»   » ಯೋಗಾ ಗುರು ಭರತ್ ಠಾಕೂರ್‌ಗೆ ಒಲಿದ ಪ್ರೇಮ ಯೋಗ

ಯೋಗಾ ಗುರು ಭರತ್ ಠಾಕೂರ್‌ಗೆ ಒಲಿದ ಪ್ರೇಮ ಯೋಗ

Subscribe to Filmibeat Kannada

ನಾಸಿಕ್, ಅ.22 : ಬಾಲಿವುಡ್ ತಾರೆ ಭೂಮಿಕ ಚಾವ್ಲ ದಾಂಪತ್ಯ ಜೀವನಕ್ಕೆ ಭಾನುವಾರ (ಅ21) ಅಡಿಯಿಟ್ಟಳು. ನಾಸಿಕ್‌ನ ಗುರುನಾನಕ್ ದೇವ್ ಗುರುದ್ವಾರದಲ್ಲಿ ಅವರ ಸರಳ ವಿವಾಹ ನೆರವೇರಿತು.

ಯೋಗ ಗುರು ಭರತ್ ಠಾಕೂರ್‌ರ ಯೋಗ ತರಗತಿಗಳು ಬೆಂಗಳೂರು, ನವದೆಹಲಿ, ಮುಂಬೈ, ಚೆನ್ನೈ, ದುಬೈ, ರಶ್ಯಾ, ಬೆಲ್ಜಿಯಂ ಹಾಗೂ ನೆದರ್‌ಲ್ಯಾಂಡ್‌‍ನಲ್ಲಿ ಬಹಳಷ್ಟು ಹೆಸರಾಗಿವೆ. 'Yoga for All,' 'Yoga for Family, 'Yoga for Stress Relief,' 'Yoga for Weight Loss,' ಎಂಬ ಪುಸ್ತಕಗಳನ್ನೂ ಬರೆದಿದ್ದಾರೆ ಭೂಮಿಕಳನ್ನು ವರಿಸಿರುವ ಭರತ್ ಠಾಕೂರ್.

'ತೇರೆ ನಾಮ್" ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಭೂಮಿಕ ತೆಲುಗು, ತಮಿಳಿನ ಚಿತ್ರಗಳಲ್ಲೂ ನಟಿಸಿದ್ದಳು. ಬಹಳಷ್ಟು ದಿನಗಳಿಂದ ಯೋಗ ಗುರುವಿನ ಗೆಳತಿಯೂ ಆಗಿದ್ದಳು. ಇವರ ತಂದೆ ಅಜಿತ್‌ಸಿಂಗ್ ಚಾವ್ಲಾ ನಿವೃತ್ತ ಕರ್ನಲ್. ವಿವಾಹ ಕಾರ್ಯಕ್ರಮದಲ್ಲಿ ಸಮೀಪದ ಬಂಧುಗಳು ಮಾತ್ರ ಪಾಲ್ಗೊಂಡಿದ್ದರು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada