»   » ಒಂದೇ ವಾರದಲ್ಲಿ ಇಬ್ಬರು ನಟಿಯರ ಶವ ಪತ್ತೆ

ಒಂದೇ ವಾರದಲ್ಲಿ ಇಬ್ಬರು ನಟಿಯರ ಶವ ಪತ್ತೆ

Posted By:
Subscribe to Filmibeat Kannada

ಭೋಜ್ ಪುರಿ ನಟಿ ಅಂಜಲಿ ಶ್ರೀ ವತ್ಸವ್ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 29 ವರ್ಷದ ಈ ನಟಿಯ ದೇಹ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಅಂಜಲಿ ಶ್ರೀ ವತ್ಸವ್ ಅವರಿಗೆ ಸಂಬಂಧಿಕರು ಮೊಬೈಲ್ ಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನ ಬಂದು, ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ತೆಗೆದಾಗ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅಂಜಲಿ ಮೃತದೇಹ ಕಂಡು ಬಂದಿದೆ.

Bhojpuri Actress Anjali Shrivastav found dead in apartment

ನಟಿ ಅಂಜಲಿ ಶ್ರೀವಾತ್ಸವ್ ಮುಂಬೈನ ಡಿ.ಎನ್.ನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಜುಹು ಸರ್ಕಲ್ ಸಮೀಪದಲ್ಲಿರುವ ಪರಿಮಳ ಅಪಾರ್ಟ್ ಮೆಂಟ್ ನ 5ನೇ ಮಹಡಿಯಲ್ಲಿ ವಾಸವಾಗಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಅಂಜಲಿ ಮೃತದೇಹವನ್ನು ಅಲಹಾಬಾದ್ ಗೆ ಕೊಂಡೊಯ್ಯಲಾಗಿದೆ.

ಇನ್ನು ಕಳೆದ ವಾರವಷ್ಟೇ ಮುಂಬೈನ ಅಂಧೇರಿ ನಗರದಲ್ಲಿ ಬಾಲಿವುಡ್ ನಟಿ ಕೃತಿಕಾ ಚೌದರಿ ಅನುಮಾನಸ್ಪಾದವಾಗಿ ಸಾವುಗೀಡಾಗಿದ್ದರು. ತಮ್ಮ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾಗಿದ್ದರು. ಈಗ ಮತ್ತೋರ್ವ ನಟಿಯ ಸಾವು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.

ಅಂಜಲಿ ಶ್ರೀ ವತ್ಸವ್ ಇತ್ತೀಚೆಗಷ್ಟೇ 'Kehu Ta Dil Mein Ba' ಎಂಬ ಭೋಜ್ ಪುರಿ ಸಿನಿಮಾದಲ್ಲಿ ನಟಿಸಿದ್ದರು. ಇದಕ್ಕು ಮುಂಚೆ ಕೂಡ ಹಲವು ಬೋಜ್ ಪುರಿ ಚಿತ್ರಗಳಲ್ಲಿ ಅಂಜಲಿ ಅಭಿನಯಿಸಿದ್ದರು. 

ಕೊಳೆತ ಶವವಾಗಿ ಪತ್ತೆಯಾದ ಬಾಲಿವುಡ್ ನಟಿ

English summary
A 29-year-old actress allegedly committed suicide in Andheri West, and her body was found by the police on Monday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada