸ್‌ ಸೇವಿಸುತ್ತಾರೆಂಬುದು ದೇವರಿಗೇ ಗೊತ್ತು'' ಎಂದಿದ್ದಾರೆ ರಾಮ್‌ದೇವ್.

  ''ಇಡೀ ಸಿನಿಮಾ ರಂಗದಲ್ಲಿ ಡ್ರಗ್ಸ್‌ ಬಳಕೆ ಮಿತಿ ಮೀರಿದೆ. ರಾಜಕೀಯದಲ್ಲಿಯೂ ಡ್ರಗ್ಸ್ ಬಳಕೆ ಇದೆ. ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಮದ್ಯ ಹಂಚುತ್ತಾರೆ. ಇದರ ವಿರುದ್ಧವಾಗಿ ನಾವು ಅಭಿಯಾನವೊಂದನ್ನು ಆರಂಭಿಸಬೇಕಿದೆ'' ಎಂದಿದ್ದಾರೆ.

  2020 ರ ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು ಬಂದಿರಲಿಲ್ಲ. ಸಲ್ಮಾನ್ ಖಾನ್, ಮದ್ಯ ಸೇವಿಸುತ್ತಾರೆ ಆದರೆ ಡ್ರಗ್ಸ್ ಸೇವಿಸುವುದಿಲ್ಲ ಎನ್ನಲಾಗುತ್ತದೆ. ಆದರೆ ಈಗ ಬಾಬಾ ರಾಮ್‌ದೇವ್, ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ ಎಂದಿದ್ದಾರೆ. ಸಲ್ಮಾನ್, ಬಾಬಾ ರಾಮ್‌ದೇವ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಾರೆಯೇ ಕಾದು ನೋಡಬೇಕಿದೆ.

  ಸಲ್ಮಾನ್ ಖಾನ್‌ರ ನೆರೆಹೊರೆಯ ಕೇತನ್ ಕಕ್ಕಡ್ ಎಂಬಾತ, ಸಲ್ಮಾನ್ ಖಾನ್‌ ವಿರುದ್ಧ ಮಾನವ ಕಳ್ಳ ಸಾಗಣೆ ಹಾಗೂ ಕೊಲೆ ಆರೋಪ ಹೊರಿಸಿದ್ದರು. ಸಲ್ಮಾನ್ ಖಾನ್‌ರ ಪನ್ವೇಲ್ ಫಾರಂ ಹೌಸ್‌ನಲ್ಲಿ ಸಲ್ಮಾನ್ ಖಾನ್‌ ತಮ್ಮ ವಿರೋಧಿ ನಟರುಗಳ ಹೆಣಗಳನ್ನು ಹೂಳುತ್ತಾರೆ ಎಂದಿದ್ದರು. ಅಲ್ಲದೆ ಅಲ್ಲಿ ಮಕ್ಕಳ ಕಳ್ಳ ಸಾಗಣೆಯೂ ನಡೆಯುತ್ತದೆ ಎಂದಿದ್ದರು. ಕೇತನ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಸಲ್ಮಾನ್ ಖಾನ್ ದಾಖಲಿಸಿದ್ದಾರೆ.

  English summary
  Baba Ramdev said Salman Khan using drugs. He also said many Bollywood actress also use drugs.
  Monday, October 17, 2022, 19:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X